Home » ಕಡಬ: ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಯುವ ಬ್ರಿಗೇಡ್‌ನಿಂದ ಸರ್ಕಾರಕ್ಕೆ ಮನವಿ

ಕಡಬ: ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಯುವ ಬ್ರಿಗೇಡ್‌ನಿಂದ ಸರ್ಕಾರಕ್ಕೆ ಮನವಿ

by Praveen Chennavara
0 comments
Kadaba

ಕಡಬ: ಟಿ.ನರಸೀಪುರದಲ್ಲಿ ಹಿಂದೂ ಕಾರ್ಯಕರ್ತ ಯುವ ಬ್ರಿಗೇಡ್‌ನ ವೇಣುಗೋಪಾಲ್ ಹಾಗೂ ಚಿಕ್ಕೋಡಿಯಲ್ಲಿ ಜೈನ ಮುನಿಗಳ ಅವರ ಬರ್ಬರ ಹತ್ಯೆಯನ್ನು ಖಂಡಿಸಿ ಮತ್ತು ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಕಡಬ ಯುವಬ್ರಿಗೇಡ್ ವತಿಯಿಂದ ಕಡಬ ತಹಶೀಲ್ದಾರ ಮುಖಾಂತರ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಎರಡು ಹತ್ಯೆಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಂತೆ ಮಾಡಿದ್ದು ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂಗಳ ರಕ್ಷಣೆ ಮತ್ತು ಕೊಲೆಗಡುಕರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ. ಉಪಹಸೀಲ್ದಾರ್ ಮನೋಹರ ಕೆ.ಟಿ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಡಬ ಯುವ ಬ್ರಿಗೇಟ್ ತಂಡದ ಪ್ರಮುಖರಾದ ಯಶೋಧರ ಎನ್, ತೀರ್ಥೇಶ್ ಮರ್ಧಾಳ, ಗಿರೀಶ್ ಕಡಬ, ಮಿಥುನ್ ಕಡಬ, ಕಿರಣ್ ಕುಮಾರ್, ಸಂತೋಷ್ ಕುಮಾರ್, ಶಿವಕುಮಾರ್ ಕೆ, ಗಗನ್ ರೈ ಕಡಬ, ಪ್ರಶಾಂತ್ ಕಡಬ, ಪ್ರಸಾದ್ ಕಡಬ ಮತ್ತಿತರರು ಉಪಸ್ಥಿತರಿದ್ದರು.

 

ಇದನ್ನು ಓದಿ: Rakhi Sawant: ರಾಹುಲ್ ಗಾಂಧಿ ಪ್ರಧಾನಿ ಆಗಬೇಕಾ ? ಹೀಗೆ ಮಾಡಿ ಸಾಕು – ರಾಖಿ ಸಾವಂತ್ ಕೊಟ್ಳು ಬ್ಯೂಟಿಫುಲ್ ಟಿಪ್ಸ್ ! 

You may also like

Leave a Comment