Different Village: ಈ ಒಂದು ಊರು ಬಹಳ ಸಣ್ಣದಾದರೂ ಇಡೀ ಜಗತ್ತಿಗೆ ವಿಚಿತ್ರ ಊರಿನ (Different Village) ಪರಿಚಯ ಆಗಲೇ ಬೇಕು. ಹೌದು, ಈ ಊರಿನ ಒಂದು ಸಣ್ಣ ಪದ್ಧತಿ ಎಲ್ಲರನ್ನು ಬೆಚ್ಚಿ ಬೀಳಿಸುತ್ತದೆ. ಈ ಊರಿನ ಹೆಸರು ದೆವ್ವ ಗ್ರಾಮ ವಂತೆ. ಏನಿದು ದೆವ್ವ ಗ್ರಾಮ ನೋಡೋಣ.
ರಾಂಚಿಯಿಂದ ಸುಮಾರು 40 ಕಿಮೀ ದೂರದಲ್ಲಿರುವ ಖುಂಟಿ ಜಿಲ್ಲೆಯಲ್ಲಿ ಈ ದೆವ್ವ ಗ್ರಾಮವಿದ್ದು ಪ್ರತಿ ಮನೆಯ ಹೊರಗೆ ಸಮಾಧಿಗಳನ್ನು ನಿರ್ಮಿಸಲಾಗುತ್ತದೆಯಂತೆ.
ಈ ಗ್ರಾಮದಲ್ಲಿ ಸುಮಾರು 300ಕ್ಕೂ ಹೆಚ್ಚು ಮನೆಗಳಿದ್ದು, ಪ್ರತಿ ಮನೆಯ ಹೊರಗೆ ಸಮಾಧಿ ಇದೆ ಎನ್ನುತ್ತಾರೆ. ಭೂತಹಳ್ಳಿಯ ನಿವಾಸಿ ಪ್ರಕಾಶ್ ಪ್ರಕಾರ ವಾಸ್ತವವಾಗಿ ಇದು ನಮ್ಮ ಪೂರ್ವಜರ ಸಮಾಧಿಯಾಗಿದೆ, ಅವರನ್ನು ನಾವು ದೆವ್ವ ಎಂದು ಕರೆಯುತ್ತೇವೆ. ಈ ಗ್ರಾಮಕ್ಕೆ ಅವರ ಹೆಸರನ್ನೂ ಇಡಲಾಗಿದೆ ಎಂದು ಅವರು ಹೇಳುತ್ತಾರೆ.
ನಮ್ಮ ಬುಡಕಟ್ಟು ಸಮಾಜದಲ್ಲಿ ದೇವರನ್ನು ಭೂತ ಎಂದು ಕರೆಯಲಾಗುತ್ತದೆ ಆದ್ದರಿಂದ ಈ ಎಲ್ಲಾ ಸಮಾಧಿಗಳು ನಮ್ಮ ಪೂರ್ವಜರಿಗೆ ಇದೆ ಮತ್ತು ನಾವು ಅವರನ್ನು ದೇವರಂತೆ ಪೂಜಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇಲ್ಲಿನ ನಂಬಿಕೆ ಪ್ರಕಾರ ಪ್ರೇತಗಳನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ. ಈ ಸಂಪ್ರದಾಯ ಅನಾದಿಕಾಲದಿಂದ ನಡೆದುಕೊಂಡು ಬಂದಿದ್ದು, ಯಾವುದೇ ಕಾರ್ಯ ನಡೆಯಬೇಕಿದ್ದರೂ ಅಲ್ಲಿನ ಗ್ರಾಮಸ್ಥರು ಸಮಾಧಿಗೆ ಪೂಜೆ ಮಾಡಲೇಬೇಕು.
ಈ ಸಮಾಧಿಯಿಂದ ಸತ್ತವರಿಗೆ ಸಿಗಬೇಕಾದ ಗೌರವ ಸಿಗುತ್ತದೆ. ಅದಕ್ಕಾಗಿಯೇ ನಾವು ನಮ್ಮ ಮನೆಗಳ ಮುಂದೆ ಸಮಾಧಿಗಳನ್ನು ನಿರ್ಮಿಸುತ್ತೇವೆ. ಮುಖ್ಯವಾಗಿ ನಾವು ಮೊದಲು ನಮ್ಮ ಹಿರಿಯರಿಗೆ ಆದ್ಯತೆ ನೀಡುತ್ತೇವೆ. ಮನೆಯನ್ನು ಪ್ರವೇಶಿಸುವ ಮೊದಲು ನಾವು ನಮ್ಮ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ತೆಗೆದುಕೊಳ್ಳುತ್ತೇವೆ ಎಂದು ಪ್ರಕಾಶ್ ಹೇಳುತ್ತಾರೆ.
