Home » Madhya Pradesh: ಪತಿ ಟೊಮೆಟೊ ಬಳಸಿದ್ದಕ್ಕೆ ಮನೆ ಬಿಟ್ಟಿದ್ದ ಪತ್ನಿ ; ಗಂಡನ ‘ಅರ್ಧ ‘ ಕೆಜಿ ಟೊಮ್ಯಾಟೋ ನೋಡಿ ಪತ್ನಿ ವಾಪಸ್ !

Madhya Pradesh: ಪತಿ ಟೊಮೆಟೊ ಬಳಸಿದ್ದಕ್ಕೆ ಮನೆ ಬಿಟ್ಟಿದ್ದ ಪತ್ನಿ ; ಗಂಡನ ‘ಅರ್ಧ ‘ ಕೆಜಿ ಟೊಮ್ಯಾಟೋ ನೋಡಿ ಪತ್ನಿ ವಾಪಸ್ !

0 comments
Madhya Pradesh

Madhya Pradesh: ಹೆಂಡತಿಯ ಅನುಮತಿ ಇಲ್ಲದೆ ಗಂಡನು ಅಡುಗೆಯಲ್ಲಿ ಟೊಮೇಟೊ ಬಳಸಿದ್ದಕ್ಕಾಗಿ, ಕೋಪಗೊಂಡ ಪತ್ನಿಯು ಮಗಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿರುವ ಘಟನೆ ಮಧ್ಯಪ್ರದೇಶದ (Madhya Pradesh) ಶಹದೋಲ್‌ನಲ್ಲಿ (Shahdol) ನಡೆದಿತ್ತು. ಇದೀಗ ಪತ್ನಿ ಕೊನೆಗೂ ಟೊಮೆಟೋ ಕಾರಣದಿಂದಲೇ ಮನೆಗೆ ವಾಪಸ್ಸಾಗಿದ್ದಾರೆ.

ಸಂಜೀವ್ ಬರ್ಮನ್ ಟಿಫಿನ್ ಸರ್ವಿಸ್ (Tiffin service) ನಡೆಸುತ್ತಿದ್ದರು. ಇವರು ಅಡುಗೆ (Cook) ಮಾಡುವ ಸಂದರ್ಭದಲ್ಲಿ ಹೆಂಡತಿಯ ಅಪ್ಪಣೆಯಿಲ್ಲದೆ 2 ಟೊಮೆಟೊವನ್ನು (Tomato) ಅಡುಗೆಯಲ್ಲಿ ಬಳಸಿದ್ದಾರೆ. ಇದರಿಂದ ಕೋಪಗೊಂಡ ಹೆಂಡತಿ ಗಂಡನೊಂದಿಗೆ ಜಗಳಕ್ಕೆ ಇಳಿದಿದ್ದಾಳೆ. ಇವರಿಬ್ಬರ ಜಗಳ ಅತಿರೇಕಕ್ಕೆ ಹೋಗಿ, ಕೋಪಗೊಂಡ ಹೆಂಡತಿ ತನ್ನ ಮಗಳನ್ನು ಕರೆದುಕೊಂಡು ಗಂಡನ ಮನೆ ಬಿಟ್ಟು ತವರು ಮನೆ ಸೇರಿದಳು.

ಬಳಿಕ ಸಂಜೀವ್ ತನ್ನ ಹೆಂಡತಿ ಮತ್ತು ಮಗಳನ್ನು ಊರಿನ ಎಲ್ಲಾ ಕಡೆ ಹುಡುಕಾಡಿದ್ದಾರೆ. ಆದರೆ ಎಲ್ಲಿಯೂ ಸುಳಿವು ಸಿಗದ ಹಿನ್ನೆಲೆ ಸಂಜೀವ್ ಹತ್ತಿರದ ಪೊಲೀಸ್ ಠಾಣೆಯಲ್ಲಿ (police station) ತನ್ನ ಪತ್ನಿ ಹಾಗೂ ಮಗಳು ನಾಪತ್ತೆಯಾಗಿರುವುದರ ಬಗ್ಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆಕೆಗಾಗಿ ಶೋಧ ನಡೆಸಿ ಆಕೆಯನ್ನು ಪತ್ತೆ ಹಚ್ಚಿ ಕೊನೆಗೂ ಗಂಡ-ಹೆಂಡತಿಯನ್ನು ಒಂದುಗೂಡಿಸಿದ್ದಾರೆ. ಈ ವೇಳೆ ಪತಿ ಅರ್ಧ ಕೆ.ಜಿ ಟೊಮೆಟೋವನ್ನು ಪತ್ನಿಗೆ ನೀಡಿ ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ, ಮುಂದೆ ಇಂತಹ ತಪ್ಪುಗಳಾಗುವುದಿಲ್ಲ ಎಂದು ಕೇಳಿಕೊಂಡ ಬಳಿಕ ಮತ್ತೆ ಮನೆಗೆ ಬರಲು ಪತ್ನಿ ಒಪ್ಪಿಕೊಂಡಿದ್ದಾರೆ. ಪತಿ ಕೂಡ ಟೊಮೆಟೋ ಬೆಲೆ ಸಾಮಾನ್ಯ ಸ್ಥಿತಿಗೆ ಬರುವವರೆಗೆ ಯಾವುದೇ
ಅಡುಗೆಯಲ್ಲಿ ಟೊಮೆಟೊಗಳನ್ನು ಬಳಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿ ಮನಗೆ ಕರೆದೊಯ್ದಿದ್ದಾರೆ. ಸದ್ಯ ದಂಪತಿಗಳ ಜಗಳ ಟೊಮೆಟೋದಿಂದಲೇ ಸುಖಾಂತ್ಯವಾಗಿದೆ.

 

ಇದನ್ನು ಓದಿ: R Ashok: ಖಾದಿ ಆಯ್ಕೊಳ್ಳಿ, ಇಸ್ತ್ರಿ ಒರಸ್ಕೊಳ್ಳಿ, ಕೈ ಎತ್ಕೊಳ್ಳಿ, ಫೋಟೋ ಹೊಡ್ಕೊಳ್ಳಿ – ಮಹಾಮೈತ್ರಿ ಕೂಟ ಇವತ್ತು ಮಾಡೋದು ಇಷ್ಟೇ – ಅಂದದ್ಯಾರು ? 

You may also like

Leave a Comment