Home » Guinness World Records: ಗಿನ್ನಿಸ್ ದಾಖಲೆ ನಿರ್ಮಿಸಲು 7 ದಿನ ಕಣ್ಣೀರ ಕೋಡಿ ಹರಿಸಿದ ವ್ಯಕ್ತಿ ; ಮುಂದಾಗಿದ್ದು ಊಹಿಸಲು ಅಸಾಧ್ಯ !

Guinness World Records: ಗಿನ್ನಿಸ್ ದಾಖಲೆ ನಿರ್ಮಿಸಲು 7 ದಿನ ಕಣ್ಣೀರ ಕೋಡಿ ಹರಿಸಿದ ವ್ಯಕ್ತಿ ; ಮುಂದಾಗಿದ್ದು ಊಹಿಸಲು ಅಸಾಧ್ಯ !

0 comments
Guinness World Records

guinness world records: ವಿವಿಧ ಸಾಹಸ, ಸಾಧನೆ ಮಾಡಿ ಗಿನ್ನೆಸ್ ದಾಖಲೆ ಮಾಡುತ್ತಾರೆ. ಆದರೆ, ಇಲ್ಲೊಬ್ಬ ಗಿನ್ನಿಸ್ ದಾಖಲೆ ನಿರ್ಮಿಸಲು (guinness world records) 7 ದಿನ ಕಣ್ಣೀರ ಕೋಡಿ ಹರಿಸಿದ್ದಾನೆ. ಮುಂದಾಗಿದ್ದು ಮಾತ್ರ ಊಹಿಸಲು ಸಾಧ್ಯವಾಗದ್ದು. ಹೌದು, ನೈಜೀರಿಯಾದ ವ್ಯಕ್ತಿಯೊಬ್ಬ ಗಿನ್ನೆಸ್ ದಾಖಲೆಯಲ್ಲಿ ತನ್ನ ಹೆಸರು ಸೇರಬೇಕೆಂದು ಬಯಸಿ ಕಣ್ಣೀರ ಕೋಡಿ ಹರಿಸಿ ಕೊನೆಗೆ ಕಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ (Man Goes Blind Temporarily).

ತೆಂಬು ಎಬೆರೆ ಎಂಬಾತನೆ ಆ ದುರಾದೃಷ್ಟಕರ ವ್ಯಕ್ತಿ. ಈತ ತಾನು ಹೇಗಾದರೂ ಸರಿ ಗಿನ್ನೀಸ್ ವಿಶ್ವ ದಾಖಲೆ ಪುಸ್ತಕ ಸೇರಬೇಕು ಎಂಬ ಬಯಕೆಯಿಂದ ಏಳು ದಿನಗಳ ಕಾಲ ನಿರಂತರವಾಗಿ ಅತ್ತಿದ್ದಾರೆ. ಬಲವಂತವಾಗಿ, ಹಲವು ಪ್ರಯತ್ನಪಟ್ಟು ಬರೋಬ್ಬರಿ ಏಳು ದಿನ ನಿರಂತರ ಕಣ್ಣೀರು ಬರಿಸಿ ಸುರಿಸಿದ್ದಾರೆ.

ಆದರೆ, ಅನಂತರ ಈತನಿಗೆ ವಿಪರೀತ ತಲೆ ನೋವು ಶುರುವಾಗಿದೆ.
ಒಮ್ಮೆ ಅತ್ತರೇ ತಲೆನೋವು ಬರತ್ತೆ ಇನ್ನೂ 7 ದಿನ ಅತ್ತರೆ ಹೇಗಾಗಬೇಡ ಅಲ್ವಾ?! ಈತನಿಗೆ ತಲೆನೋವು ಮಾತ್ರವಲ್ಲ ಕಣ್ಣು-ಮುಖವೆಲ್ಲ ಊದಿಕೊಂಡು ಬಿಟ್ಟಿದೆ. ಹೀಗಾದ ಮೇಲೆ ಅವರಿಗೆ 45 ನಿಮಿಷಗಳ ಕಾಲ ದೃಷ್ಟಿಯೇ ಕುಂದು ಹೋಗಿತ್ತು. ಸಂಪೂರ್ಣವಾಗಿ ಅವರು ಕುರುಡಾಗಿದ್ದರು. ಹಾಗಾಗಿ ಅಳುವುದನ್ನು ನಿಲ್ಲಿಸಿದರು.

ಈತ ಮಾತ್ರವಲ್ಲ ನೈಜೀರೀಯಾದಲ್ಲಿ ಹಲವರು ಹೀಗೆ ವಿವಿಧ ಕ್ಷೇತ್ರದಲ್ಲಿ ವಿಶ್ವ ದಾಖಲೆ ನಿರ್ಮಿಸಲು ಹಲವು ಪ್ರಯತ್ನ ಮಾಡುತ್ತಿದ್ದಾರೆ. Hida Baci ಎಂಬ ಬಾಣಸಿಗ ಮಹಿಳೆ ಅಡುಗೆ ಮಾಡುವುದರಲ್ಲಿ ಗಿನ್ನೀಸ್ ದಾಖಲೆ ಮಾಡಲು ಪ್ರಯತ್ನ ಮಾಡಿದ್ದರು.
ಆದರೆ, ಮಧ್ಯೆ ಬ್ರೇಕ್ ತೊಗೊಂಡ್ರು ಹಾಗಾಗಿ ಗಿನ್ನಿಸ್ ದಾಖಲೆ ಪುಸ್ತಕ ಸೇರಲು ಸಾಧ್ಯವಾಗಲಿಲ್ಲ.

 

ಇದನ್ನು ಓದಿ: Horticulture Department: ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಭರ್ಜರಿ ಗುಡ್ ನ್ಯೂಸ್ – ಸರ್ಕಾರದಿಂದ ಕೊನೆಗೂ ಬಂತು ಬೆಳೆ ವಿಮೆಯ ಬಿಗ್ ಆಫರ್ !!

You may also like

Leave a Comment