Marriage: ಸಾಮಾನ್ಯವಾಗಿ ಮದುವೆ (Marriage) ಜೀವನದಲ್ಲಿ ಒಂದೇ ಸಲ ಘಟಿಸುವ ಸುಂದರವಾದ ಘಟನೆ. ಗುರು-ಹಿರಿಯರ ಆಶಿರ್ವಾದೊಂದಿಗೆ ವಧು-ವರ ಹಸೆಮಣೆ ಏರುತ್ತಾರೆ. ಆದರೆ, ಇಲ್ಲೊಬ್ಬಳು ಪತಿಯನ್ನು ಮಾತ್ರ ಅಲ್ಲ ಪತಿಯ ತಂದೆಯನ್ನೂ ಮದುವೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಕಾರಣ ಮಾತ್ರ ವಿಚಿತ್ರವಾಗಿದೆ.
ಆಸ್ಟ್ರೇಲಿಯನ್ ಬ್ರೆಕ್‌ಫಾಸ್ಟ್ ರೆಡಿಯೋ ಕಾರ್ಯಕ್ರಮದಲ್ಲಿ ಕಿಮ್ ಎಂಬ ಮಹಿಳೆ ಈ ಬಗ್ಗೆ ಹೇಳಿಕೊಂಡಿದ್ದಾರೆ. ಆಕೆಯ ಮದುವೆಗೆ
ಸಾಕ್ಷ್ಯ ನೀಡಲು ತಾಯಿ, ಹಾಗೂ ಅತ್ತೆ, ಮಾವ ಬಂದಿದ್ದರು. ಆದರೆ,
ಆಕೆಯ ಮದುವೆ ಪ್ರಮಾಣ ಪತ್ರದಲ್ಲಿ ಪತಿ ಹಾಗೂ ಮಾವ ಇಬ್ಬರೂ ಒಂದೇ ಜಾಗದಲ್ಲಿ ಸಹಿ ಹಾಕಿದ್ದರು. ಹಾಗಾಗಿ ಕಿಮ್ ಅಂದು ಪತಿ ಹಾಗೂ ಮಾವ ಇಬ್ಬರನ್ನೂ ಮದುವೆಯಾಗಿದ್ದಾರೆ ಎಂದು ಹೇಳಿದರು.
ಆದರೆ ಇದು ಕೇವಲ ಈ ಪ್ರಮಾಣ ಪತ್ರಕ್ಕೆ ಮಾತ್ರ ಸೀಮಿತವಾಗಿತ್ತೇ ಹೊರತು ಇನ್ಯಾವ ದಾಖಲೆಯಲ್ಲಿಯೂ ಇದು ಇರಲಿಲ್ಲ ಎಂದು ಮಹಿಳೆ ಸ್ಪಷ್ಟನೆ ನೀಡಿದ್ದಾರೆ. ಒಟ್ಟಾರೆ ಇದೊಂದು ವಿಚಿತ್ರ ಘಟನೆಯೇ ಸರಿ. ಪತಿಯ ಜೊತೆಗೆ ಮಾವನನ್ನೂ ಮದುವೆಯಾಗಿರೋದು ಆಶ್ಚರ್ಯಕರವಾಗಿದೆ.
