IDBI Bank: ಹೂಡಿಕೆ ಎಂದಾಗ ಎಲ್ಲರೂ ಫಿಕ್ಸಿಡ್ ಡೆಪಾಸಿಟ್ ನ್ನು ಆಯ್ಕೆ ಮಾಡುತ್ತಾರೆ. ಇದೀಗ ಫಿಕ್ಸಿಡ್ ಡೆಪಾಸಿಟ್ ಸಾಮಾನ್ಯ ನಾಗರಿಕರಿಗೆ ನೀಡುವುದಕ್ಕಿಂತ ಕೊಂಚ ಅಧಿಕ ಬಡ್ಡಿದರವನ್ನು ಹಿರಿಯ ನಾಗರಿಕರಿಗೆ ನೀಡುತ್ತದೆ. ಹೌದು, ಐಡಿಬಿಐ (IDBI Bank) ಬ್ಯಾಂಕ್ ಹಿರಿಯ ನಾಗರಿಕರಿಗಾಗಿ ವಿಶೇಷ ಎಫ್‌ಡಿ ಯೋಜನೆಯನ್ನು ಆರಂಭ ಮಾಡಿದೆ
ಮುಖ್ಯವಾಗಿ 375 ದಿನಗಳಲ್ಲಿ ಮೆಚ್ಯೂರಿಟಿ ಹೊಂದುವ ವಿಶೇಷ ಎಫ್‌ಡಿ ಯೋಜನೆಗೆ ಹಿರಿಯ ನಾಗರಿಕರು ಮಾತ್ರವಲ್ಲ ಸಾಮಾನ್ಯ ನಾಗರಿಕರು ಕೂಡಾ ಅರ್ಹರಾಗಿರುತ್ತಾರೆ. ಇದರಲ್ಲಿ ಸಾಮಾನ್ಯ ನಾಗರಿಕರಿಗೆ ಶೇಕಡ 7.10, ಹಿರಿಯ ನಾಗರಿಕರಿಗೆ ಶೇಕಡ 7.60 ಬಡ್ಡಿದರ ನೀಡಲಾಗುತ್ತದೆ. ಆದರೆ ಆಗಸ್ಟ್ 15, 2023ರವರೆಗೆ ಮಾತ್ರ ಅವಕಾಶವಿರುತ್ತದೆ.
ಹೌದು, ಐಡಿಬಿಐ ಬ್ಯಾಂಕ್ 375 ದಿನಗಳ ಅಮೃತ ಮಹೋತ್ಸವ ಎಫ್‌ಡಿ ಯೋಜನೆಯನ್ನು ಆರಂಭಿಸಿದೆ, ಗರಿಷ್ಠವಾಗಿ ಶೇಕಡ 7.60ರಷ್ಟು ಬಡ್ಡಿದರವನ್ನು ಇದರಲ್ಲಿ ನೀಡಲಾಗುತ್ತದೆ. ಆಗಸ್ಟ್ 15, 2023ರವರೆಗೆ ಈ ವಿಶೇಷ ಎಫ್‌ಡಿ ಜಾರಿಯಲ್ಲಿರಲಿದೆ. ಇದು ಮಾತ್ರವಲ್ಲದೆ ಪ್ರಸ್ತುತ ಜಾಲ್ತಿಯಲ್ಲಿರುವ 444 ದಿನಗಳ ಅಮೃತ ಮಹೋತ್ಸವ ಎಫ್‌ಡಿ ಕಾಲೇಬಲ್ ಆಯ್ಕೆಯಡಿ ಶೇಕಡ 7.65, ನಾನ್ ಕಾಲೇಬಲ್ ಆಯ್ಕೆಯಡಿ ಶೇಕಡ 7.75ರಷ್ಟು ಬಡ್ಡಿದರ ನೀಡುತ್ತದೆ,” ಎಂದು ಐಡಿಬಿಐ ಬ್ಯಾಂಕ್ ತಿಳಿಸಿದೆ.
ಐಡಿಬಿಐ ಬ್ಯಾಂಕ್ ಅಮೃತ ಮಹೋತ್ಸವ ಎಫ್‌ಡಿ ಯೋಜನೆಯನ್ನು ಆರಂಭ ಮಾಡಿದ್ದು, 375 ದಿನಗಳು ಮತ್ತು 444 ದಿನಗಳ ಅವಧಿಯ ಫಿಕ್ಸಿಡ್ ಡೆಪಾಸಿಟ್ ಯೋಜನೆಗಳನ್ನು ಆರಂಭ ಮಾಡಲಾಗಿದೆ. 375 ದಿನಗಳ ಎಫ್‌ಡಿಯಲ್ಲಿ ಹಿರಿಯ ನಾಗರಿಕರು ಶೇಕಡ 7.6ರಷ್ಟು ಬಡ್ಡಿದರ ಪಡೆಯಬಹುದಾಗಿದೆ. ಈ ನಡುವೆ ಸಾಮಾನ್ಯ ನಾಗರಿಕರು ಶೇಕಡ 7ರಷ್ಟು ಬಡ್ಡಿದರ ಪಡೆಯಬಹುದಾಗಿದೆ. ಜುಲೈ 14ರಿಂದ ಆಗಸ್ಟ್ 15ರವರೆಗೆ ಹೂಡಿಕೆ ಮಾಡಲು ಅವಕಾಶವಿದೆ.
ಐಡಿಬಿಐ ಬ್ಯಾಂಕ್‌ನ 444 ದಿನಗಳ ಅಮೃತ ಮಹೋತ್ಸವ ಎಫ್‌ಡಿ ಯೋಜನೆಯಲ್ಲಿ ಎರಡು ಆಯ್ಕೆಗಳು ನಮಗೆ ಲಭ್ಯವಿರುತ್ತದೆ. ಅದುವೆ ಕಾಲೇಬಲ್ ಮತ್ತು ನಾನ್- ಕಾಲೇಬಲ್ ಆಯ್ಕೆಗಳಾಗಿದೆ. ಅಂದರೆ ಮೆಚ್ಯೂರಿಟಿಗೂ ಮುನ್ನ ನಾವು ಮಾಡಿದ ಎಫ್‌ಡಿ ಹೂಡಿಕೆಯನ್ನು ವಿತ್‌ಡ್ರಾ ಮಾಡಿಕೊಳ್ಳುವ ಆಯ್ಕೆ ಇರುವ ಎಫ್‌ಡಿಯು ಕಾಲೇಬಲ್ ಆಗಿರುತ್ತದೆ,
ಇನ್ನು ಮೆಚ್ಯೂರಿಟಿವರೆಗೂ ವಿತ್‌ಡ್ರಾ ಮಾಡಲು ಯಾವುದೇ ಆಯ್ಕೆಯಿಲ್ಲದ ಎಫ್‌ಡಿ ನಾನ್ ಕಾಲೇಬಲ್ ಆಗಿರುತ್ತದೆ. ನಾನ್- ಕಾಲೇಬಲ್ ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಅನ್ನು ನಾವು ಮೆಚ್ಯೂರಿಟಿಗೂ ಮುನ್ನ ವಿತ್‌ಡ್ರಾ ಮಾಡುವ ಅಥವಾ ಮುಚ್ಚುವ ಆಯ್ಕೆಯನ್ನು ಹೊಂದಿರುವುದಿಲ್ಲ. ಆದರೆ ಕೆಲವು ವಿನಾಯಿತಿಗಳು ಈ ನಾನ್- ಕಾಲೇಬಲ್ ಆಯ್ಕೆಯಲ್ಲಿಯೂ ಇದೆ. ನ್ಯಾಯಾಂಗ, ಶಾಸನಬದ್ಧ, ಅಥವಾ ನಿಯಂತ್ರಕ ಅಧಿಕಾರಿಗಳು ನೀಡಿದ ಆದೇಶದಂತೆ ಮೃತಪಟ್ಟ ಎಫ್‌ಡಿದಾರರ ಮೊತ್ತವನ್ನು ಕ್ಲೈಮ್ ಮಾಡುವ ಅವಕಾಶ ಇರುತ್ತದೆ
ನಾನ್ ಕಾಲೇಬಲ್ ಆಯ್ಕೆಯು ಹಿರಿಯ ನಾಗರಿಕರಿಗೆ ಶೇಕಡ 7.75ರಷ್ಟು ಬಡ್ಡಿದರ ನೀಡಿದರೆ ಕಾಲೇಬಲ್ ಆಯ್ಕೆಯಲ್ಲಿ ಶೇಕಡ 7.65ರಷ್ಟು ಬಡ್ಡಿದರವನ್ನು ಪಡೆಯಬಹುದಾಗಿದೆ. ಇನ್ನು ಸಾಮಾನ್ಯ ನಾಗರಿಕರು ನಾನ್ ಕಾಲೇಬಲ್ ಆಯ್ಕೆಗೆ ಶೇಕಡ 7.15ರಷ್ಟು, ಕಾಲೇಬಲ್ ಆಯ್ಕೆಗೆ ಶೇಕಡ 7.25ರಷ್ಟು ಬಡ್ಡಿದರವನ್ನು ಪಡೆಯುತ್ತಾರೆ.
ಇದನ್ನು ಓದಿ: Anand Mahindra: ಇಲ್ಲಿದೆ ನೋಡಿ ಆನಂದ್ ಮಹೀಂದ್ರಾ ಶೇರ್ ಮಾಡ್ಕೊಂಡ ವಿಶಿಷ್ಟ ಕಿಟಕಿ ಕಂ ಬಾಲ್ಕನಿ – Video ರಿಪೋರ್ಟ್ !
