Home » Rakshith shetty: ‘ಆ ಮ್ಯಾಟರ್’ಗೋಸ್ಕರ ರಶ್ಮಿಕಾ ಜೊತೆ ಇನ್ನೂ ಟಚ್‌ನಲ್ಲಿದ್ದೇನೆ, ಅದು ನಡಿತನೂ ಇದೆ – ಅಚ್ಚರಿಯ ಹೇಳಿಕೆ ನೀಡಿದ ರಕ್ಷಿತ್ ಶೆಟ್ಟಿ

Rakshith shetty: ‘ಆ ಮ್ಯಾಟರ್’ಗೋಸ್ಕರ ರಶ್ಮಿಕಾ ಜೊತೆ ಇನ್ನೂ ಟಚ್‌ನಲ್ಲಿದ್ದೇನೆ, ಅದು ನಡಿತನೂ ಇದೆ – ಅಚ್ಚರಿಯ ಹೇಳಿಕೆ ನೀಡಿದ ರಕ್ಷಿತ್ ಶೆಟ್ಟಿ

5 comments
Rakshith shetty

Rakshith shetty: ರಶ್ಮಿಕಾ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ(Rakshith shetty) ನಡುವೆ ನಡೆದ ಘಟನೆಗಳು ಎಲ್ಲರಿಗೂ ತಿಳಿದೇ ಇದೆ. ಅದನ್ನು ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ. ರಕ್ಷಿತ್ ಜೊತೆ ನಿಶ್ಚಿತಾರ್ಥ ಮುರಿದುಕೊಂಡ ಬಳಿಕ ರಶ್ಮಿಕಾ ವೃತ್ತಿ ಬದುಕಿನ ಬಗ್ಗೆ ಹೆಚ್ಚು ಗಮನ ಹರಿಸಿದ್ದರು. ಇತ್ತ ರಕ್ಷಿತ್ ಕೂಡ ಸಿನಿಮಾದಲ್ಲಿ ಬ್ಯುಸಿಯಾಗಿಬಿಟ್ಟರು. ಬ್ರೇಕಪ್ ಬಳಿಕ ಇಬ್ಬರೂ ನಾನೊಂದು ತೀರ.. ನೀನೊಂದು ತೀರದಂತಾಗಿದ್ದಾರೆಂದು ಭಾವಿಸಿದ್ದರು. ಆದ್ರೀಗ ರಕ್ಷಿತ್ ಶೆಟ್ಟಿ ತಾವಿಬ್ಬರೂ ಟಚ್‌ನಲ್ಲಿ ಇದ್ದೇವೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಹೌದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshit Shetty) ಕಳೆದ ವರ್ಷ ‘777 ಚಾರ್ಲಿ’ ಮೂಲಕ ಪ್ಯಾನ್ ಇಂಡಿಯಾ ಸದ್ದು ಮಾಡಿದ್ರು. ಈಗ ‘ಸಪ್ತಸಾಗರದಾಚೆ ಎಲ್ಲೋ’ (Saptasagaradacche Yello) ಸಿನಿಮಾ ಸಕ್ಸಸ್ ಕಂಡಿದೆ. ಕನ್ನಡದಲ್ಲಿ ಯಶಸ್ಸು ಕಂಡ ಬೆನ್ನಲ್ಲೇ ತೆಲುಗು ವರ್ಷನ್‌ನಲ್ಲೂ ಮನು-ಪ್ರಿಯಾ ಕಥೆ ರಿಲೀಸ್ ಆಗಿದೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ರಕ್ಷಿತ್ ಬ್ಯುಸಿಯಾಗಿದ್ದಾರೆ. ಈ ವೇಳೆ, ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ರಕ್ಷಿತ್ ಈಗಲೂ ಸಂಪರ್ಕದಲ್ಲಿದ್ದಾರಾ? ರಶ್ಮಿಕಾ ಬೆಳವಣಿಗೆ ಅವರ ಅಭಿಪ್ರಾಯವೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ.

ಅಂದಹಾಗೆ ಸಿನಿಮಾದ ಪ್ರಚಾರದಲ್ಲಿದ್ದಾಗ, ರಶ್ಮಿಕಾ ಬಗ್ಗೆ ಪ್ರಶ್ನೆ ಎದುರಾಗಿದೆ. ರಕ್ಷಿತ್ ಶೆಟ್ಟಿ ಈಗಲೂ ರಶ್ಮಿಕಾ ಅವರೊಟ್ಟಿಗೆ ಸಂಪರ್ಕದಲ್ಲಿದ್ದಾರಾ?’ ಎಂಬ ಪ್ರಶ್ನೆಯನ್ನು ಯೂಟ್ಯೂಬರ್ ಒಬ್ಬರು ಕೇಳಿದ್ದಾರೆ. ಪ್ರಶ್ನೆಗೆ ಉತ್ತರಿಸಿದ ನಟ ರಕ್ಷಿತ್ ಶೆಟ್ಟಿ, ”ಹೌದು, ನಾವು ಸಂಪರ್ಕದಲ್ಲಿದ್ದೇವೆ. ಆಕೆಗೆ ಸದಾ ದೊಡ್ಡ ಕನಸುಗಳಿದ್ದವು, ಆ ಕನಸುಗಳನ್ನು ಈಗ ಸಾಕಾರಗೊಳಿಸಿಕೊಳ್ಳುತ್ತಿದ್ದಾರೆ. ಅದು ನಿತ್ಯವೂ ಆಗುತ್ತಿದೆ. ಅದನ್ನು ಕಂಡು ನಾನು ಸಂತೋಷ ಪಡುತ್ತಿದ್ದೇನೆ. ಅವರ ಸಾಧನೆಗೆ ಭೇಷ್ ಎನ್ನಲೇ ಬೇಕು. ಕೆಲಸವನ್ನು ಸಾಧಿಸುವ ಛಲ ಅವರಿಗಿದೆ. ಅವರ ಸಾಧನೆಗೆ ಬೆನ್ನುತಟ್ಟಲೇ ಬೇಕುಎಂದಿದ್ದಾರೆ ರಕ್ಷಿತ್ ಶೆಟ್ಟಿ. ಈ ಹಿಂದೆಯೂ ರಶ್ಮಿಕಾ ಬಗ್ಗೆ ಪ್ರಶ್ನೆ ಎದುರಾದಾಗೆಲ್ಲ ರಕ್ಷಿತ್ ಶೆಟ್ಟಿ ಇದೇ ಘನತೆಯಿಂದಲೇ ಉತ್ತರ ನೀಡಿದ್ದಾರೆ.

ಇತ್ತ ಅದೇ ಸಂದರ್ಶನದಲ್ಲಿ ರುಕ್ಮಿಣಿ ವಸಂತ್‌ ಸಹ ಭಾಗವಹಿಸಿದ್ದರು. ಈ ವೇಳೆ ಪ್ರೇಮಕಥೆಯ ಸಿನಿಮಾ ಪ್ರಚಾರದಲ್ಲಿ, ರುಕ್ಮಿಣಿಗೆ ಪ್ರೇಮನಿವೇದನೆ ಮಾಡುವಂತೆ ರಕ್ಷಿತ್‌ಗೆ ನಿರೂಪಕರು ಕೇಳಿದ್ದಾರೆ. ಕೈಯಲ್ಲಿ ಗುಲಾಬಿ ಹಿಡಿದು ಪ್ರಪೋಸ್‌ ಸಹ ಮಾಡಿದ್ದಾರೆ. ಹೀಗೆ ಸಾಗಿದ ಮಾತುಕತೆಯಲ್ಲಿ ಕನ್ನಡ ಸಿನಿಮಾಗಳು, ತಮ್ಮ ಮುಂದಿನ ಸಿನಿಮಾಗಳು, ನಿರ್ದೇಶನದ ಚಿತ್ರಗಳ ಬಗ್ಗೆಯೂ ರಕ್ಷಿತ್‌ ಮಾತನಾಡಿದ್ದಾರೆ.

ಇನ್ನು ‘ಸಪ್ತ ಸಾಗರಾಲು ದಾಟಿ’ ಸಿನಿಮಾದ ಸಂದರ್ಶನ ಆಗಿದ್ದರೂ, ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಮಂದಣ್ಣ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಮದುವೆ, ರಶ್ಮಿಕಾ ಮಂದಣ್ಣ ಬಗ್ಗೆ ಓಪನ್ ಆಗಿ ಮತಾಡಿರೋ ರಕ್ಷಿತ್ ಕೊನೆಯಲ್ಲಿ ರುಕ್ಮಿಣಿಗೆ ಪ್ರಪೋಸ್ ಕೂಡ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

 

ಇದನ್ನು ಓದಿ: Aadhaar Card: ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರಿಗೆ ಮಹತ್ವದ ಮಾಹಿತಿ- ಇನ್ಮುಂದೆ ಅಪ್ಡೇಟ್ ಮಾಡಿಸಲು ಈ ದಾಖಲೆ ಕಡ್ಡಾಯ !!

You may also like

Leave a Comment