Home » Snake: ಮನೆಯ ಸುತ್ತಮುತ್ತ ಹಾವುಗಳ ಕಾಟವೇ? ತಡೆಗಟ್ಟಲು ಇಲ್ಲಿದೆ ನಿಮಗೊಂದು ಈಜಿ ಟಿಪ್ಸ್‌

Snake: ಮನೆಯ ಸುತ್ತಮುತ್ತ ಹಾವುಗಳ ಕಾಟವೇ? ತಡೆಗಟ್ಟಲು ಇಲ್ಲಿದೆ ನಿಮಗೊಂದು ಈಜಿ ಟಿಪ್ಸ್‌

0 comments
Snake

Snake: ಹಾವುಗಳನ್ನು ಕಂಡರೆ ಬಹುತೇಕರಿಗೆ ಭಯವೇ ಹೆಚ್ಚು. ಯಾಕೆಂದರೆ ವಿಷ ಜಂತುಗಳು ಎಷ್ಟೇ ಆದರು ತನಗೆ ತೊಂದರೆ ಆದರೆ ತನ್ನನ್ನು ರಕ್ಷಿಕೊಳ್ಳಲು ಕಚ್ಚುವುದು ಪ್ರಕೃತಿ ನಿಯಮ. ಅದರಲ್ಲೂ ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಇನ್ನು ಮಳೆಗಾಲದಲ್ಲಿ ಹಾವುಗಳು ಮತ್ತು ವಿಷಕಾರಿ ಕೀಟಗಳ ಅಪಾಯ ಹೆಚ್ಚು. ವಿಶೇಷವಾಗಿ ಈ ಅವಧಿಯಲ್ಲಿ, ವಿಷಕಾರಿ ಹಾವುಗಳು ಹೆಚ್ಚು ಸಂಚಾರದಲ್ಲಿರುತ್ತವೆ. ಕೆಲವೊಮ್ಮೆ ಅವು ಮನೆಯೊಳಗೂ ಕಾಣಿಸುತ್ತವೆ.

ಸದ್ಯ ಹಾವುಗಳು ಮನೆ ಹತ್ತಿರ ಬರದ ಹಾಗೆ ಮಾಡಲು ಇಲ್ಲಿದೆ ಸುಲಭ ಉಪಾಯ.

ನಿಂಬೆ ರಸದೊಂದಿಗೆ ಕೆಂಪು ಮೆಣಸು ಅಥವಾ ಸುಣ್ಣದ ಪುಡಿಯನ್ನು ಬೆರೆಸಿ ಮನೆಯ ಸುತ್ತಲೂ ಸಿಂಪಡಿಸಬಹುದು. ಹಾವುಗಳು ಆ ಜಾಗಕ್ಕೆ ಬರುವುದಿಲ್ಲ. ಕೊಳೆತ ಈರುಳ್ಳಿಯನ್ನು ಮನೆಯ ಸುತ್ತಲೂ ಚೆಲ್ಲಿದರೂ ಸಾಕು. ಹಾವುಗಳು ಆ ಕಡೆಗೆ ಸುಳಿಯುವುದಿಲ್ಲ.

ಲೆಮನ್ ಗ್ರಾಸ್ ನಿಂದ ಹಾವುಗಳು ಕೂಡ ಮನೆ ಹತ್ತಿರ ಬರುವುದಿಲ್ಲ. ಇದರಲ್ಲಿ ಸಾಕಷ್ಟು ಉತ್ತಮ ಗುಣಗಳಿವೆ. ಇವುಗಳನ್ನು ಮನೆ ಸುತ್ತಮುತ್ತ ಬೆಳೆಯುವುದರಿಂದ ಕೀಟಗಳು, ಹಾವುಗಳ ಹಾವಳಿ ಕಡಿಮೆಯಾಗುತ್ತದೆ.

ಸರ್ಪಗಂಧದ ಗಿಡವೂ ಹಾವುಗಳನ್ನು ಓಡಿಸಲು ಸಹಕಾರಿಯಾಗಿದೆ. ಇದನ್ನು ಮಡಕೆಯಲ್ಲಿ ಅಥವಾ ನೆಲದಲ್ಲಿ ನೆಡಬಹುದು. ಈ ಗಿಡದ ವಾಸನೆ ತುಂಬಾ ಕಟುವಾಗಿದ್ದು ಹಾವುಗಳು ಹತ್ತಿರ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ.

ಬೆಳ್ಳುಳ್ಳಿ ಕೂಡ ಇಂತಹ ಸರಿಸೃಪಗಳನ್ನು ಮನೆಯಿಂದ ದೂರವಿಡುವುದಕ್ಕೆ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಸಲ್ಲೋನಿಕ್ ಎಂಬ ಆಯಸಿಡ್ ಇರುತ್ತದೆ. ಈ ಕಾರಣಕ್ಕೆ ಹಾವುಗಳು ಹತ್ತಿರ ಬರುವುದಿಲ್ಲ. ಕಿಟಕಿ, ಬಾಗಿಲಿನ ಸಂಧಿ, ಗಾರ್ಡನಿಂಗ್ ಜಾಗದಲ್ಲಿ ಬೆಳ್ಳುಳ್ಳಿಯ ಲಿಕ್ವಿಡ್ ಅನ್ನು ಸೈ ಮಾಡಿದರೆ ಹಾವುಗಳು ಬರುವುದಿಲ್ಲ.

ಕಾರ್ಬೋಲಿಕ್ ಆಮ್ಲವು ಹಾವುಗಳನ್ನು ಹಿಮ್ಮೆಟ್ಟಿಸಲು ಅತ್ಯುತ್ತಮ ಅಸ್ತ್ರ. ನೀವು ಮನೆಯ ಸುತ್ತಲೂ ಕಾರ್ಬೋಲಿಕ್ ಆಮ್ಲವನ್ನು ಹರಡಿದರೆ, ಹಾವು ಮನೆಯೊಳಗೆ ಪ್ರವೇಶಿಸುವ ಆತಂಕವನ್ನು ಕಡಿಮೆಮಾಡಿಕೊಳ್ಳಬಹುದು.

10 ಎಸಳು ಬೆಳ್ಳುಳ್ಳಿಯನ್ನು ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ನಯವಾಗಿ ರುಬ್ಬಿ ನಂತರ ಬೆಳ್ಳುಳ್ಳಿಯನ್ನು ಇನ್ ಪ್ಯೂಸಡ್ ಎಣ್ಣೆ ಹಾಕಿ ಮತ್ತೊಮ್ಮೆ ಬ್ಲೆಂಡ್ ಮಾಡಿ. ನಂತರ ಇದನ್ನು ಒಂದು ಗ್ಲಾಸಿನ ಜಾರಿಗೆ ಹಾಕಿಡಿ. ಉಪಯೋಗಿಸುವ ಮೊದಲು ಮುಚ್ಚಳ ತೆಗೆದು ಒಂದು ಗಂಟೆ ಜೊತೆಗೆ ಇಡಿ. ನಂತರ ಸ್ಪ್ರೇ ಮಾಡುವಾಗ ಉಪಯೋಗಿಸಿ.

ಹಾವುಗಳು ನಯವಾದ ನೆಲವನ್ನು ಇಷ್ಟಪಡುವುದಿಲ್ಲ. ದೊರಗು ದೊರಗಾದ ನೆಲದಲ್ಲಿ ವೇಗವಾಗಿ ಚಲಿಸುತ್ತವೆ. ಮನೆಯ ಹೊರಗಿನಿಂದ ಒಳಗೆ ಬರುವ ವಿಭಾಗವನ್ನು ನಯವಾಗಿ ಫಿನಿಶ್‌ ಮಾಡಿಸಿಟ್ಟುಕೊಳ್ಳಿ.

ಮನೆಯೆದುರು ಗಾರ್ಡನ್‌ ಇದ್ದರೆ, ಅಲ್ಲಿರುವ ಒಳಹುಲ್ಲಿನ ರಾಶಿ, ಎತ್ತರದ ಹುಲ್ಲು ಕತ್ತರಿಸಿ ಮಟ್ಟಸ ಮಾಡಿ. ಅದಲ್ಲದೆ ಬೆಕ್ಕು ಸಾಕುವುದು ಉಪಯುಕ್ತ. ಬೆಕ್ಕಿನ ವಾಸನೆಗೆ ಹಾವು ದೂರ ಸರಿಯುತ್ತದೆ.

ಸ್ವಿಮ್ಮಿಂಗ್‌ ಪೂಲ್‌ ಇದ್ದಲ್ಲಿ ಹುಷಾರಾಗಿರಬೇಕು. ಇದರಲ್ಲಿರುವ ನೀರಿಗೂ ತಂಪಿಗೂ ಕಪ್ಪೆ- ಇಲಿ ಆ ಮೂಲಕ ಹಾವುಗಳು ಆಕರ್ಷಿತ ಆಗಬಹುದು.

You may also like

Leave a Comment