Gas Cylinder: ಇಂದಿನ ದಿನದಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಬಳಸದವರೇ ಇಲ್ಲ. ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ ಸಿಲಿಂಡರ್ ಇದ್ದೇ ಇದೆ. ಇದರಿಂದಾಗಿ ಬೇಗನೆ ಸುಲಭವಾಗಿ ಹೆಚ್ಚಿನವರು ಬಗೆ ಬಗೆಯ ಅಡುಗೆ ತಯಾರಿಸುತ್ತಾರೆ. ಇದೀಗ LPG ಸಿಲಿಂಡರ್ ಗಳಿಗೂ ಬಂದಿದೆ ಎಕ್ಸ್ಪೆರಿ ಡೇಟ್. ನಿಮ್ಮ ಮನೆಯ ಸಿಲಿಂಡರ್ ಎಕ್ಸ್ಪೆರಿ ಆಗೋದು ಯಾವಾಗ?! ಈಗಲೇ ಚೆಕ್ ಮಾಡಿ !
ದಿನನಿತ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳಿಗೂ ಕೂಡ Expire ಡೇಟ್ ಇರುತ್ತದೆ. ಗ್ಯಾಸ್ ಸಿಲಿಂಡರ್ ಎಕ್ಸ್ಪೈರ್ ಡೇಟ್ ನಲ್ಲಿ ಮೂರು ರೀತಿಗಳಿವೆ. ಸಾಮಾನ್ಯವಾಗಿ ಗ್ಯಾಸ್ ಸಿಲಿಂಡರ್‌ಗಳ ಈ ಪಟ್ಟಿಗಳಲ್ಲಿ A-23, B-25, C-24, D-23 ಬರೆಯುವುದನ್ನು ನೀವು ನೋಡುತ್ತೀರಿ. ಈ ಆಲ್ಫಾ ನ್ಯೂಮರಿಕ್ ಅಂಕೆಗಳು ಸಿಲಿಂಡರ್‌ನ ಮುಕ್ತಾಯ ದಿನಾಂಕದ ಬಗ್ಗೆ ಮಾಹಿತಿ ನೀಡುತ್ತದೆ. ಇಂಗ್ಲಿಷ್ ನಲ್ಲಿ ಬರೆದಿರುವ A,B,C,D ಅಕ್ಷರಗಳು ತಿಂಗಳ ಬಗ್ಗೆ ಮಾಹಿತಿ ನೀಡುತ್ತವೆ.
A- ಜನವರಿ, ಫೆಬ್ರವರಿ ಮತ್ತು ಮಾರ್ಚ್. B – ಏಪ್ರಿಲ್, ಮೇ ಮತ್ತು ಜೂನ್. C – ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್. D – ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ಪ್ರತಿನಿಧಿಸುತ್ತದೆ. ಈ ಅಕ್ಷರಗಳ ಮುಂದೆ ಸಂಖ್ಯೆಗಳನ್ನು ಬರೆಯಲಾಗುತ್ತದೆ. ಸಂಖ್ಯೆಗಳು ವರ್ಷವನ್ನು ಸೂಚಿಸುತ್ತವೆ. ಉದಾಹರಣೆಗೆ, LPG ಸಿಲಿಂಡರ್‌ನ ಮುಂದೆ C-24 ಎಂದು ಬರೆದಿದ್ದರೆ, ಆ ಸಿಲಿಂಡರ್ ಜುಲೈನಿಂದ ಸೆಪ್ಟೆಂಬರ್ 2014 ರಲ್ಲಿ ಅವಧಿ ಮುಗಿಯುತ್ತದೆ ಎಂದು ಅರ್ಥ. ನೀವು ನಿಮ್ಮ ಮನೆಯ ಸಿಲಿಂಡರ್ Expire ಆಗೋದು ಯಾವಾಗ ಎಂದು ತಿಳಿದುಕೊಳ್ಳಿ.
