Ranjita : ಅತ್ಯಾಚಾರ ಆರೋಪದಿಂದ ದೇಶದಿಂದ ಪಲಾಯನ ಮಾಡಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಈಗಾಗಲೇ ಭಾರತ ಬಿಟ್ಟು ಪರಾರಿಯಾಗಿದ್ದು, (Nithyananda) ಈಕ್ವೆಡಾರ್‌ನ ಕರಾವಳಿಯಲ್ಲಿ ದ್ವೀಪವೊಂದನ್ನು ತನ್ನದೇ ಆದ ದೇಶವಾಗಿ ನಿರ್ಮಿಸಿಕೊಂಡು ತನ್ನ ಶಿಷ್ಯರ ಜೊತೆ ವಾಸಿಸುತ್ತಿದ್ದಾನೆ. ನಿತ್ಯಾನಂದ ತನ್ನ ದೇಶಕ್ಕೆ ಯುನೈಟೆಟ್ ಸ್ಟೇಟ್ಸ್ ಆಫ್ ಕೈಲಾಸ (ಕೈಲಾಸ ದೇಶ) ಎಂದು ನಾಮಕರಣ ಮಾಡಿಕೊಂಡಿದ್ದಾನೆ. ಈ ದೇಶಕ್ಕೆ ನಟಿ ರಂಜಿತಾಳನ್ನು (Ranjita) ಪ್ರಧಾನಿ ಆಗಿ ಘೋಷಿಸಿದ್ದು, ಇದೀಗ
ನಿತ್ಯಾನಂದನ ಕೈಲಾಸದ ಪ್ರಧಾನಿ ನಟಿ ರಂಜಿತಾರಿಂದ ಅಚ್ಚರಿಯ ವೀಡಿಯೋ ಹೇಳಿಕೆ ಬಿಡುಗಡೆಯಾಗಿದೆ.
2019ರಲ್ಲಿ ಅಂದರೆ 13 ವರ್ಷಗಳ ಹಿಂದೆ ಬಿಡದಿ ಬಳಿಯ ಧ್ಯಾನ ಪೀಠದಲ್ಲಿ ನಿತ್ಯಾನಂದ- ರಂಜಿತಾ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ವಿಚಾರ ಭಾರೀ ಸುದ್ದಿಯಾಗಿತ್ತು. ಈ ಪ್ರಕರಣ ಇತ್ಯರ್ಥವಾಗದ ಹಂತದಲ್ಲೇ ಆರತಿ ರಾವ್ ಎಂಬುವವರು ನಿತ್ಯಾನಂದ ತಮ್ಮ ಮೇಲೆ ಲೈಂಗಿತ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದರು. ಅತ್ಯಾಚಾರ ಆರೋಪದಿಂದ ನಿತ್ಯಾನಂದ ದೇಶದಿಂದ ಪಲಾಯನ ಮಾಡಿದ್ದ. ಹಾಗೂ ಅಮೆರಿಕ ದೇಶವಾದ ಈಕ್ವೆಡಾರ್‌ನಲ್ಲಿ ನಿತ್ಯಾನಂದ ಖಾಸಗಿ ದ್ವೀಪ ಪ್ರದೇಶವನ್ನು ಖರೀದಿಸಿ ಇದು ನನ್ನ ದೇಶ ಎಂದು ಘೋಷಿಸಿಕೊಂಡಿದ್ದಾನೆ.
ಟ್ರಿನಿಡಾಡ್ ಮತ್ತು ಟೊಬ್ಯಾಗೊ ನಗರಗಳಿಂದ ಈ ದ್ವೀಪ ಸಮೀಪದಲ್ಲಿದೆ. ಅಂದರೆ ಅಮೆರಿಕ ದೇಶದ ಕೆಳಭಾಗದಲ್ಲಿ ನಿತ್ಯಾನಂದನ ದೇಶ ಇದೆ. ಈ ದೇಶಕ್ಕೆ ‘ಕೈಲಾಸ’ ಎಂದು ಹೆಸರಿಟ್ಟಿದ್ದಾನೆ. ತನ್ನ ದೇಶಕ್ಕೆ ಪ್ರತ್ಯೇಕ ಧ್ವಜ, ಲಾಂಛನ, ಪ್ರತ್ಯೇಕ ಪಾಸ್‌ಪೋರ್ಟ್ ಕೂಡ ತಯಾರಿಸಿಕೊಂಡಿದ್ದಾನೆ. ಇದನ್ನು ಹಿಂದೂ ರಾಷ್ಟ್ರವೆಂದು ಆತ ಬಣ್ಣಿಸಿದ್ದಾನೆ. ಅಲ್ಲಿ ನಿತ್ಯಾನಂದ ಹೇಳಿದ್ದೇ ಶಾಸನ. ರಂಜಿತಾ ಹಾಗೂ ಆಕೆಯ ಸಹೋದರಿ ಸೇರಿದಂತೆ ಸಾಕಷ್ಟು ಜನ ಭಕ್ತರು ಆ ದೇಶದಲ್ಲಿದ್ದಾರೆ.
ಇದೇ ಮೊದಲ ಬಾರಿಗೆ ರಂಜಿತಾ ಕೈಲಾಸ ದೇಶದ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ್ದಾರೆ. ಮಹಿಳೆಯರಿಗೆ ಕೈಲಾಸ ಸ್ವರ್ಗವಾಗಿದೆ. ಮಹಿಳೆಯರ ಪ್ರಗತಿ, ಸಬಲೀಕರಣ ಮತ್ತು ಆಡಳಿತದಲ್ಲಿ ಸಮಾನ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಕೈಲಾಸ ದೇಶದ ಉದ್ದೇಶವಾಗಿದೆ ಎಂದು ನಿತ್ಯಾನಂದನ ಪರಮ ಶಿಷ್ಯೆಯಾಗಿರುವ ರಂಜಿತಾ ಕೈಲಾಸ ದೇಶಕ್ಕೆ ಭೇಟಿ ನೀಡಿದ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಉಚಿತ ಶಿಕ್ಷಣವು ಕೈಲಾಸದ ಅಡಿಪಾಯದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ. ಎಲ್ಲರನ್ನು ಒಳಗೊಂಡಂತೆ ಶಿಕ್ಷಣ ನೀಡಲಾಗುತ್ತದೆ.
ಪ್ರಾಣಿ ಹತ್ಯೆಯನ್ನು ನಿಷೇಧಿಸಲಾಗಿದೆ. ಅಹಿಂಸೆ ಮತ್ತು ಜೀವನದ ಗೌರವವನ್ನು ಉತ್ತೇಜಿಸುವಲ್ಲಿ ಕೈಲಾಸ ಪ್ರತಿಫಲಿಸುತ್ತದೆ. ಇಲ್ಲಿ ಮಹಿಳೆಯರನ್ನು ಅಂತಾರಾಷ್ಟ್ರೀಯ ಸಮ್ಮೇಳನಗಳಿಗೆ ಪ್ರತಿನಿಧಿಗಳಾಗಿ ಕಳುಹಿಸಲಾಗುತ್ತದೆ. ಕೈಲಾಸದ ಆಡಳಿತದ ಎಲ್ಲ ವಿಭಾಗಗಳಲ್ಲೂ ಮಹಿಳೆಯರಿಗೆ 33 ಪ್ರತಿಶತ ಮೀಸಲಾತಿಯನ್ನು ನಿತ್ಯಾನಂದ ಘೋಷಿಸಿದ್ದಾರೆ ಎಂದು ರಂಜಿತಾ ಹೇಳಿದ್ದಾರೆ.
ಇಂದು ಕೈಲಾಸದ ಶೇ. 98ರಷ್ಟು ಜವಾಬ್ದಾರಿಯನ್ನು ಮಹಿಳೆಯರೇ ಹೊತ್ತಿದ್ದಾರೆ. ಇದು ಮಹಿಳೆಯರಿಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ನಿತ್ಯಾನಂದನಿಗೆ ಹಣ ಅಥವಾ ವಸ್ತುಗಳನ್ನು ಗಳಿಸುವ ಯಾವುದೇ ಉದ್ದೇಶವಿಲ್ಲ. ಕೈಲಾಸವು ಯಾವಾಗಲೂ ಮಹಿಳೆಯರ ಪ್ರಗತಿಗೆ ಆದ್ಯತೆ ನೀಡುತ್ತದೆ ಎಂದು ರಂಜಿತಾ ಹಾಡಿ ಹೊಗಳಿದ್ದಾರೆ.
ವಿಶ್ವದಾದ್ಯಂತ ಇರುವ ಹಿಂದುಗಳಿಗೆ ಕೈಲಾಸ ಒಂದು ಭರವಸೆಯಾಗಿದೆ. ಮೊದಲ ಹಿಂದು ರಾಷ್ಟ್ರ ಎಂದು ಪರಿಕಲ್ಪನೆಯೊಂದಿಗೆ ನಿರ್ಮಾಣವಾಗಿದೆ. ಜೀವನವನ್ನು ಗೌರವಿಸುವ, ಶಿಕ್ಷಣವನ್ನು ಗೌರವಿಸುವ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಉತ್ತೇಜಿಸುವ ಸಾಮರಸ್ಯದ ಸಮಾಜದ ಭರವಸೆಗಳಿಂದ ಆಕರ್ಷಿತರಾದ ಜನರು ಕೈಲಾಸಕ್ಕೆ ವಲಸೆ ಹೋಗುತ್ತಿದ್ದಾರೆ. ಈ ರಾಷ್ಟ್ರದ ಸಂಸ್ಥಾಪಕ ಸ್ವಾಮಿ ನಿತ್ಯಾನಂದ ಅವರು ಪ್ರಕೃತಿಯೊಂದಿಗೆ ಪರಸ್ಪರ ಸಾಮರಸ್ಯದಿಂದ ಬದುಕುವ ಯುಟೋಪಿಯನ್ ರಾಷ್ಟ್ರವನ್ನು ರೂಪಿಸುತ್ತಾರೆ ಎಂದು ರಂಜಿತಾ ಹೇಳಿದ್ದಾರೆ.
