Monitor lizard: ತನಗೆ ಮನೆ ಕಟ್ಟಲು ಹಣ ಬಿಡುಗಡೆ ಮಾಡದೇ ಆಟವಾಡಿಸಿದ ಅಧಿಕಾರಿಯ ಮೇಲೆ ಕೋಪಗೊಂಡು ಆ ಅಧಿಕಾರಿಯ ಆಫೀಸಿಗೆ ಉಡ ತಂದು ಬಿಟ್ಟ ಘಟನೆ ನಡೆದಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ವ್ಯಕ್ತಿಯೋರ್ವ ಮುನ್ಸಿಪಾಲ್ ಆಫೀಸರ್ ಕಚೇರಿಯೊಳಗೆ ಕಾಡಿಂದ ಹಿಡಿದು ತಂಡ ಉಡವನ್ನು (Monitor lizard) ಬಿಟ್ಟಿರುವ ಘಟನೆ ನಡೆದಿದೆ.
ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಚಂದೇರಿಯ ತೋತಾರಾಮ್ ಎಂಬ ವ್ಯಕ್ತಿಯು ಮನೆ ನಿರ್ಮಾಣ ಮಾಡುವುದಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದ. ಸರ್ಕಾರದಿಂದ ನೀಡಿರುವ ನಿವೇಶನದಲ್ಲಿ ಮನೆ ನಿರ್ಮಾಣ ಮಾಡುವುದಕ್ಕೆ ಹಣ ಮಂಜೂರು ಮಾಡುವಂತೆ ಹಲವು ದಿನಗಳಿಂದ ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದನಂತೆ. ಆದ್ರೆ ಅಧಿಕಾರಿಗಳು ಯಥಾ ಪ್ರಕಾರ ಸರ್ಕಾರಿ ಕಚೇರಿಗಳಲ್ಲಿ ಆಗುವಂತೆ ನಿರ್ಲಕ್ಷ ತೋರಿದ್ದಾರೆ.
ವೃತ್ತಿಯಲ್ಲಿ ಉರಗ ತಜ್ಞನಾಗಗಿರುವ ತೋತಾರಾಂ ನೋಡಿದಷ್ಟು ನೋಡಿ, ಕೊನೆಗೆ ಅಧಿಕಾರಿಗಳ ವರ್ತನೆಯಿಂದ ತೀವ್ರವಾಗಿ ಬೇಸತ್ತಿದ್ದಾನೆ. ಕೊನೆಗೆ ಉಡವನ್ನು ತಂದು ನೇರವಾಗಿ ಮುಖ್ಯ ಅಧಿಕಾರಿಯ ಕಚೇರಿ ಒಳಗೆ ಬಿಟ್ಟಿದ್ದಾನೆ. ಬಳಿಕ ತನ್ನ ಮನವಿಯನ್ನು ಪುರಸ್ಕರಿಸದಿದ್ದರೆ ವಿಷಕಾರಿ ಹಾವುಗಳನ್ನು ಬಿಡುವುದಾಗಿ ಬೆದರಿಕೆ ಹಾಕಿ ಹೊರಟು ಹೋಗಿದ್ದಾನೆ ಎನ್ನಲಾಗಿದೆ.
ಆದರೆ ಈ ಕುರಿತು ಮುನ್ಸಿಪಾಲ್ ಅಧಿಕಾರಿ ಹೇಳೋದೇ ಬೇರೆ. ತೋತರಾಮ್ ಹೆಸರಿನಲ್ಲಿ ಇರುವ ಜಾಗದಲ್ಲಿ ಮನೆ ನಿರ್ಮಾಣ ಮಾಡಲು ಸರ್ಕಾರದಿಂದ 1 ಲಕ್ಷ ರೂಪಾಯಿ ಹಣವನ್ನು ಮಂಜೂರು ಮಾಡಲಾಗಿತ್ತು, ನಿಜ. ಆದರೆ, ಆ ಹಣದಲ್ಲಿ ತೋತರಾಮ್ 90 ಸಾವಿರ ರೂಪಾಯಿಯನ್ನು ಬೇರೆ ಉದ್ದೇಶಕ್ಕೆ ಖರ್ಚು ಮಾಡಿಕೊಂಡಿದ್ದಾನೆ.
ಈಗ ದೊಡ್ಡ ಮೊತ್ತ ಹಣ ಖರ್ಚಾದ ಬಳಿಕ ಪುನಃ ಮಂಜೂರು ಮಾಡಿಸುವಂತೆ ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾನೆ. ಅದು ಸಾಧ್ಯವಿಲ್ಲ ಅಂದಾಗ ಆತ ಆತ ನಮ್ಮ ಮೇಲೆ ಒತ್ತಾಯ ಹೇರುತ್ತಿದ್ದಾನೆ. ಈಗ ಉಡ ಬಿಟ್ಟಿದ್ದು ಮುಂದಕ್ಕೆ ಹಾವು ಬಿಡುವ ಮಾತಾಡಿ ಈ ಮೂಲಕ ಬೆದರಿಕೆ ಒಡ್ಡುತ್ತಿದ್ದಾನೆ ಎಂದು ಆ ಮುನ್ಸಿಪಾಲ್ ಅಧಿಕಾರಿ ಅರೋಪಿಸಿದ್ದಾರೆ.
ಇದನ್ನು ಓದಿ: Kerala: ಪತ್ರಿಕೋದ್ಯಮದ ನಾಲ್ಕು ‘Wʼ ಗಳು ಈಗ ‘D’ ಗೆ ಬದಲಾಗಿದೆ: ಹೈಕೋರ್ಟ್ ಹೇಳಿದ್ದೇನು ? : ಏನದು W – D ?!
