Praveen Nettaru: ಸುಳ್ಯ: ಕಳೆದ ವರ್ಷ ಸುಳ್ಯ ತಾಲೂಕಿನ ಬೆಳ್ಳಾರೆಯ ಮಾಸ್ತಿಕಟ್ಟೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಅವರ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿರುವ ಪ್ರಮುಖ ಆರೋಪಿಗಳು ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಅವರಿಗೆ ಶರಣಾಗತಿಯಾಗಲು ಎನ್‌ಐಎ ನ್ಯಾಯಾಲಯ ಸೂಚಿಸಿದೆ. ಇಲ್ಲದಿದ್ದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಡೆಡ್ ಲೈನ್ ಘೋಷಿಸಿದೆ NIA ಕೋರ್ಟು.
ಈ ಕುರಿತಂತೆ NIA ನ್ಯಾಯಾಲಯದ ಅಧಿಕಾರಿಗಳು ಹಾಗೂ ಸುಳ್ಯ ಪೊಲೀಸ್ ಸಿಬ್ಬಂದಿಯವರು ಸುಳ್ಯ ಪೇಟೆ ಹಾಗೂ ಬೆಳ್ಳಾರೆಯಲ್ಲಿ ಧ್ವನಿವರ್ಧಕದ ಮೂಲಕ ಪ್ರಚಾರ ನಡೆಸಿದ್ದಾರೆ.
ಆರೋಪಿಗಳ ಸುಳಿವು ಕೊಟ್ಟವರಿಗೆ ನಗದು ಬಹುಮಾನವನ್ನು ನೀಡಲಾಗುವುದು ಎಂದೂ ತಿಳಿಸಲಾಗಿದೆ.
ಸುಳ್ಯ ತಾಲೂಕಿನ ಕಲ್ಲುಮುಟ್ಟುಬಿನಲ್ಲಿ ವಾಸವಿದ್ದ ಆರೋಪಿ ಉಮ್ಮರ್ ಫಾರೂಕ್ ಹಾಗೂ ಬೆಳ್ಳಾರೆ ನಿವಾಸಿ ಆರೋಪಿ ಮುಸ್ತಫ ಮನೆಗೂ ಹೋಗಿ ಆದೇಶ ಪ್ರತಿ ಅಂಟಿಸಿ ಬಂದಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆಯಷ್ಟೇ ರಾಷ್ಟ್ರೀಯ ತನಿಖಾ ಸಂಸ್ಥೆ ಎನ್ ಐ ಎ ಪುತ್ತೂರು ಮತ್ತು ಬೆಳ್ತಂಗಡಿ ಮಡಿಕೇರಿಗಳಲ್ಲಿ ಆರೋಪಿಗಳ ಮನೆಗೆ ದಾಳಿ ನಡೆಸಿತ್ತು. ಇನ್ನು, ಇವತ್ತು ತಲೆ ತಪ್ಪಿಸಿಕೊಂಡಿರುವ ಆರೋಪಿಗಳಿಗೆ ಅಂತಿಮಗಳು ವಿಧಿಸಲಾಗಿದೆ ತಪ್ಪಿದಲ್ಲಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಾಗಿ NIA ಕೋರ್ಟ್ ಡೆಡ್ ಲೈನ್ ಘೋಷಿಸಿದೆ.
ಇದನ್ನು ಓದಿ: Free bus travel: ಉಚಿತ ಬಸ್ ಪ್ರಯಾಣಕ್ಕೆ ಮತ್ತೊಂದು ಹೊಸ ರೂಲ್ಸ್ !? ಇನ್ನೆರಡು ದಿನದಲ್ಲೇ ಜಾರಿ..ಮಹಿಳೆಯರಿಗೆ ಶಾಕ್ !!
