PM Kisan: 2018ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದ ಪಿಎಂ ಕಿಸಾನ್ (PM Kisan) ಯೋಜನೆಯಡಿ ರೈತರಿಗೆ ಪ್ರೋತ್ಸಾಹ ಧನವಾಗಿ ಕೇಂದ್ರದಿಂದ 6 ಸಾವಿರ, ರಾಜ್ಯದಿಂದ 4 ಸಾವಿರ ರೂ. ಪ್ರೋತ್ಸಾಹಧನವನ್ನು ವಾರ್ಷಿಕ 5 ಕಂತು ಗಳಲ್ಲಿ ನೀಡಲಾಗುತ್ತಿದೆ. ಈಗಾಗಲೇ ಕೇಂದ್ರ ದಿಂದ 13, ರಾಜ್ಯದಿಂದ 6 ಕಂತು ಗಳಲ್ಲಿ ಒಟ್ಟು 38,000 ರೂ. ರೈತರ ಖಾತೆಗೆ ಜಮೆಯಾಗಿದೆ. ಇದು ಮುಂದುವರಿ ಯಲು ಇ ಕೆವೈಸಿ ಕಡ್ಡಾಯ.
ಆದರೆ ಇ ಕೆವೈಸಿ ಮಾಡದ ಫಲಾನುಭವಿಗಳು ವಾರ್ಷಿಕ ಸಹಾಯಧನದಿಂದ ವಂಚಿತ ರಾಗದಂತೆ ನೋಡಿಕೊಳ್ಳುವ ಸಲುವಾಗಿ ಕೃಷಿ ಇಲಾಖೆಯು ಗ್ರಾ.ಪಂ. ಮೂಲಕ ಎನ್‌ಆರ್‌ಎಲ್‌ಎಂ ಸಂಸ್ಥೆ ನಿಯೋಜಿ ಸಿರುವ ಕೃಷಿ ಸಖೀಯರ ಮೂಲಕ ಸಮೀಕ್ಷೆ ನಡೆಸಿದಾಗ ಇಕೆವೈಸಿ ಮಾಡದೇ ಇರುವ ಹಲವಾರು ಕೃಷಿಕರ ಪಟ್ಟಿ ದೊರೆತಿದೆ.
ಹೌದು, ಪಿಎಂ ಕಿಸಾನ್ ಪ್ರೋತ್ಸಾಹಧನ ಪಡೆಯಲು ಇಕೆವೈಸಿ ಕಡ್ಡಾಯವಾಗಿದ್ದರೂ ಹಲವು ಜಿಲ್ಲೆಯ ಶೇಕಡಾ 20% ರಷ್ಟು ಕೃಷಿಕರು ಸಂಪರ್ಕಕ್ಕೇ ಸಿಗದಿರುವುದು ಸಮೀಕ್ಷೆ ಯಿಂದ ಬೆಳಕಿಗೆ ಬಂದಿದೆ.
ಜೂ. 13ರಿಂದ ಜು. 7ರ ವರೆಗೆ ಸಮೀಕ್ಷೆ ನಡೆದಿತ್ತು. ಇಕೆವೈಸಿಗೆ ಜೂ. 30 ಕೊನೆಯ ದಿನವೆಂದು ಘೋಷಿಸಿದ್ದರೂ ಇನ್ನೂ ಕಾಲವಕಾಶವಿದೆ. ಸರಕಾರ ಶೀಘ್ರದಲ್ಲೇ ನೋಂದಣಿ ಆ್ಯಪ್ ಸ್ಥಗಿತಗೊಳಿಸುವ ಮುನ್ನ ನಮೂದಿಸಿದರಷ್ಟೆ ಯೋಜನೆಯ ನೇರ ಲಾಭ ಪಡೆಯಬಹುದಾಗಿದೆ. ನಿರ್ಲಕ್ಷ್ಯ ತೋರಿದವರು ವಾರ್ಷಿಕ 10 ಸಾವಿರ ರೂ. ಸಹಾಯಧನದಿಂದ ವಂಚಿತರಾಗಲಿದ್ದಾರೆ.
ಸದ್ಯ ಇ ಕೆವೈಸಿ ಮಾಡಿಸದೇ ಇರುವ ರೈತರ ಪಟ್ಟಿಯನ್ನು ಗ್ರಾ.ಪಂ.ಗಳ ನೋಟಿಸ್ ಬೋರ್ಡ್‌ನಲ್ಲಿ ಅಳವಡಿಸಲು ಇಲಾಖೆ ಮುಂದಾಗಿದ್ದು, ಸಂಬಂಧಪಟ್ಟವರು ತತ್‌ಕ್ಷಣ ಮಾಡಿಸಿಕೊಳ್ಳಬೇಕು ಎಂದು ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಇ ಕೆವೈಸಿ ಅಂದರೆ ರೈತರು ಹತ್ತಿರದ ಸೈಬರ್ ಸೆಂಟರ್ ಅಥವಾ ರೈತ ಸಂಪರ್ಕ ಕೇಂದ್ರ, ಗ್ರಾ.ಪಂ. ಅಥವಾ ಗ್ರಾಮ ಒನ್‌ಗಳಲ್ಲಿ ಸಂಪರ್ಕಿಸಿ ಆಧಾರ್ ಸಂಖ್ಯೆ ಹಾಗೂ ಆಧಾರ್‌ಗೆ ಜೋಡಣೆಯಾದ ಮೊಬೈಲ್ ಸಂಖ್ಯೆಯನ್ನು (pmkisanekyc) ವೆಬ್ ಸೈಟ್‌ನಲ್ಲಿ ದಾಖಲಿಸಬೇಕು. ಆಧಾರ್‌ಗೆ ಜೋಡಣೆಯಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿದಾಗ ಇಕೆವೈಸಿ ಆದಂತೆ.
ಇದನ್ನು ಓದಿ: Jain Muni murder: ಜೈನ ಮುನಿ ಹತ್ಯೆ ಹಿಂದೆ ಮುಸ್ಲಿಂ ಉಗ್ರ ಸಂಘಟನೆ ಐಸಿಎಸ್ ಕೈವಾಡ ?!
