Marriage: 27ಮಂದಿಯ ಮುದ್ದಿನ ಹೆಂಡತಿ ಬಗ್ಗೆ ನೀವು ಕೇಳಿದ್ರೆ ಭಯ ಬೀಳೋದು ಗ್ಯಾರಂಟಿ. ಈಕೆ ಹಣಕ್ಕಾಗಿ ಮದುವೆ (Marriage) ಅನ್ನೋ ಆಪ್ಷನ್ ಚೂಸ್ ಮಾಡ್ಕೊಂಡ್ ಬಿಟ್ಟಿದ್ದಾಳೆ. ಹೌದು, ಮದ್ವೆಯಾಗಿ ಹಣ, ಒಡವೆ ದೋಚಿ ಪರಾರಿಯಾಗೋದೆ ಈಕೆಯ ಫುಲ್ ಟೈಂ ಜಾಬ್ ಅಂತೆ. ಬನ್ನಿ ಈಕೆಯ ಪೂರ್ಣ ಕಹಾನಿ ಕೇಳೋಣ.
ವರದಿಯೊಂದರ ಪ್ರಕಾರ, ಹತ್ತಕ್ಕೂ ಹೆಚ್ಚು ಪುರುಷರು (Men) ನನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು (Complaint) ನೀಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಎಲ್ಲರ ಬಳಿ ಪತ್ನಿಯ ಫೋಟೋ ತೆಗೆದುಕೊಂಡು ಪರಿಶೀಲಿಸಿದಾಗ ಎಲ್ಲರ ಪತ್ನಿಯೂ ಒಬ್ಬಳೇ ಆಗಿದ್ದಳು. ಎಲ್ಲಾ ಪುರುಷರು ತಮಗೆ ಪತ್ನಿ ಮೋಸ ಮಾಡಿದ್ದಾಳೆ ಎಂದು ತಿಳಿದು ಶಾಕ್‌ಗೆ ಒಳಗಾದರು. ಯಾರೂ ಸಹ ಇಂಥಾ ವಂಚನೆಯನ್ನು ನಿರೀಕ್ಷಿಸಿರಲ್ಲಿಲ್ಲ.
ಈ ಮಹಿಳೆ ಬಗ್ಗೆ ಈಕೆ ಚದೂರ ಬುದ್ಗಾಮ್‌ನಲ್ಲಿ ಹತ್ತು ದಿನ ಮಾತ್ರ ಮನೆಯಲ್ಲಿದ್ದಳು ಎಂದು ಒಬ್ಬ ಸಂತ್ರಸ್ತನ ಸಹೋದರ ಅಬ್ದುಲ್ ರಶೀದ್ ಹೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಮಹಿಳೆ ಕತ್ತಲಾದ ನಂತರ ಮನೆಯಿಂದ ನಾಪತ್ತೆಯಾಗಿದ್ದಾಗಿ ತಿಳಿಸಿದ್ದಾರೆ. ಹೀಗೆ ಪುರುಷರನ್ನು ಯಾಮಾರಿಸುವ ಮಹಿಳೆಯ ಗ್ಯಾಂಗ್ ಬಹಳ ದೊಡ್ಡದಿದೆ. ಒಟ್ಟಿನಲ್ಲಿ ವಧುವಿನ ನಿಜವಾದ ಹೆಸರು ಯಾರಿಗೂ ತಿಳಿದಿಲ್ಲ ಮತ್ತು ಬದ್ಗಾಮ್‌ನಲ್ಲಿ ಮಾತ್ರ, ಆಕೆ ದಲ್ಲಾಳಿಗಳ ಸಹಾಯದಿಂದ ಕನಿಷ್ಠ 27 ಪುರುಷರನ್ನು ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಈಕೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ 27 ಮಂದಿಯನ್ನು ಮದುವೆಯಾಗಿ ವಂಚಿಸಿದ ಘಟನೆ ಬೆಳಕಿಗೆ ಬಂದಿದ್ದು, ಇನ್ನಷ್ಟೇ ಈಕೆಯ ಪತ್ತೆಯಾಗಬೇಕಿದೆ.
ಇದನ್ನು ಓದಿ: SBI MCLR: ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಗೊತ್ತಾ SBI, ಕಷ್ಟದ ದಿನಗಳು ಇಂದಿನಿಂದಲೇ ಜಾರಿ
