Liquor Rate: ರಾಜ್ಯ ಸರ್ಕಾರವು ಮಧ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಲೇ ಬರುತ್ತಿದೆ. ಇದೀಗ ಮತ್ತೆ ರೇಟ್ ಹೆಚ್ಚಳ ಮಾಡಿದೆ. ಕರ್ನಾಟಕದಲ್ಲಿ (Karnataka) ಮದ್ಯದ ದರ ಭಾರೀ ಹೆಚ್ಚಳವಾಗಿದೆ. ಕರ್ನಾಟಕದ ‘ಎಣ್ಣೆ’ ಇಡೀ ದೇಶದಲ್ಲೇ ದುಬಾರಿ (Liquor Rate) ಹಾಗಾದ್ರೆ ಉಳಿದ ರಾಜ್ಯದಲ್ಲಿ ಎಷ್ಟೆಷ್ಟು ಹೆಚ್ಚು? ಇಲ್ಲಿದೆ ಮಾಹಿತಿ!.
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಶುಕ್ರವಾರದಂದು ತಮ್ಮ 14ನೇ ಬಜೆಟ್ ಮಂಡಿಸಿದ್ದು, ಬಜೆಟ್ ನಲ್ಲಿ (Karnataka Budget 2023) ವಿವಿಧ ಇಲಾಖೆಗಳಿಗೆ ಅನುದಾನ ಘೋಷಿಸಿದ್ದಾರೆ. ಜೊತೆಗೆ ಮಧ್ಯಪ್ರಿಯರಿಗೆ ಶಾಕ್ ನೀಡಿದ್ದಾರೆ. ಈಗ ಇರುವ ಮದ್ಯ ಸುಂಕಕ್ಕೆ ಹೆಚ್ಚುವರಿ ಅಬಕಾರಿ ಸುಂಕವನ್ನು (ಎಇಡಿ) 20%ದಷ್ಟು ಹೆಚ್ಚಿಸುವ ಪ್ರಸ್ತಾಪವನ್ನು ಮಾಡಿದರು. ಅದರಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20ರಿಂದ ಜಾರಿಗೆ ಬರಲಿದೆ.
ಸದ್ಯ ಕರ್ನಾಟಕವು ಪ್ರೀಮಿಯಂ ಮದ್ಯದ ಬ್ರ್ಯಾಂಡ್‌ಗಳಿಗೆ ದೇಶದ ಅತ್ಯಂತ ದುಬಾರಿ ರಾಜ್ಯವಾಗಿ ಹೊರಹೊಮ್ಮಿದೆ. ಕರ್ನಾಟಕದಲ್ಲಿನ ಮದ್ಯದ ಬೆಲೆಯನ್ನು ಇತರ ರಾಜ್ಯಗಳ ಬೆಲೆಯೊಂದಿಗೆ ಹೋಲಿಸಿದಾಗ ಕೆಲವು ಕಡಿಮೆ ಬೆಲೆಯ ಬ್ರ್ಯಾಂಡ್‌ಗಳು ಸಹ ಈಗ ಇಲ್ಲಿ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಸ್ಲ್ಯಾಬ್ (ಒಂದು ದೊಡ್ಡ ಬಾಟಲಿಯ ಲೀಟರ್‌ಗೆ 449 ರೂ.ವರೆಗಿನ ಬ್ಯಾಂಡ್ ಹೊಂದಿರುವ ಕಡಿಮೆ ಸ್ಲ್ಯಾಬ್ಗಳು ) ಹೊರತುಪಡಿಸಿ, ಇತರ ಎಲ್ಲಾ ಬ್ರಾಂಡ್‌ಗಳು ಕರ್ನಾಟಕದಲ್ಲಿ ತುಂಬಾ ದುಬಾರಿಯಾಗಿದೆ. 78%ದಷ್ಟು ಜನರು ಕಡಿಮೆ ಬ್ರಾಂಡ್ನ ಬಿಯರ್ಗಳನ್ನು ಖರೀದಿ ಮಾಡಿದರೆ, ಇನ್ನೂ 5%ದಷ್ಟು ಜನ ಉನ್ನತ ಮಟ್ಟದ ಬ್ರಾಂಡ್ನ ಬಿಯರ್ಗಳನ್ನು ಖರೀದಿ ಮಾಡುತ್ತಾರೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿನಲ್ಲಿ ಇದೆ ಬ್ರಾಂಡ್ಗೆ 210 ರೂ. ದೆಹಲಿಯಲ್ಲಿ 190ರೂ. ಕರ್ನಾಟಕದಲ್ಲಿ 650mಗೆ 187 ರೂ. ಇದೆ. ಈ ಮೂಲಕ ಬಿಯರ್ ಬೆಲೆ ಏರಿಕೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ.
ಕರ್ನಾಟಕ ಸರ್ಕಾರ ಈಗಾಗಲೇ ಒಂದು ಬಿಯರ್ ಬಾಟಲಿಗೆ 175ರಿಂದ 185ಕ್ಕೆ ಹೆಚ್ಚಿಸಿದೆ. ಇನ್ನೂ 600m ಬಿಯರ್ ಬಾಟಲಿಗೆ 170ರಿಂದ 187ಕ್ಕೆ ಏರಿಕೆ ಮಾಡಿದೆ. ಈ ಕಾರಣಕ್ಕೆ ಬಿಯರ್ ಬೆಲೆ ಏರಿಕೆಯಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ, ತಮಿಳುನಾಡು ಮೊದಲು ಸ್ಥಾನ, ದೆಹಲಿ ಎರಡನೇ ಸ್ಥಾನ ಪಡೆದುಕೊಂಡಿದೆ.
ರಾಜ್ಯದಲ್ಲಿ ಪ್ರೀಮಿಯಂ ಬ್ರಾಂಡ್‌ಗಳು ದುಬಾರಿಯಾಗಿದೆ. ಸ್ಲ್ಯಾಬ್ ಬ್ರಾಂಡ್ಗಳಿಗೆ ಮಾತ್ರ ಕಡಿಮೆಯಾಗಿದೆ. ಆದರೆ ಇದನ್ನು ಮತ್ತೆ ಹೆಚ್ಚು ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಸಗಟು ವ್ಯಾಪಾರಿಗಳಾದ ಕರ್ನಾಟಕ ಸ್ಟೇಟ್ ಬೆವರೇಜ್ ಕಾರ್ಪೊರೇಷನ್ ಲಿಮಿಟೆಡ್ (ಕೆಎಸ್‌ಬಿಸಿಎಲ್ ) ಮದ್ಯ ಮಾರಾಟ ಮಾಡುವ ಬೆಲೆಯನ್ನು ಹೆಚ್ಚಿಸಿದೆ. ಟಾಪ್-ಮೋಸ್ಟ್ ಸ್ಲ್ಯಾಬ್ ಪ್ರತಿ ಬಲ್ಕ್ ಲೀಟರ್‌ಗೆ 15,001ರೂ. ಕ್ಕಿಂತ ಹೆಚ್ಚು ಬೆಲೆಯ ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.
