Home » Mukesh Ambani: ಮುಖೇಶ್ ಅಂಬಾನಿ ಕೊಟ್ಟದ್ದು ಚಿನ್ನದ ತೊಟ್ಟಿಲು, ಆದ್ರೆ ಗಿಫ್ಟ್ ಸಿಕ್ಕಿದ್ದು ಯಾರಿಗೆ ಅನ್ನೋದೇ ವಿಶೇಷ !

Mukesh Ambani: ಮುಖೇಶ್ ಅಂಬಾನಿ ಕೊಟ್ಟದ್ದು ಚಿನ್ನದ ತೊಟ್ಟಿಲು, ಆದ್ರೆ ಗಿಫ್ಟ್ ಸಿಕ್ಕಿದ್ದು ಯಾರಿಗೆ ಅನ್ನೋದೇ ವಿಶೇಷ !

0 comments
Mukesh Ambani

Mukesh Ambani: ಭಾರತದ ಶ್ರೀಮಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಕೇಶ್ ಅಂಬಾನಿ (Mukesh Ambani) ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಯಾರಿಗೆ ಉಡುಗೊರೆ ಕೊಟ್ಟದ್ದು ಗೊತ್ತಾ? ಇಲ್ಲಿದೆ ಇಂಟೆರೆಸ್ಟಿಂಗ್ ಮಾಹಿತಿ.

ಸೂಪರ್​ಸ್ಟಾರ್​ ರಾಮ್​ಚರಣ್​ (Super star ramcharan) ಅವರ ಮುದ್ದಾದ ರಾಜಕುಮಾರಿಯ ನಾಮಕರಣದ ಸಮಾರಂಭಕ್ಕೆ ಭಾರತದ ಶ್ರೀಮಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷರಾದ ಮುಕೇಶ್ ಅಂಬಾನಿ (Mukesh Ambani) ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರ ಬೆಲೆ ಎಷ್ಟು ಗೊತ್ತಾ?

ಚಿರಂಜೀವಿ ಕುಟುಂಬಕ್ಕೆ ಆಪ್ತರಾಗಿರುವ ಮುಕೇಶ್ ಅಂಬಾನಿ ಮತ್ತವರ ಕುಟುಂಬ ವರ್ಗ, ರಾಮ್ ಚರಣ್ ಮತ್ತು ಉಪಾಸನಾ ದಂಪತಿ ಪುತ್ರಿಗೆ ಚಿನ್ನದ ತೊಟ್ಟಿಲನ್ನು ಉಡುಗೊರೆಯಾಗಿ ನೀಡಿದ್ದಾರೆ. ಅದರ ಬೆಲೆ ಬರೋಬ್ಬರಿ ಒಂದು ಕೋಟಿ ರೂ. ಎಂದು ಹೇಳಲಾಗಿದೆ.

ಟಾಲಿವುಡ್ ಸ್ಟಾರ್ ರಾಮ್ ಚರಣ್ (Ram charan) ಮತ್ತು ಪತ್ನಿ ಉಪಾಸನಾ (Upasana) ದಂಪತಿ ಮದುವೆಯಾಗಿ ಸುಮಾರು 11 ವರ್ಷಗಳ ಬಳಿಕ ಹೆಣ್ಣು ಮಗುವಿಗೆ ತಂದೆ ತಾಯಿಯಾಗಿದ್ದಾರೆ. ಸದ್ಯ ರಾಮ್ ಚರಣ್ (Ramcharan- Upasana) ದಂಪತಿ ಪುತ್ರಿ ನಾಮಕರಣ ಸಮಾರಂಭಕ್ಕೆ ಅದ್ದೂರಿ ಸಿದ್ಧತೆ ನಡೆಯುತ್ತಿದೆ. ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಉಪಾಸನಾ ಅವರ ಪೋಷಕರ ಮನೆಯಲ್ಲಿ ನಾಮಕರಣದ ಸಮಾರಂಭ ನಡೆಯಲಿದೆ.

 

ಇದನ್ನು ಓದಿ: Belthangadi: ಬೆಳ್ತಂಗಡಿ: 27 ಹರೆಯದ ಯುವ ವೈದ್ಯ ಹೃದಯಾಘಾತಕ್ಕೆ ಬಲಿ 

You may also like

Leave a Comment