Home » Jain Muni murder: ಬೆಳಗಾವಿ ಜೈನ ಮುನಿ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ !! ಕೊಲೆಯಲ್ಲಿ ಮುಸ್ಲಿಂ ವ್ಯಕ್ತಿ ಕೈವಾಡ ?! ಈ ಕಾರಣಕ್ಕೆ ನಡೆಯಿತಾ ಕೊಲೆ ?

Jain Muni murder: ಬೆಳಗಾವಿ ಜೈನ ಮುನಿ ಕೊಲೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ !! ಕೊಲೆಯಲ್ಲಿ ಮುಸ್ಲಿಂ ವ್ಯಕ್ತಿ ಕೈವಾಡ ?! ಈ ಕಾರಣಕ್ಕೆ ನಡೆಯಿತಾ ಕೊಲೆ ?

0 comments
Jain Muni murder

Jain Muni murder: ಹಿರೇಕುಡಿ ನಂದಿ ಪರ್ವತ ಆಶ್ರಮದಿಂದ ನಾಪತ್ತೆಯಾಗಿದ್ದ ಜೈನ ಮುನಿಗಳ ಬರ್ಬರ ಹತ್ಯೆ (Jain Muni murder) ನಾಗರಿಕ ಸಮಾಜವೇ ತಲೆತಗ್ಗಿಸುವ ಕ್ರೌರ್ಯವಾಗಿದೆ. ವರೂರಿನ ಗುಣಧರ ನಂದಿ ಮಹಾರಾಜರು ‘ಕಾಮಕುಮಾರ ನಂದಿ ಮಹಾರಾಜರನ್ನು ಮುಸ್ಲಿಂ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.ಸ್ವಾಮೀಜಿಯವರ ಹತ್ಯೆ ಪ್ರಕರಣ ಸಾಮಾಜಿಕ ಹಾಗೂ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.

ಆದರೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ತಿರುವೊಂದು ಸಿಕ್ಕಿದ್ದು, ಜೈನ ಮುನಿಯ ಹತ್ಯೆಯ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಅವರು ತಾವೇ ಸ್ವಾಮೀಜಿಯವರ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸಾಲದ ವಿಚಾರಕ್ಕೆ ಬಂದ ಭಿನ್ನಾಭಿಪ್ರಾಯವೇ ಕೊಲೆಗೆ ಮೂಲಕಾರಣ ಎಂದು ಬೆಳಕಿಗೆ ಬಂದಿದೆ.

ಸ್ವಾಮೀಜಿಯವರು ಜು. 6ರ ರಾತ್ರಿಯವರೆಗೂ ಆಶ್ರಮದಲ್ಲೇ ಇದ್ದರು. ಆದರೆ, ಜು. 7ರ ಬೆಳಗ್ಗೆಯಿಂದಲೇ ಅವರು ಆಶ್ರಮದಲ್ಲಿ ಕಾಣಿಸಿರಲಿಲ್ಲ. ಇಡೀ ಆಶ್ರಮವನ್ನು ಹುಡುಕಾಡಿದರು ಕೂಡ ಸ್ವಾಮೀಜಿಯ ಪತ್ತೆಯಾಗದ ಕಾರಣ ಪೊಲೀಸರಿಗೆ ದೂರನ್ನು ದಾಖಲಿಸಲಾಯಿತು. ದೂರಿನನ್ವಯ, ಆಶ್ರಮದ ಸಿಬ್ಬಂದಿ ಹಾಗೂ ಸ್ವಾಮೀಜಿಯವರ ಆಪ್ತರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು.

ಈ ವೇಳೆ ಒಬ್ಬನು ಸ್ವಾಮೀಜಿಯವರ ಹತ್ಯೆಯಾಗಿರುವುದನ್ನು ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ. ‘ಆಶ್ರಮದಲ್ಲಿಯೇ ಕೆಲಸ ಮಾಡುತ್ತಿದ್ದ ನಾರಾಯಣ ಮಾಳಿ ಎಂಬವರು ಮುನಿಗಳ ಹತ್ಯೆ ಮಾಡಿದ್ದಾರೆ. ಹೆಣವನ್ನು ಸಾಗಿಸಲು ಹಸನ್‌ ದಲಾಯತ್‌ ಅವರಿಂದ ಸಹಾಯ ಪಡೆದುಕೊಂಡಿದ್ದಾರೆ. ಈ ಬಗ್ಗೆ ನಾರಾಯಣ ಮಾಳಿ ತನಿಖೆಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಬೆಳಗಾವಿ ಎಸ್‌ಪಿ ಡಾ. ಸಂಜೀವ್‌ ಪಾಟೀಲ್‌ ಅವರು ಸ್ಪಷ್ಟನೆ ನೀಡಿದ್ದಾರೆ.

ನಾರಾಯಣ ಮಾಳಿ ಹತ್ಯೆ ಮಾಡಿದ ತಂಡದ ಇನ್ನೊಬ್ಬ ವ್ಯಕ್ತಿಯ ಹೆಸರನ್ನು ಬಾಯಿಬಿಟ್ಟಿದ್ದು, ಆತನನ್ನೂ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದಾಗ ಹತ್ಯೆಯ ಭಯಾನಕ ವಿಚಾರ ಹೊರಬಿದ್ದಿದೆ. ‘ಹತ್ಯೆಯು ಹಣಕಾಸಿನ ವ್ಯವಹಾರದ ಸಂಬಂಧ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗುತ್ತಿದೆ’ ಎಂದು ತನಿಖಾಧಿಖಾರಿಗಳು ಹೇಳಿದ್ದಾರೆ.

ಹಂತಕರು ಸ್ವಾಮೀಜಿಯಿಂದ ದೊಡ್ಡ ಮೊತ್ತದ ಹಣವನ್ನು ಸಾಲವಾಗಿ ಪಡೆದಿದ್ದರು. ವರ್ಷಗಳಾದರೂ ಸಾಲವನ್ನು ತೀರಿಸದ ಕಾರಣ ಸ್ವಾಮೀಜಿಯವರು ಹಣ ವಾಪಸ್ ಕೊಡುವಂತೆ ಕೇಳುತ್ತಿದ್ದರು. ಪದೇ ಪದೇ ಸ್ವಾಮೀಜಿಯವರು ಹಣವನ್ನು ಕೇಳಲಾರಂಭಿಸಿದ್ದಕ್ಕೆ ಸ್ವಾಮೀಜಿಯವರನ್ನು ಹತ್ಯೆ ಮಾಡಿರುವುದಾಗಿ ಹಂತಕರು ಬಾಯ್ಬಿಟ್ಟಿದ್ದಾರೆ.

 

 

You may also like

Leave a Comment