Home » Leonardo DiCaprio-Neelam gil: ಭಾರತೀಯ ಮಾಡಲ್ ಜೊತೆ ಟೈಟಾನಿಕ್ ಹೀರೊನ ಲವ್ವಿ ಡವ್ವಿ..!! ಈ ಸುಂದರನ ಮನ ಗೆದ್ದ ಆ ಸುರಸುಂದರಾಗಿ ಯಾರು?

Leonardo DiCaprio-Neelam gil: ಭಾರತೀಯ ಮಾಡಲ್ ಜೊತೆ ಟೈಟಾನಿಕ್ ಹೀರೊನ ಲವ್ವಿ ಡವ್ವಿ..!! ಈ ಸುಂದರನ ಮನ ಗೆದ್ದ ಆ ಸುರಸುಂದರಾಗಿ ಯಾರು?

by ಹೊಸಕನ್ನಡ
0 comments
Leonardo DiCaprio-Neelam gil

Leonardo DiCaprio-Neelam gil: ಇಡೀ ಜಗತ್ತೇ ಮನಸೋತ ‘ಟೈಟಾನಿಕ್'(Titanic) ಸಿನಿಮಾದಿಂದ ಜಗತ್ತಿನಾದ್ಯಂತ ತನ್ನ ಅಭಿಮಾನಿಗಳನ್ನು ಸಂಪಾದಿಸಿರೋ ಸ್ಟಾರ್ ನಟ ಬಗ್ಗೆ ಪ್ಯಾರಿಸ್‌(Paris)ನಲ್ಲಿ ಸುದ್ದಿ ಹರಿದಾಡುತ್ತಿದೆ. ಅದೂ ಕೂಡ ಆ ಗಾಸಿಪ್ ಭಾರತ ಮೂಲದ ನಾರಿಯೊಂದಿಗೆ ತಗಲಾಕಿಕೊಂಡಿದೆ.

ಹೌದು, ಹಾಲಿವುಡ್ ನ(Hollywood) ಖ್ಯಾತ ನಟ, ಟೈಟಾನಿಕ್(Titanic) ಚಿತ್ರದ ಹೀರೋ ಲಿಯೋನಾರ್ಡೊ ಡಿಕ್ಯಾಪ್ರಿಯೋ(Leonardo DiCaprio-Neelam gil) ಬಗ್ಗೆ ಇದೀಗ ಹೊಸ ಗುಸು ಗುಸು ಶುರುವಾಗಿದೆ. ಅದೂ ಕೂಡ ಈ ಮ್ಯಾಟರ್ ಭಾರತಕ್ಕೆ ಸಂಬಂಧಿಸಿದೆ. ಯಾಕೆಂದರೆ ಭಾರತೀಯ ಮೂಲದ ಮಾಡೆಲ್ ನೀಲಂ ಗೀಲ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ವಿಚಾರ ಹಾಲಿವುಡ್ ರಂಗದಲ್ಲಿ ಗಿರಕಿ ಹೊಡೆಯುತ್ತಿದ್ದು, ಪದೇ ಪದೇ ನೀಲಂ ಗೀಲ್(Neelam gil) ಜೊತೆ ಲಿಯೋನಾರ್ಡೊ ಕಾಣಿಸಿಕೊಳ್ಳುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ಅಂದಹಾಗೆ ಒಂದು ತಿಂಗಳ ಹಿಂದಷ್ಟೇ ಲಿಯೊನಾರ್ಡೊ ಡಿಕಾಪ್ರಿಯೋ ತಾಯಿ ಭಾರತೀಯ ಮೂಲದ ಮಾಡಲ್ ನೀಲಂ ಗಿಲ್‌ರನ್ನು ಭೇಟಿ ಮಾಡಿದ್ದರು. ಇಲ್ಲಿಂದ ಇಬ್ಬರ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಪದೇ ಪದೇ ಒಟ್ಟಿಗೆ ಹಲವಾರು ಕಡೆ ಕಾಣಿಸಿಕೊಂಡಿರುವ ಈ ಜೋಡಿ ಇತ್ತೀಚೆಗಷ್ಟೇ ನಡೆದ ಔತಣಕೂಟದಲ್ಲಿ ಒಟ್ಟಿಗೆ ಭಾಗಿಯಾಗಿದ್ದರು. ಪ್ಯಾರಿಸ್(Paris) ನಲ್ಲಿರುವ ಹೋಟೆಲ್ ನಲ್ಲಿ ಈ ಜೋಡಿ ತಡರಾತ್ರಿ ಊಟಕ್ಕಾಗಿ ಬಂದಿತ್ತು ಎಂದು ಹೇಳಲಾಗುತ್ತಿದೆ. ಇವರ ಜೊತೆ ಡಿಕಾಪ್ರಿಯೊ ಕುಟುಂಬದ ಸದಸ್ಯರು ಕೂಡ ಇದ್ದರು ಎಂದು ವರದಿಯಾಗಿದೆ.

ಅಲ್ಲದೆ ಎರಡೂ ಕುಟುಂಬಗಳು ಅನೇಕ ಬಾರಿ ಡಿನ್ನರ್ ಗೆ ಸೇರಿದ್ದರಂತೆ ನೀಲಂ ಮತ್ತು ಡಿಕಾಪ್ರಿಯೋ ಲವ್ ಇನ್ ಸಂಬಂಧದಲ್ಲಿ ಇದ್ದಾರೆ ಎಂದೂ ಹೇಳಲಾಗುತ್ತಿದೆ. ಆದರೆ, ನೀಲಂ ಆಗಲಿ ಡಿಕಾಪ್ರಿಯೋ ಆಗಲಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಒಟ್ಟೊಟ್ಟಿಗೆ ಕಾಣಿಸಿಕೊಳ್ಳುವುದು ಮಾತ್ರ ಬಿಟ್ಟಿಲ್ಲ.

ಈ ಸುಂದರನ ಮನಸ್ಸು ಕದ್ದ ಚೆಲುವೆ ಯಾರಿವಳು?
ಹಾಲಿವುಡ್‌ ಸೂಪರ್‌ಸ್ಟಾರ್ ಲಿಯೊನಾರ್ಡೊ ಡಿಕಾಪ್ರಿಯೊ ಅಂತಹ ನಟನ ಮನಸ್ಸು ಕದ್ದಿರೋ ಬ್ಯೂಟಿ ಬಗ್ಗೆ ಜಗತ್ತೇ ತಲೆ ಕೆಡಿಸಿಕೊಂಡಿದೆ. 28 ವರ್ಷದ ಮಾಡಲ್ ನೀಲಂ ಗಿಲ್ ಇಂಗ್ಲೆಂಡ್‌ನಲ್ಲಿ ಜನಿಸಿದ್ದು, ಆಕೆಯ ಕುಟುಂಬ ಲಂಡನ್‌ನಲ್ಲಿ(Landon)ವಾಸವಿದೆ. ನೀಲ್ ಗಿಲ್ ಅಜ್ಜ-ಅಜ್ಜಿ ಭಾರತದ ಪಂಜಾಬ್(Panjab) ಮೂಲದವರು. ಆದರೂ, ನೀಲಂ ಗಿಲ್ ತಂದೆ-ತಾಯಿ ಹುಟ್ಟಿದ್ದು ಮಾತ್ರ ಲಂಡನ್‌ನಲ್ಲಿಯೇ. ಈಕೆ ಚಿಕ್ಕವಳಿದ್ದಾಗಳೇ ಪೋಷಕರು ವಿಚ್ಛೇದನ ಪಡೆದಿದ್ದರು. ಬಳಿಕ ತಾಯಿಯೇ ಈಕೆಯನ್ನು ಬೆಳೆಸಿದ್ದಾರೆ.

ಇನ್ನು ನೀಲಂ ಗಿಲ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಬೆಂಬಲಿಗರನ್ನು ಹೊಂದಿದ್ದಾರೆ. ತನ್ನನ್ನು “ಬ್ರಿಟಿಷ್ ಪಂಜಾಬಿ ಮಾಡಲ್” ಎಂದು ಬಿಂಬಿಸಿಕೊಂಡಿದ್ದರು.

You may also like

Leave a Comment