Jio Recharge Plan: ಭಾರತದ ಟೆಲಿಕಾಂ ಕಂಪನಿಗಳಲ್ಲಿ (Telecom Companies) ಅಗ್ರಸ್ಥಾನದಲ್ಲಿರುವ ಜಿಯೋ ರಿಲಯನ್ಸ್ (JIO), ಗ್ರಾಹಕರ ಮನಸೆಳೆಯಲು ಪ್ರತಿ ಬಾರಿಯು ಹೊಚ್ಚ ಹೊಸ ಆಫರ್ ಗಳನ್ನು ನೀಡುತ್ತಿದೆ. ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಪೈಪೋಟಿಯಲ್ಲಿ ಮುನ್ನುಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ನೀಡುವುದರ ಜೊತೆಗೆ ದೀರ್ಘಾವಧಿಯ ವ್ಯಾಲಿಡಿಟಿ ಯೋಜನೆಗಳ (Jio Recharge Plan) ಆಯ್ಕೆಗಳನ್ನೂ ನೀಡುತ್ತಿದೆ.
ಇದೀಗ ಜಿಯೋ ಗ್ರಾಹಕರಿಗೆ ಭರ್ಜರಿ ಗುಡ್’ನ್ಯೂಸ್ ನೀಡಿದೆ. ಕಂಪನಿ ಪೋಸ್ಟ್‌ಪೇಯ್ಡ್ ಚಂದಾದಾರರನ್ನು ಸೆಳೆಯಲು ಭರ್ಜರಿ ಆಫರ್‌ವೊಂದನ್ನು ಘೋಷಿಸಿದೆ. ಹೌದು, ರಿಲಯನ್ಸ್ ಜಿಯೋ ಕಂಪನಿಯು ಇದೀಗ ಹೊಸ ಜಿಯೋ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಉಚಿತ ಪ್ರಾಯೋಗಿಕ ಆಫರ್ ಅನ್ನು ಪರಿಚಯಿಸಿದೆ. ಈ ಕೊಡುಗೆಯು ನೂತನ ಜಿಯೋ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯ ಇರಲಿದೆ. ಈ ಕೊಡುಗೆಯಲ್ಲಿನ ಪೋಸ್ಟ್ಪೇಯ್ಡ್ ವೈಯಕ್ತಿಕ ಹಾಗೂ ಫ್ಯಾಮಿಲಿ ಪೋಸ್ಟ್ ಪೇಯ್ಡ್ ಯೋಜನೆಗಳು ಸೇರಿವೆ.
ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ ಮೂರು ಪೋಸ್ಟ್ ಪೇಯ್ಡ್ ಯೋಜನೆಗಳೊಂದಿಗೆ ಉಚಿತ ಕೊಡುಗೆಯನ್ನು ನೀಡುತ್ತಿದೆ. ಅವುಗಳು ಕ್ರಮವಾಗಿ ಜಿಯೋ 399ರೂ ಮತ್ತು ಜಿಯೋ 699ರೂ.
ಈ ಎರಡು ಪೋಸ್ಟ್‌ಪೇಯ್ಡ್ ಫ್ಯಾಮಿಲಿ ಯೋಜನೆಗಳಾಗಿವೆ. ಹಾಗೆಯೇ ಜಿಯೋ 599ರೂ. ವೈಯಕ್ತಿಕ ಯೋಜನೆ ಆಗಿದೆ. ಈ ಪ್ರೀಪೇಯ್ ಯೋಜನೆಗಳಲ್ಲಿ ಒಂದನ್ನು 30 ದಿನಗಳವರೆಗೆ ಉಚಿತವಾಗಿ ಬಳಕೆ ಮಾಡಬಹುದಾಗಿದೆ.
ಜಿಯೋ 599ರೂ. ಪೋಸ್ಟ್ಪೇಯ್ಡ್ ಯೋಜನೆ :
ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಸೌಲಭ್ಯ ಲಭ್ಯವಾಗಲಿದೆ. ಜೊತೆಗೆ ಅನ್ನಿಮಿಟೆಡ್ ಕರೆ ಮಾಡುವ ಮತ್ತು ಎಸ್ಎಮ್‌ಎಸ್ ಕಳುಹಿಸುವ ಅವಕಾಶವು ಸಿಗಲಿದೆ. ಗ್ರಾಹಕರಿಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯವಾಗಲಿವೆ.
ಜಿಯೋ 399ರೂ. ಪೋಸ್ಟ್ಪೇಯ್ಡ್ ಯೋಜನೆ :
ಈ ಯೋಜನೆಯಲ್ಲಿ ಗ್ರಾಹಕರಿಗೆ 75 GB ಡೇಟಾದೊಂದಿಗೆ ಅನಿಮಿಟೆಡ್ ಕರೆ ಮಾಡುವ ಮತ್ತು ಎಸ್ಎಮ್‌ಎಸ್ ಕಳುಹಿಸುವ ಅವಕಾಶವು ಲಭ್ಯವಾಗಲಿದೆ. ಈ ಯೋಜನೆಯಲ್ಲಿ 3 ಆಡ್ ಆನ್ ಫ್ಯಾಮಿಲಿ ಸಿಮ್‌ಗಳ ಆಯ್ಕೆ ಸಹ ಇದ್ದು, ಪ್ರತಿ ಸಿಮ್‌ಗೆ 5 GB ಡೇಟಾ ದೊರೆಯುತ್ತದೆ. ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಲಭ್ಯ.
ಜಿಯೋ 699ರೂ. ಪೋಸ್ಟ್ ಪೇಯ್ಡ್ ಯೋಜನೆ :
ಜಿಯೋ 699ರೂ ಯೋಜನೆಯಲ್ಲಿ 100 GB ಡೇಟಾದೊಂದಿಗೆ ಅನ್ಲಿಮಿಟೆಡ್ ವಾಯಿಸ್ ಕರೆ ಸೌಲಭ್ಯ ಸಿಗಲಿದೆ. ಜೊತೆಗೆ ಎಸ್‌ಎಮ್‌ಎಸ್ ಕಳುಹಿಸುವ ಅವಕಾಶವು ದೊರೆಯಲಿದೆ. ಈ ಯೋಜನೆಯಲ್ಲಿ 3 ಆಡ್ ಆನ್ ಫ್ಯಾಮಿಲಿ ಸಿಮ್‌ಗಳ ಆಯ್ಕೆ ಇದ್ದು, ಎಲ್ಲ ಸಿಮ್‌ಗಳಿಗೆ ತಲಾ 5 GB ಡೇಟಾ ಖಚಿತ ಲಭ್ಯವಾಗಲಿದೆ. ಈ ಪೋಸ್ಟ್ಪೇಯ್ಡ್ ಯೋಜನೆಯಲ್ಲಿ ಹೆಚ್ಚುವರಿಯಾಗಿ ಓಟಿಟಿ, ಫ್ರಿ ಅಮೆಜಾನ್ ಪ್ರೈಮ್ ಸದಸ್ಯತ್ವ ಮತ್ತು ಉಚಿತ ಅಮೆಜಾನ್ ಪ್ರೈಮ್ ಸದಸ್ಯತ್ವ ಸಹ ದೊರೆಯುತ್ತದೆ. ಇದರ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸಾವನ್ ಹಾಗೂ ಅನ್‌ಲಿಮಿಟೆಡ್ ಕಾಲರ್ ಟ್ಯೂನ್ ಸೌಲಭ್ಯಗಳು ಸಹ ಸಿಗುತ್ತದೆ.
ಇದನ್ನು ಓದಿ: Baby Mute Mask: ಇನ್ಮುಂದೆ ಮಗು ಅಳುತ್ತೆ ಅಂತ ಚಿಂತೆ ಬೇಡ, ಟಿವಿ ಸೌಂಡ್ ಥರ ಭಾವನೆ ಮ್ಯೂಟ್ ಮಾಡೋ ಮಶೀನ್ ಬಂದಿದೆ
