CM Siddaramaiah: ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನಿನ್ನೆಯ ರಾಜ್ಯ ಬಜೆಟ್ನಲ್ಲಿ ಮದ್ಯದ ಮೇಲಿನ ತೆರಿಗೆ ಹೆಚ್ಚಳವಾಗಲಿದೆ ಎನ್ನುವ ಮೂಲಕ ಮದ್ಯ ಪ್ರಿಯರಿಗೆ ಶಾಕ್ ನೀಡಿದ ಸುದ್ದಿ ಎಲ್ಲರಿಗೂ ತಿಳಿದೇ ಇದೆ.
ಬಜೆಟ್ ಬಳಿಕ ಈ ಬಗ್ಗೆ ಮಾತನಾಡಿದ ಸಿಎಂ, ಮದ್ಯ ತೆರಿಗೆ ಸಂಗ್ರಹದ ಗುರಿ ಹೆಚ್ಚು ಮಾಡಿದ್ದೇವೆ. 35,450 ಕೋಟಿ ಸಾಲ ಸರಿದೂಗಿಸಲು ತೆರಿಗೆ ಹೆಚ್ಚಿಸಿದ್ದೇವೆ ಎಂದು ಸಿದ್ದರಾಮಯ್ಯನವರು ಹೇಳಿಕೊಂಡಿದ್ದಾರೆ. “ಮಹಿಳೆಯರಿಗೆ ಮಾತ್ರ ಎಲ್ಲಾ ಬೆನಿಫಿಟ್ ಗ್ಯಾರೆಂಟಿಗಳು. ಗಂಡಸರಿಗೆ ಬೆನಿಫಿಟ್ ಬೇಡ, ಅಟ್ ಲೀಸ್ಟ್ ಅವರನ್ನು ಬದುಕಲು ಬಿಡಲಿ.” ಎನ್ನುವ ಮಾತು ಕೇಳಿಬಂದಿತ್ತು. ಅದಕ್ಕೆ ಸಿದ್ದರಾಮಯ್ಯ ಉತ್ತರಿಸಿದ್ದಾರೆ.
” ಅಬಕಾರಿ ತೆರಿಗೆ, ವಾಣಿಜ್ಯ ನೋಂದಣಿ, ಮುದ್ರಾಂಕ, ಗಣಿಗಾರಿಕೆಯಲ್ಲಿ ತೆರಿಗೆ ಹೆಚ್ಚು ಮಾಡಿದ್ದೇವೆ. ಗಂಡಸರು ಬಳಸುವ ಬಿಯರ್, ವಿಸ್ಕಿ ಬಾಟಲಿಗಳಿಗೂ ತೆರಿಗೆ ಹೆಚ್ಚಿಸಲಾಗಿದೆ. ಹಾಗಂತ ನಾನೇನು ಪುರುಷರ ವಿರೋಧಿ ಅಲ್ಲ. ಬರೀ ಗಂಡಸರೇ ಮದ್ಯ ಕುಡಿಯೋದಾ?” ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ ಸಿದ್ದರಾಮಯ್ಯ.
” ನಾನು ಸಾಮಾನ್ಯರು ಹಾಗೂ ಬಡಜನರ ಮೇಲೆ ತೆರಿಗೆ ಹಾಕಿಲ್ಲ. ಜಿಎಸ್ಟಿ ಮೇಲೆ ಯಾವುದು ತೆರಿಗೆ ಹೆಚ್ಚಿಸಿಲ್ಲ. ಪೆಟ್ರೋಲ್, ಡಿಸೇಲ್ ಮೇಲೆ ಕೂಡಾ ತೆರಿಗೆ ಹೆಚ್ಚಿಸಿಲ್ಲ. ಆಲ್ಲದೆ, ಬಡವರಿಗೆ ಅಂತ ಮಾಡಿ, ಈಗ ಮುಚ್ಚಿದ್ದ ಇಂದಿರಾ ಕ್ಯಾಂಟೀನ ಗಳನ್ನು ತೆರೆಯಲು ಸೂಚಿಸಿದ್ದೇನೆ. ಇದರ ಜೊತೆಗೆ ಮತ್ತಷ್ಟು ಹೊಸ ಇಂದಿರಾ ಕ್ಯಾಂಟೀನ್ ತೆರೆಯಲೂ ಹೇಳಿದ್ದೇವೆ. ಮಕ್ಕಳಿಗೆ ಶಾಲೆಯಲ್ಲಿ ವಾರಕ್ಕೆ ಎರಡು ದಿನ ಚಿಕ್ಕಿ, ಬಾಳೆಹಣ್ಣು ಅಥವಾ ಮೊಟ್ಟೆ ಕೊಡಲು ಉದ್ದೇಶಿಸಿದ್ದೇವೆ. ಅರಿವು ಕಾರ್ಯಕ್ರಮದ ಅಡಿಯಲ್ಲಿ ಉನ್ನತ ಶಿಕ್ಷಣದ ಅಡಿ ವಿದೇಶಕ್ಕೆ ಹೋಗಲು ಇಚ್ಛಿಸುವ ಮಕ್ಕಳಿಗೆ 20 ಲಕ್ಷ ಶೂನ್ಯ ಬಡ್ಡಿ ಸಾಲ ನೀಡಲಾಗುವುದು” ಎಂದು ಸಿದ್ದರಾಮಯ್ಯನವರು ವಿವರಿಸಿದರು.
