Mahendra Singh Dhoni: ಭಾರತ ತಂಡದ ಮಾಜಿ ನಾಯಕ ಹಾಗೂ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರು ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ಪ್ರಸ್ತುತ ಟೀಮ್ ಇಂಡಿಯಾ ಪರ ಮಾಹಿ ಆಡದಿದ್ದರೂ, ಐಪಿಎಲ್‌ನಲ್ಲಿ ಸಕ್ರಿಯವಾಗಿದ್ದಾರೆ. ಇದರೊಂದಿಗೆ ಕ್ರೀಡೆಗೆ ಸಂಬಂಧಿಸಿದ ಇತರ ಚಟುವಟಿಕೆ ಹಾಗೂ ಜಾಹೀರಾತುಗಳಿಂದಲೂ ಸಂಪಾದನೆ ಮಾಡುತ್ತಾರೆ. ಇದೀಗ ಧೋನಿ 1050 ಕೋಟಿ ರೂ.ಗಳ ನಿವ್ವಳ ಆಸ್ತಿಯ(Net worth) ಒಡೆಯ. ಪ್ರತಿ ವರ್ಷ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿರುವ ಎಂಎಸ್ ಧೋನಿಗೆ , 10 ವರ್ಷಗಳ ಹಿಂದೆ ಬಂದಿದ್ದ, ಉದ್ಯೋಗದ ಆಫರ್ ಲೆಟರ್ (MS Dhoni job offer letter viral) ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡಿಂಗ್‌ನಲ್ಲಿದೆ.
ಹೌದು, 2012ರಲ್ಲಿ ಸಿಮೆಂಟ್ ಕಂಪನಿಯೊಂದರಿಂದ ಇಂಡಿಯಾ ಸಿಮೆಂಟ್ಸ್‌ನ ಉಪಾಧ್ಯಕ್ಷ(vice-president) ಹುದ್ದೆಗೆ ಸಿಎಸ್‌ಕೆ ನಾಯಕನಿಗೆ ಆಫರ್ ಲೆಟರ್ ನೀಡಲಾಗಿತ್ತು. ಇದೀಗ ಈ ಹಳೆಯ ಆಫರ್ ಲೆಟರ್ ವೈರಲ್ ಆಗಿದೆ. ಧೋನಿಗೆ ಈ ಕೆಲಸಕ್ಕಾಗಿ ಆಫರ್ ಲೆಟರ್‌ನಲ್ಲಿ ನಮೂದಿಸಿದ ಸಂಭಾವನೆಯನ್ನು ನೋಡಿದ ಅಭಿಮಾನಿಗಳಿಗೆ ಅಚ್ಚರಿಯನ್ನು ಮೂಡಿಸಿದೆ.
2008 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (Indian premier league) ದೇಶದಾದ್ಯಂತ ಮೊದಲ ಬಾರಿಗೆ ಪ್ರಾರಂಭವಾದಾಗಿನಿಂದ ಎಂಎಸ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದಾರೆ. ಅಂದಿನಿಂದ, ಧೋನಿಯನ್ನು ಸಿಎಸ್‌ಕೆ ಪ್ರತಿ ವರ್ಷ ಬಹುಕೋಟಿ ಒಪ್ಪಂದಗಳಲ್ಲಿ ಉಳಿಸಿಕೊಂಡಿದೆ. ಹೀಗಿದ್ದರೂ 2012ರಲ್ಲಿ ಸಿಮೆಂಟ್ ಕಂಪನಿಯೊಂದರಲ್ಲಿ ಕೆಲಸ ಕೊಡಿಸಲಾಗಿತ್ತು. ಈ ಕೆಲಸಕ್ಕಾಗಿ ದಿಗ್ಗಜ ಆಟಗಾರನಿಗೆ ನೀಡಲಾದ ಸಂಭಾವನೆ ಕೇವಲ 43,000 ರೂ.ಅಷ್ಟೊಂದು ಸಣ್ಣ ಮೊತ್ತಕ್ಕೆ ಸ್ಟಾರ್ ಆಟಗಾರ ಕೆಲಸ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳು ನೆಟ್ಟಿಗರಲ್ಲಿ ಮೂಡಿದೆ.
ಈ ಲೆಟರ್ ಪ್ರಕಾರ, ಅವರ ಮಾಸಿಕ ವೇತನ 43,000 ರೂಪಾಯಿ ಆಗಿದ್ದರೆ, 21,970 ರೂಪಾಯಿ ತುಟ್ಟಿಭತ್ಯೆ ಮತ್ತು 20,000 ರೂ. ವಿಶೇಷ ವೇತನ ಕೊಡುವುದಾಗಿ ಹೇಳಲಾಗಿದೆ. ಇದರ ಹೊರತಾಗಿ 20,400 ರೂಪಾಯಿ ಎಚ್‌ಆರ್‌ಎ, ಸ್ಪೆಷಲ್ ಎಚ್‌ಆರ್‌ಎ 8,000 ರೂಪಾಯಿ, ರೂ.60,000 ವಿಶೇಷ ಭತ್ಯೆಯನ್ನು ಕೂಡಾ ಆಫರ್ ಮಾಡಲಾಗಿದೆ.
ಇಂಡಿಯಾ ಸಿಮೆಂಟ್ಸ್ ಕಂಪನಿಯು ಎನ್ ಶ್ರೀನಿವಾಸನ್ ಒಡೆತನದ ಕಂಪನಿಯಾಗಿದೆ. ಆದರೆ ಇಲ್ಲಿ ಮತ್ತೊಂದು ಗಮನಾರ್ಹ ಅಂಶವೆಂದರೆ, ಐಪಿಎಲ್‌ನಲ್ಲಿ ಎಂಎಸ್ ಧೋನಿ ಆಡುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ( CSK franchise ) ಮಾಲೀಕ ಕೂಡಾ ಇವರೇ. ಈ ಆಫರ್ ಲೆಟರ್ ಹೊರಬಂದ ವರ್ಷವೇ ಮಾಹಿಯವರನ್ನು 8.82 ಕೋಟಿ ರೂಪಾಯಿಗೆ ಸಿಎಸ್‌ಕೆ ಉಳಿಸಿಕೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಜಾಬ್ ಆಫರ್ ಪತ್ರವನ್ನು ಮಾಜಿ ಐಪಿಎಲ್(IPL) ಮುಖ್ಯಸ್ಥ ಲಲಿತ್ ಮೋದಿ (Lalit Modi) ಪೋಸ್ಟ್ ಮಾಡಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ನೀರವ್ ಮೋದಿಯನ್ನು ಐಸಿಸಿ ಮತ್ತು ಬಿಸಿಸಿಐನಿಂದ ನಿಷೇಧಿಸಲಾಗಿದೆ .
