Home » Woman marries Lord Shiva: ಸಾಕ್ಷಾತ್​​ ಶಿವನನ್ನೇ ಶಾಸ್ತ್ರೋಕ್ತವಾಗಿ, ಮದುವೆಯಾದ ಯುವತಿ, ವೈರಲ್ ಆಯ್ತು ಫೋಟೋಸ್!

Woman marries Lord Shiva: ಸಾಕ್ಷಾತ್​​ ಶಿವನನ್ನೇ ಶಾಸ್ತ್ರೋಕ್ತವಾಗಿ, ಮದುವೆಯಾದ ಯುವತಿ, ವೈರಲ್ ಆಯ್ತು ಫೋಟೋಸ್!

by Mallika
0 comments
Woman marries Lord Shiva

Woman marries Lord Shiva: ಶ್ರದ್ಧಾಭಕ್ತಿಯಿಂದ ದೇವರನ್ನು ಪೂಜಿಸಿದರೆ ಖಂಡಿತವಾಗಿಯೂ ಅವರು ಒಲಿದು ಬರುವರು ಎನ್ನುವ ನಂಬಿಕೆಯಿದೆ. ಪರಮ ಭಕ್ತಿಯಿಂದ ಭಗವಂತನನ್ನು ತನ್ನ ಪತಿಯಾಗಿ ಸ್ವೀಕರಿಸಿದ ಮೀರಾಬಾಯಿ, ಅಕ್ಕಮಹಾದೇವಿಯಂತಹ ಮಹಾನ್ ಭಕ್ತರ ಕಥೆಯನ್ನು ನಾವು ಕೇಳಿದ್ದೇವೆ. ಇದೀಗ ಯುವತಿಯೊಬ್ಬಳು ಪರಮದೈವ ಶಿವನನ್ನು (Woman marries Lord Shiva) ತನ್ನ ಪತಿಯಾಗಿ ಸ್ವೀಕರಿಸಿ, ವಿವಾಹವಾಗಿದ್ದಾಳೆ.

ಹೌದು, ಉತ್ತರ ಪ್ರದೇಶದ(Uttar Pradesh) ಝಾನ್ಸಿ ಜಿಲ್ಲೆಯಲ್ಲಿ ಈ ಅಪರೂಪದ ಘಟನೆ ನಡೆದಿದೆ. ಗೋಲ್ಡಿ ಹೆಸರಿನ ಯುವತಿ ಶಿವನನ್ನೇ ತನ್ನ ಪತಿಯೆಂದು ಸ್ವೀಕರಿಸಿದ್ದಾಳೆ. ಇದರಿಂದಾಗಿ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಝಾನ್ಸಿ ಜಿಲ್ಲೆಯ ಅನ್ನಪೂರ್ಣ ಕಾಲೋನಿಯವರಾದ ಯುವತಿ ಮತ್ತು ಆಕೆಯ ಪೋಷಕರು ಹಲವು ವರ್ಷಗಳಿಂದ ಬ್ರಹ್ಮಕುಮಾರಿ ಆಶ್ರಮದ ಸದಸ್ಯರಾಗಿದ್ದಾರೆ. ಬ್ರಹ್ಮಕುಮಾರಿ ಜೊತೆಗೆ ಒಡನಾಟ ಹೊಂದಿದ್ದ ಗೋಲ್ಡಿ ಶಿವನ ಮೇಲೆ ಅಪಾರ ಭಕ್ತಿ, ಪ್ರೇಮಿ ಬೆಳೆಸಿಕೊಂಡಿದ್ದಳು.

ತನ್ನ ಜೀವನವನ್ನು ಶಿವನಿಗಾಗಿ(Lord Shiva) ಅರ್ಪಿಸಲು ನಿರ್ಧರಿಸಿದ ಯುವತಿ, ಭಗವಾನ್ ಶಿವನ ಮೇಲಿನ ಭಾವಪರವಶ ಭಕ್ತಿಯಿಂದ, ಯುವತಿ ಮದುವೆಯಾಗಲು (Marriage) ಪೋಷಕರಲ್ಲಿ ಒತ್ತಾಯಿಸಿದ್ದಾಳೆ. ಇದರಿಂದ ಏನೂ ಮಾಡಲಾಗದೆ ಪಾಲಕರೂ ಶಿವನ ಜೊತೆಗಿನ ತಮ್ಮ ಮಗಳ ಮದುವೆಗೆ ಒಪ್ಪಿಗೆ ಸೂಚಿಸಿದ್ದು ,ಶಾಸ್ತ್ರೋಸ್ತ್ರವಾಗಿ ಮಗಳ ಮದುವೆಯನ್ನು ಅವರ ಕುಟುಂಬಸ್ಥರು ಅದ್ದೂರಿಯಾಗಿ ಮಾಡಿದರು.

ಚಿಕ್ಕಂದಿನಿಂದಲೂ ಶಿವನ ಆರಾಧಕಳಾಗಿದ್ದ ಈಕೆ, ಶಿವನಂತಹಾ ಪತಿಯೇ ಬೇಕೆಂಬ ಆಸೆಯನ್ನು ಬೆಳೆಸಿಕೊಂಡಿದ್ದಳು. ಇತ್ತೀಚಿಗೆ ಪೋಷಕರು ಈಕೆಯನ್ನು ವಿವಾಹವಾಗಲು ಹೇಳಿದಾಗ ಶಿವನನ್ನು ವರಿಸುವುದಾಗಿ ಹೇಳಿದ್ದಾಗಿ ತಿಳಿದುಬಂದಿದೆ. ಪೋಷಕರು ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ ಅಂದಿದ್ದಾರೆ. ಒಂದು ತಿಂಗಳ ಹಿಂದೆಯೇ ಮದುವೆ ಸಿದ್ಧತೆಗಳನ್ನು ಆರಂಭಿಸಲಾಗಿತ್ತು. ಮದುವೆಯ ಆಮಂತ್ರಣ ಪತ್ರಗಳನ್ನು ಮುದ್ರಿಸಲಾಯಿತು ಮತ್ತು ಎಲ್ಲಾ ಸಂಬಂಧಿಕರನ್ನು ಆಹ್ವಾನಿಸಲಾಯಿತು.

ಜುಲೈ 23 ಭಾನುವಾರ ಸಂಜೆ 5 ಗಂಟೆ ಮುಹೂರ್ತದಲ್ಲಿ, ಗೋಲ್ಡಿ ಹಾಗೂ ಶಿವನ ಮದುವೆ ಬಡಗಾಂವ ದ್ವಾರದ ಹೊರಗಿನ ಕಲ್ಯಾಣ ಮಂಟಪದಲ್ಲಿ(Marriage hall) ನಡೆದಿದೆ. ವಧು ಶಿವಲಿಂಗಕ್ಕೆ ವರಮಾಲೆವನ್ನು ಅರ್ಪಿಸಿ, ತನ್ನ ಪತಿಯಾಗಿ ಸ್ವೀಕರಿಸಿದಳು. ಶಿವಲಿಂಗ ಮತ್ತು ಯುವತಿಯನ್ನು ರಥದ ಮೇಲೆ ಬೀದಿ ಉದ್ದಕ್ಕೂ ಮೆರವಣಿಗೆ ಮಾಡಲಾಯಿತು. ಜನರು ಅಕ್ಷತೆ ಹಾಕಿ ಆಶೀರ್ವದಿಸಿದರು

You may also like

Leave a Comment