Home » Masturbation: ನಿತ್ಯ ಸ್ಖಲನ ಮಾಡೋರಿಗೆ ಇದೆ ಸಕತ್ ನ್ಯೂಸ್, ಇಂಟರೆಸ್ಟಿಂಗ್ ಕಾರ್ಯದ ಬಗ್ಗೆ ಆಸಕ್ತಿಕರ ಮಾಹಿತಿ ಬಹಿರಂಗ !

Masturbation: ನಿತ್ಯ ಸ್ಖಲನ ಮಾಡೋರಿಗೆ ಇದೆ ಸಕತ್ ನ್ಯೂಸ್, ಇಂಟರೆಸ್ಟಿಂಗ್ ಕಾರ್ಯದ ಬಗ್ಗೆ ಆಸಕ್ತಿಕರ ಮಾಹಿತಿ ಬಹಿರಂಗ !

0 comments
Masturbation

Masturbation: ಸಂಗಾತಿಯಿಲ್ಲದೆ ಏಕಾಂತದಲ್ಲಿ ಲೈಂಗಿಕ ಆಸೆಗಳನ್ನು ಈಡೇರಿಸಿಕೊಳ್ಳಲು ಸ್ವತಃ ಜನನಾಂಗ ಉದ್ರೇಕಿಸಿ ಲೈಂಗಿಕ ಪರಾಕಾಷ್ಠೆ ತಲುಪಿ ಸ್ರವಿಸುತ್ತಾರೆ. ಸದ್ಯ ಈ ರೀತಿಯಾಗಿ ಮನುಷ್ಯರಲ್ಲಿ ಒಂದು ರೀತಿ ಲೈಂಗಿಕಕ್ರಿಯೆ ನಡೆಸುವುದು ಸಾಮಾನ್ಯ.

ಸಾಮಾನ್ಯವಾಗಿ ವ್ಯಕ್ತಿಗಳು ಏಕಾಂತದಲ್ಲಿದ್ದಾಗ ಲೈಂಗಿಕ ಕ್ರಿಯೆಯ ಬಯಕೆಯಾಗಿ ಹಸ್ತಮೈಥುನ ದಲ್ಲಿ (Masturbation) ತೊಡಗುವುದು ಸಹಜ. ಆದರೆ ಸಾಕಷ್ಟು ಅಧ್ಯಯನಗಳು ನೀಡಿದ ಫಲಿತಾಂಶದ ಪ್ರಕಾರ ಕ್ರಿಯೆ, ಹಸ್ತ ಮೈಥುನ, ಸ್ವಪ್ನ ಸ್ಖಲನ ಹೀಗೆ ಯಾವುದೇ ರೂಪದಲ್ಲಾದರೂ ವೀರ್ಯಗಳನ್ನು ದೇಹದಿಂದ ಹೊರಹಾಕುವ ಮೂಲಕ ಪ್ರಾಸ್ಟೇಟ್ ಕ್ಯಾನ್ಸರ್ ದೂರವಿರಬಹುದೆಂದು ತಿಳಿದು ಬಂದಿದೆ.

ಹೇಗೆಂದರೆ ಪ್ರಾಸ್ಟೇಟ್ ಗ್ರಂಥಿಯು ಒಂದು ಸೂಕ್ಷ್ಮ ಅಂಗವಾಗಿದೆ, ಇದು ಪುರುಷರ ಜನನಾಂಗದ ಹಿಂಭಾಗದಲ್ಲಿ ಇರುತ್ತದೆ. ಇದು ಪುರುಷರಲ್ಲಿ ವೀರ್ಯದ ಜೊತೆಯಲ್ಲಿ ಪ್ರಾಸ್ಟೇಟ್ ದ್ರವವನ್ನು ಸ್ರವಿಸುವ ಕಾರ್ಯವನ್ನು ಮಾಡುತ್ತದೆ. ಇದು ಕಾಲಕಾಲಕ್ಕೆ ಸ್ರವಿಕೆ ಆಗದೇ ಹೋದರೆ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆಯಿದೆ.

ಹೌದು, 2016ರಲ್ಲಿ ನಡೆದ ಅಧ್ಯಯನವು ಈ ಬಗ್ಗೆ ನಿರ್ದಿಷ್ಟ ಮಾಹಿತಿ ನೀಡಿದೆ. 1992 ರಿಂದ 2010 ರ ಅವಧಿಯಲ್ಲಿ 32000 ಪುರುಷರ ಮೇಲೆ ನಡೆಸಲಾದ ಅಧ್ಯಯನದಲ್ಲಿ 20 ರ ಆಸುಪಾಸಿನಲ್ಲಿರುವ ಪುರುಷರು ತಿಂಗಳಿಗೆ ಕನಿಷ್ಠ 21 ಬಾರಿ ಸ್ಖಲನ ಮಾಡುವವರು ತಿಂಗಳಿಗೆ 7 ಅಥವಾ ಅದಕ್ಕಿಂತ ಕಡಿಮೆ ಸ್ಕಲನ ಮಾಡುವವರಿಗಿಂತ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯದಿಂದ 19 ಪ್ರತಿಶತ ದೂರವಿರುತ್ತಾರೆ.

ಇನ್ನು 40ರ ಆಸುಪಾಸಿನಲ್ಲಿ ಇರುವವರು ಆಗಾಗ ಸ್ಖಲನ ಮಾಡಿದರೂ ಸಹಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯವು ಶೇಕಡಾ 22ರಷ್ಟು ಕಡಿಮೆ ಇರುತ್ತದೆ ಎಂದು ಅಧ್ಯಯನದಲ್ಲಿ ವರದಿಯಾಗಿದೆ.

ಅದಲ್ಲದೆ ನಿಯಮಿತ ಸ್ಖಲನ ಹಾಗೂ ಗರ್ಭಾವಸ್ಥೆಯಲ್ಲಿ ಸುರಕ್ಷಿತವಾದ ಆರೋಗ್ಯ ಸಂಭೋಗವು ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದ ಪ್ರಮುಖ ಲೇಖಕಿ ಜೆನ್ನಿಫರ್ ರೈಡರ್ ಹೇಳಿದ್ದಾರೆ.

ಮುಖ್ಯವಾಗಿ ಆಸ್ಟ್ರೇಲಿಯಾದಲ್ಲಿ 2338 ಮಂದಿ ಪುರುಷರ ಮೇಲೆ ನಡೆಸಲಾದ ಅಧ್ಯಯನದಲ್ಲಿ ಸರಾಸರಿ 4-6 ಬಾರಿ ಸ್ಖಲನ ಮಾಡಿಕೊಳ್ಳುವವರು 70 ವರ್ಷಕ್ಕಿಂತ ಮುಂಚೆಯೇ ಪ್ರಾಸ್ಟೇಟ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಅಪಾಯವು 36 ಪ್ರತಿಶತ ಕಡಿಮೆ ಇರುತ್ತದೆ ಎಂದು ತಿಳಿದು ಬಂದಿದೆ.

 

ಇದನ್ನು ಓದಿ:  AN Shamseer: ಮೊದಲ ಪ್ಲಾಸ್ಟಿಕ್‌ ಸರ್ಜರಿ ನಡೆದದ್ದು ಗಣೇಶನಿಗೆ, ರಾವಣನ ಪುಷ್ಪಕ ವಿಮಾನ – ಎಲ್ಲಾ ಮೂಢನಂಬಿಕೆ ಎಂದಿದ್ದ ಸ್ಪೀಕರ್; ಸ್ಪೀಕರ್ ಕ್ಷಮೆ ಕೇಳಲ್ಲ ಎಂದ ಪಕ್ಷ

You may also like