Home » Indian railway: ಈ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮೆಲೆ ಗುಡ್ ನ್ಯೂಸ್- ಮತ್ತೊಂದು ಹೊಸ ಭಾಗ್ಯ ಜಾರಿಗೊಳಿಸಿ ಮಹತ್ವದ ಆದೇಶ ಹೊರಡಿಸಿದ ಸರ್ಕಾರ !!

Indian railway: ಈ ಪ್ರಯಾಣಿಕರಿಗೆ ಗುಡ್ ನ್ಯೂಸ್ ಮೆಲೆ ಗುಡ್ ನ್ಯೂಸ್- ಮತ್ತೊಂದು ಹೊಸ ಭಾಗ್ಯ ಜಾರಿಗೊಳಿಸಿ ಮಹತ್ವದ ಆದೇಶ ಹೊರಡಿಸಿದ ಸರ್ಕಾರ !!

by ಹೊಸಕನ್ನಡ
0 comments
Indian railway

Indian railway: ರೈಲು(Tarin) ಪ್ರಯಾಣ ಎಲ್ಲರಿಗೂ ಬಲು ಇಷ್ಟ. ಅಗ್ಗ ಹಾಗೂ ಸುಖಕರವಾದ ಪ್ರಯಾಣ ಎಂದು ಹೆಚ್ಚಿನವರು ಇದನ್ನೇ ಆರಿಸುತ್ತಾರೆ. ಅಂದಹಾಗೆ ಇದೀಗ ತನ್ನ ಪ್ರಯಾಣಿಕರಿಗೆ ರೈಲ್ವೆ ಇಲಾಖೆ(Railway department)ಸಂತೋಷದ ಸುದ್ದಿ ನೀಡಿದೆ.

ಹೌದು, ಇನ್ಮುಂದೆ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇನ್ನು ರೈಲಿನಲ್ಲಿ ಅತೀ ಕಡಿಮೆ ಬೆಲೆಗೆ ಪ್ರಯಾಣಿಕರಿಗೆ ಊಟ, ತಿಂಡಿ ಸಿಗಲಿದೆ. ಹೌದು, 20 ರೂಪಾಯಿಗೆ ತಿಂಡಿ, 50 ರೂಪಾಯಿಗೆ ಊಟ ಹಾಗೂ 3 ರೂಪಾಯಿಗೆ ನೀರಿನ ಬಾಟಲ್‌(Water botel) ನೀಡುವ ಐಆರ್‌ಸಿಟಿಸಿ ಕ್ಯಾಂಟೀನ್‌ ಸೇವೆ ಜಾರಿ ಮಾಡಿದೆ. ಸದ್ಯ ಬೆಂಗಳೂರು ಹಾಗೂ ಹುಬ್ಬಳ್ಳಿ ಸಿಟಿ ರೈಲು ನಿಲ್ದಾಣದಲ್ಲಿ(Indian railway)  ಈ ಕ್ಯಾಂಟೀನ್‌ ಕಾರ್ಯಾರಂಭಿಸಿವೆ.

ಏನಿದು ಹೊಸ ಪ್ಲಾನ್?
ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವವರು ಯಾವಾಗಲೂ ಆಹಾರ ಮತ್ತು ಪಾನೀಯಕ್ಕಾಗಿ ಲೈ ನಿಲ್ದಾಣದಲ್ಲ ಅಲೆದಾಡಬೇಕಾಗುತ್ತದೆ. ಹೀಗಾಗಿ ರೈಲ್ವೆ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗಾಗಿ ಎಕಾನಮಿ ಊಟವನ್ನು ಪ್ರಾರಂಭಿಸಿದೆ. ಜೂನ್ 27, 2023 ರಂದು ರೈಲ್ವೆ ಮಂಡಳಿ ಹೊರಡಿಸಿದ ಪತ್ರದಲ್ಲಿ, ಜಿಎಸ್ ಬೋಗಿಗಳ ಬಳಿಯ ಪ್ಲಾಟ್ಫಾರ್ಮ್ನಲ್ಲಿ ಎಕಾನಮಿ ಊಟವನ್ನು ಒದಗಿಸಲು ಸೂಚನೆಗಳನ್ನು ನೀಡಲಾಗಿದೆ. ಈ ಕೌಂಟರ್ ಗಳ ಸ್ಥಳವನ್ನು ವಲಯ ರೈಲ್ವೆ ನಿರ್ಧರಿಸುತ್ತದೆ.

ಇಷ್ಟೇ ಅಲ್ಲದೆ ಕೆಲವೊಮ್ಮೆ ಜನರಲ್(General)ಬೋಗಿನಲ್ಲಿ ರಶ್ ಇರುವ ಕಾರಣ ಪ್ರಯಾಣಿಕರು ಕೋಚ್ ನಿಂದ ಕೆಳಗಿಳಿಯಲು ಸಾಧ್ಯವಾಗುವುದಿಲ್ಲ. ಹೇಗೋ ಪ್ಲಾಟ್ ಫಾರಂ ಮೇಲೆ ಇಳಿದರೂ ಕ್ಯಾಟರಿಂಗ್ ಸ್ಟಾಲ್ ತಲುಪುವಷ್ಟರಲ್ಲಿ ರೈಲು ಹೊರಡಲು ಶುರುವಾಗುತ್ತದೆ. ಇದರಿಂದಾಗಿ ಹಲವು ಬಾರಿ ಪ್ಲಾಟ್‌ಫಾರ್ಮ್‌(Platform)ಗೆ ಇಳಿದರೂ ಪ್ರಯಾಣಿಕರು ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನರಿಗೆ ಅನುಕೂಲವಾಗಲೆಂದು ಈ ಹೊಸ ಸೌಲಭ್ಯ ನೀಡಲಾಗುತ್ತಿದೆ.

ಫುಡ್ ಲಿಸ್ಟ್‌ನಲ್ಲಿರುವ ಮೆನು ಏನು?
ಭಾರತೀಯ ರೈಲ್ವೇ ಪ್ರಕಾರ, 20 ರೂಪಾಯಿಗೆ ಪೂರಿ, ತರಕಾರಿ ಪಲ್ಯ ಮತ್ತು ಉಪ್ಪಿನಕಾಯಿ ನೀಡುವ ಯೋಜನೆ ಇದೆ. ಇದು 7 ಪೂರಿ ಮತ್ತು 150 ಗ್ರಾಂ ತರಕಾರಿಗಳನ್ನು ಹೊಂದಿರುತ್ತದೆ. ಈ ಸೌಲಭ್ಯದ ಪರಿಚಯದಿಂದ ದೂರದ ಪ್ರಯಾಣ ಮಾಡುವವರಿಗೆ ಅನುಕೂಲವಾಗಲಿದೆ. ಇದಲ್ಲದೆ, ಲಘು ಊಟದ ಬೆಲೆ 50 ರೂ. ಆಗಿರಲಿದೆ. ಈ ಊಟದಲ್ಲಿ ರಾಜ್ಮಾ-ಅನ್ನ, ಖಿಚಡಿ, ಕುಲ್ಚೆ-ಚೋಲೆ, ಚೋಲೆ-ಭಾತುರೆ, ಪಾವ್‌ಬಾಜಿ ಅಥವಾ ಮಸಾಲೆ ದೋಸೆಯನ್ನು ತೆಗೆದುಕೊಳ್ಳಬಹುದು. ಇದರೊಂದಿಗೆ ಪ್ರಯಾಣಿಕರಿಗೆ 200 ಮಿಲಿ ಲೀಟರ್ ನೀರು 3 ರೂ.ಗೆ ಸಿಗಲಿದೆ.

ಯಾವ ನಿಲ್ದಾಣಗಳಲ್ಲಿ ಈ ಸೌಲಭ್ಯ?
ಗೋರಖ್‌ಪುರ ಜಂಕ್ಷನ್ ಸೇರಿದಂತೆ ಕೆಲವು ಪ್ರಮುಖ ನಿಲ್ದಾಣಗಳಲ್ಲಿ ಪ್ರಾಯೋಗಿಕ ಯೋಜನೆ ಯಶಸ್ವಿಯಾದ ನಂತರ ಐಆರ್‌ಸಿಟಿಸಿ ಪ್ಲಾಟ್‌ಫಾರ್ಮ್‌ನಲ್ಲಿ ಜನರಲ್ ಕೋಚ್‌ನ ಮುಂಭಾಗದಲ್ಲಿ ಈ ಸ್ಟಾಲ್ ಅನ್ನು ಸ್ಥಾಪಿಸಲು ಯೋಜನೆಯನ್ನು ಸಿದ್ಧಪಡಿಸಿತ್ತು. ಪ್ರಸ್ತುತ ಈ ಸೌಲಭ್ಯವನ್ನು ವಾಯುವ್ಯ ರೈಲ್ವೆಯ ಫುಲೇರಾ, ಅಜ್ಮೀರ್, ರೇವಾರಿ, ಅಬು ರೋಡ್, ನಾಗೌರ್, ಜೈಪುರ, ಅಲ್ವಾರ್, ಉದಯಪುರ ಮತ್ತು ಅಜ್ಮೀರ್ ನಿಲ್ದಾಣಗಳಲ್ಲಿ ಪ್ರಾರಂಭಿಸಲಾಗಿದೆ. ಇನ್ನು ಕರ್ನಾಟಕದಲ್ಲಿ ಎರಡು ಪ್ರಮುಖ ನಿಲ್ದಾಣಗಳಲ್ಲಿ ಲಭ್ಯವಿದೆ. ಮುಂಬರುವ ದಿನಗಳಲ್ಲಿಈ ಸೇವೆಯನ್ನು ಹೆಚ್ಚಿನ ನಿಲ್ದಾಣಗಳಲ್ಲಿ ವಿಸ್ತರಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಇದನ್ನು ಓದಿ: India’s Richest MLA: ಶ್ರೀಮಂತ ಶಾಸಕರ ಕೆಟಗರಿಯಲ್ಲಿ ಡಿಕೆ ಶಿವಕುಮಾರ್ ಭಾರತದ ನ.1 ಕುಬೇರ ; ಉಳಿದ ಟಾಪ್ 10 ಪಟ್ಟಿ ನೋಡಿ ! 

You may also like

Leave a Comment