Italy: ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ಮಾರ್ಗದಲ್ಲಿ ನಡೆಸುವ ರಕ್ಷಕರಾಗಿರುತ್ತಾರೆ. ಇವರಿಬ್ಬರ ಸಂಬಂಧ ಬಹಳ ಅಮೂಲ್ಯವಾದದ್ದು. ಉತ್ತಮ ಶಿಕ್ಷಕರು ಮಕ್ಕಳ ತೊಡಕುಗಳನ್ನು ನಿವಾರಿಸಿ ಅವರನ್ನು ಯಶಸ್ವಿಯಾಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ನೀತಿ ಹೇಳಬೇಕಾದ ಶಿಕ್ಷಕರೇ ತಪ್ಪಾದ ಮಾರ್ಗವನ್ನು ಹಿಡಿದಿರುವ ಘಟನೆ ಇಟಲಿಯಲ್ಲಿ (Italy) ನಡೆದಿದೆ.
ಸಾಮಾನ್ಯವಾಗಿ ಶಿಕ್ಷಕರು ತೊಂದರೆಗೆ ಸಿಲುಕಿದಾಗ ಎಷ್ಟು ಸಮಯ ಕೆಲಸವನ್ನು ತಪ್ಪಿಸಬಹುದು? ಬಹುಶಹ ಒಂದು ವಾರ ಅಥವಾ ಒಂದು ತಿಂಗಳು.ಆದರೆ ಇನ್ನೊಬ್ಬ ಶಿಕ್ಷಕಿಯು ತನ್ನ 24 ವರ್ಷಗಳ ವೃತ್ತಿಜೀವನದಲ್ಲಿ ಬರೋಬ್ಬರಿ 20 ವರ್ಷಗಳ ಕಾಲ ರಜೆಯನ್ನು ತೆಗೆದುಕೊಂಡಿದ್ದಾಳೆ. ಅಲ್ಲದೆ ರಜೆ ಹಾಕಿದ ಇಪ್ಪತ್ತು ವರ್ಷಗಳಿಂದಲೂ ಕರ್ತವ್ಯಕ್ಕೆ ಪೂರ್ಣ ಸಂಬಳ ಪಡೆದಿದ್ದಾಳೆ.
ವರದಿ ಪ್ರಕಾರ, ಇಟಲಿಯ ಅತ್ಯಂತ ಕೆಟ್ಟ ಶಿಕ್ಷಕಿ ಎಂದು ಬಣ್ಣಿಸಲಾದ 56 ವರ್ಷದ ಶಿಕ್ಷಕಿ ಸಿಂಜಿಯೊ ಪಾವೊಲಿನಾ ಡಿ ಲಿಯೊ ಕೆಲಸವನ್ನು ತಪ್ಪಿಸುವ ಸಲುವಾಗಿ ಅನಾರೋಗ್ಯ ಅಥವಾ ಕೌಟುಂಬಿಕ ಸಮಸ್ಯೆಗಳ ನೆಪ ಒಡ್ಡಿ ಹೆಚ್ಚಾಗಿ ರಜೆ ತೆಗೆದುಕೊಳ್ಳುತ್ತಿದ್ದಳು. ಹಲವು ಬಾರಿ ಹೊಸದನ್ನು ಕಲಿಯಲು ಸಮ್ಮೇಳನಕ್ಕೆ ಹೋಗುವ ನೆಪದಲ್ಲಿ ನಾಪತ್ತೆಯಾಗುತ್ತಿದ್ದಳು. ಕಣ್ತಪ್ಪಿಸಿ ಮೋಸ ಮಾಡುವವರ ಆಟ ಎಷ್ಟು ದಿವಸ? ಕೆಲವು ದಿನಗಳ ಹಿಂದೆ ಅನಾರೋಗ್ಯದ ಹೆಸರಲ್ಲಿ ರಜೆ ಹಾಕಿದ್ದ ಆಕೆ ಬೀಚ್‌ನಲ್ಲಿ ಮೋಜು ಮಸ್ತಿ ಮಾಡುತ್ತಿದ್ದವಳು ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾಳೆ. ಇದೀಗ ತನ್ನ ಮೋಜು ಮಸ್ತಿಯ ಆಸೆಯಿಂದಾಗಿ ಕೆಲಸವನ್ನೇ ಕಳೆದುಕೊಂಡಿದ್ದಾಳೆ.
ಸಿಂಜಿಯೊ ಪಾವೊಲಿನಾ ಡಿ ಲಿಯೊ ವೆನಿಸ್ ಬಳಿಯ ಮಾಧ್ಯಮಿಕ ಶಾಲೆಯಲ್ಲಿ ಸಾಹಿತ್ಯ ಮತ್ತು ತತ್ತ್ವಶಾಸ್ತ್ರವನ್ನು ಬೋಧಿಸುತ್ತಿದ್ದಳು.ಪ್ರಾರಂಭದಲ್ಲಿ ಒಂದಷ್ಟು ದಿನ ನಿರಂತರವಾಗಿ ಪಾಠ ಹೇಳಿಕೊಟ್ಟ ಈಕೆ ನಂತರ ಅನಾರೋಗ್ಯದ ನೆಪ ಹೇಳಲಾರಂಭಿಸಿದ್ದಾಳೆ.ವಿದ್ಯಾರ್ಥಿಗಳ ಓದಿನ ಬಗ್ಗೆ, ಅವರ ಭವಿಷ್ಯದ ಬಗ್ಗೆ ಆಸಕ್ತಿ ವಹಿಸದೆ ಅವರ ಭವಿಷ್ಯವನ್ನು ಹಾಳು ಮಾಡಿರೋ ಈಕೆಯು ಇಟಲಿಯ ಅತ್ಯಂತ ಕೆಟ್ಟ ಉದ್ಯೋಗಿ ಎಂಬ ಅಪಖ್ಯಾತಿಗೂ ಪಾತ್ರಳಾಗಿದ್ದಾಳೆ.
ಜೂನ್ 22 ರಂದು ಶಾಲೆಯ ವಿದ್ಯಾರ್ಥಿಗಳು ಮುಷ್ಕರ ನಡೆಸಿದ ನಂತರ ಶಿಕ್ಷಕಿಯನ್ನು ಅಂತಿಮವಾಗಿ ವಜಾಗೊಳಿಸಲಾಯಿತು. ಕರ್ತವ್ಯಭ್ರಷ್ಟ ಶಿಕ್ಷಕಿ ಕೂಡ ನ್ಯಾಯಾಲಯದ ಮೆಟ್ಟಿಲೇರಿದ್ದಳು. ವಿಚಾರಣೆ ವೇಳೆ ಆಕೆ ಈ ಕೆಲಸಕ್ಕೆ ಅನರ್ಹಳು ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿದೆ.
ಇದನ್ನು ಓದಿ: Viral vedio: ಬ್ರಾ ಹಾಕಿದ್ದೀಯಾ? ಎಂದ ಯುವಕ – ಲೈವ್ ನಲ್ಲೇ ಬಿಚ್ಚಿ ತೋರಿಸಿ, ಕನ್ಫರ್ಮ್ ಮಾಡಿದ ಯುವತಿ !!
