Home » Free Course: IIM ನಲ್ಲಿ ವಿವಿಧ ಉಚಿತ ಕೋರ್ಸುಗಳು ; ಬರೋಬ್ಬರಿ 32 ಕೋರ್ಸುಗಳಲ್ಲಿ ಸಿಗಲಿದೆ ಡಿಪ್ಲೋಮಾ !

Free Course: IIM ನಲ್ಲಿ ವಿವಿಧ ಉಚಿತ ಕೋರ್ಸುಗಳು ; ಬರೋಬ್ಬರಿ 32 ಕೋರ್ಸುಗಳಲ್ಲಿ ಸಿಗಲಿದೆ ಡಿಪ್ಲೋಮಾ !

0 comments
Free Course

Free Course: ಕೋರ್ಸ್ ಮಾಡಲು ಬಯಸುವವರಿಗೆ ಸುವರ್ಣಾವಕಾಶ ಇಲ್ಲಿದೆ. ಐಐಎಂ ಬೆಂಗಳೂರು (IIM Bengaluru) ಕೆಲವು ಉಚಿತ ಕೋರ್ಸ್​ಗಳನ್ನು (Free Course) ನೀಡುತ್ತಿದೆ. ಐಐಎಂ ಬೆಂಗಳೂರು ಇತ್ತೀಚೆಗೆ 32 ಕೋರ್ಸ್‌ಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

IIM ಹಣಕಾಸು ಲೆಕ್ಕಪತ್ರ ನಿರ್ವಹಣೆ, ಕಾರ್ಯಾಚರಣೆ ನಿರ್ವಹಣೆ, ಕಾರ್ಪೊರೇಟ್ ಹಣಕಾಸು ಮತ್ತು ಉದ್ಯಮಶೀಲತೆಯಂತಹ ವಿಷಯಗಳನ್ನು ಒಳಗೊಂಡಿರುವ ಕೋರ್ಸ್‌ಗಳ ಶ್ರೇಣಿಯನ್ನು ನೀಡುತ್ತದೆ. ನಿಮ್ಮ ವೃತ್ತಿಜೀವನವನ್ನು ಮುನ್ನಡೆಸಲು ನೀವು ಕೆಲಸ ಮಾಡುವ ವೃತ್ತಿಪರರಾಗಿರಲಿ ಅಥವಾ ಹೊಸ ವಿಷಯಗಳನ್ನು
ಅನ್ವೇಷಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಯಾಗಿರಲಿ ಈ ಕೋರ್ಸ್ ಉತ್ತಮ ಅವಕಾಶವಾಗಿದೆ.

ಬ್ಯಾಂಕಿಂಗ್ ಮತ್ತು ಫೈನಾನ್ಷಿಯಲ್ ಮಾರ್ಕೆಟ್ಸ್ : ಬ್ಯಾಂಕಿಂಗ್ (banking) ಕ್ಷೇತ್ರದಲ್ಲಿ ಕೌಶಲ್ಯವನ್ನು ವೃದ್ಧಿಸಲು ಬಯಸುವವರಿಗೆ ಬ್ಯಾಂಕಿಂಗ್ ಮತ್ತು ಫೈನಾನ್ಷಿಯಲ್ ಮಾರ್ಕೆಟ್ಸ್ ಕೋರ್ಸ್ ಉತ್ತಮ‌ ಆಯ್ಕೆ. ಈ ಕೋರ್ಸ್ ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದ ಕಾರ್ಯನಿರ್ವಹಣೆಯನ್ನು ವಿವರಿಸುತ್ತದೆ.

ವಿದೇಶೀ ವಿನಿಮಯ ಮಾರುಕಟ್ಟೆಗೆ ಸಂಬಂಧಿಸಿದ ಕೋರ್ಸ್​ :ಈ ಕೋರ್ಸ್ ವಿದೇಶೀ ವಿನಿಮಯ ಮಾರುಕಟ್ಟೆಗಳನ್ನು ನಿರ್ವಹಿಸುವ ಬಗ್ಗೆ ತಿಳಿಸಿಕೊಡುತ್ತದೆ. ಬಡ್ಡಿ ದರ, ಕೊಳ್ಳುವ ಶಕ್ತಿ ಸಮಾನತೆ, ವಿದೇಶಿ ವಿನಿಮಯ ಮೀಸಲು, ಪಾವತಿಗಳ ಸಮತೋಲನ, ಸೆಂಟ್ರಲ್​​ ಬ್ಯಾಂಕ್‌ಗಳಂತಹ ಅಂಶಗಳನ್ನು ಈ ಕೋರ್ಸ್‌ನಲ್ಲಿ ನೀವು ಕಲಿಯಬಹುದು.

ಈಕ್ವಿಟಿ ಷೇರು ಮಾರುಕಟ್ಟೆ : ಈ ಕೋರ್ಸ್ ಮಾಡಲು ಇಚ್ಚಿಸುವವರಿಗೆ ಇದು ಉತ್ತಮ ಅವಕಾಶ. ಈಕ್ವಿಟಿ ಷೇರು ಮಾರುಕಟ್ಟೆಗಳ ರಚನೆ ಮತ್ತು ಕಾರ್ಯನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುವವರು ಈ ಕೋರ್ಸ್ ಮಾಡಬಹುದು. ಇದು ನಿಮ್ಮ ವೃತ್ತಿ ಜೀವನಕ್ಕೆ ಉತ್ತಮ ಅಡಿಪಾಯವಾಗಿದೆ.

ಹೆಚ್ಚಿನ ಮಾಹಿತಿಗಾಗಿ IIM ಬೆಂಗಳೂರು ವೆಬ್‌ಸೈಟ್‌ಗೆ ಭೇಟಿ ನೀಡಿ.

You may also like