PM Kisan 14th installment: ಕೇಂದ್ರ ಸರ್ಕಾರ (government ) ರೈತರಿಗಾಗಿ ಹಲವಾರು ಯೋಜನೆಗಳನ್ನು ನೀಡುತ್ತಿದೆ. ಅವುಗಳಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯು ರೈತರ ಉನ್ನತಿಗಾಗಿ ಭಾರತ ಸರ್ಕಾರ ನಡೆಸುತ್ತಿರುವ ಪ್ರಮುಖ ಯೋಜನೆಯಾಗಿದೆ.
ಈಗಾಗಲೇ 2018ರಲ್ಲಿ ಆರಂಭವಾದ ಈ ಯೋಜನೆಯಡಿ ರೈತರಿಗೆ ಪ್ರತಿ ವರ್ಷ ಮೂರು ಕಂತುಗಳಲ್ಲಿ 6,000 ರೂ. ಈ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತಿತ್ತು. ಇದೀಗ ದೇಶದ ರೈತರಿಗೆ ಮಹತ್ವ ಸುದ್ದಿಯೊಂದು ಹೊರಬಿದ್ದಿದೆ. ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನಡಿ ರೂ.2 ಸಾವಿರ ಪಡೆಯಲು ಬಯಸುವ ರೈತರು ಈ ಐದು ಕೆಲಸಗಳನ್ನು ಮಾಡಿದರೆ ಮಾತ್ರ ಹಣ ಬರುತ್ತದೆ ಎಂದು ಸರ್ಕಾರವು ಸೂಚಿಸಿದೆ.
ಮೋದಿ ಸರ್ಕಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ (PM Kisan Samman Nidhi) ಕೇಂದ್ರ ಸರ್ಕಾರ ಇಲ್ಲಿಯವರೆಗೆ 2,000 ರೂಗಳ 13 ಕಂತುಗಳನ್ನು ಬಿಡುಗಡೆ ಮಾಡಿದೆ.ಇನ್ನು 14ನೇ ಕಂತಿನಡಿ ರೂ. 2 ಸಾವಿರ ಬರಬೇಕಿದೆ.ಈ ಹಣ ಈಗಾಗಲೇ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಬೇಕಿದ್ದು, ಆದರೆ ಕೇಂದ್ರ ಸರ್ಕಾರ ಇನ್ನೂ ಈ ಹಣವನ್ನು ಅನ್ನದಾತರ ಬ್ಯಾಂಕ್ ಖಾತೆಗೆ ಜಮಾ ಮಾಡಿಲ್ಲ. ಹಾಗಾಗಿ ಪಿಎಂ ಕಿಸಾನ್ ಯೋಜನೆಯಡಿ 14 ನೇ ಕಂತಿನ (pm Kisan 14th installment) ಅಡಿಯಲ್ಲಿ ಲಾಭ ಪಡೆಯುವ ರೈತರಿಗೆ ರೂ. 2 ಸಾವಿರ ಪಡೆಯಬೇಕಾದರೆ ಮಾಡಬೇಕಾದ ಐದು ಕೆಲಸಗಳು ಯಾವುವು ಎಂಬುದನ್ನು ನೋಡೋಣ.
* ಬ್ಯಾಂಕ್ ಖಾತೆಯು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿದೆಯೇ ? ಎಂಬುದನ್ನು ಪರಿಶೀಲಿಸಿರಿ. ಆಗಿಲ್ಲದಿದ್ದರೆ ಬ್ಯಾಂಕ್ ಖಾತೆಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿರಿ.
* ಆಧಾರ್ ಸೀಡಿಂಗ್ ಬ್ಯಾಂಕ್ ಖಾತೆ ಸ್ಥಿತಿಯನ್ನು ಸಹ ಪರಿಶೀಲಿಸಿ. ನೀವು ಈ ಕೆಳಗೆ ನೀಡಲಾದ ವೆಬ್ಸೈಟ್ ಮೂಲಕ ಪರಿಶೀಲಿಸಬಹುದು. https://resident.uidai.gov.in/bank-mapper
* ಆಧಾರ್ ಸೀಡಿಂಗ್ ಬ್ಯಾಂಕ್ ಖಾತೆಗೆ ಡಿಬಿಟಿ ಆಯ್ಕೆಯನ್ನು ಸಕ್ರಿಯಗೊಳಿಸಲಾಗಿದೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಿ.
*ಒಂದು ವೇಳೆ ನೀವು ಇ–ಕೆವೈಸಿ(E- KYC) ಮಾಡಿಸಿಲ್ಲ ಎಂದಾದರೆ ತಕ್ಷಣವೇ ಆ ಕೆಲಸ ಮಾಡಿಬಿಡಿ. ಪಿಎಂ ಕಿಸಾನ್ ಅಪ್ಲಿಕೇಶನ್‌ನಲ್ಲಿ ಆಧಾರ್ ಮುಖದ ದೃಢೀಕರಣ ವೈಶಿಷ್ಟ್ಯವನ್ನು ಸಹ ಲಭ್ಯಗೊಳಿಸಲಾಗಿದೆ.
* ಆಧಾರ್ ಸೀಡಿಂಗ್ ಸ್ಥಿತಿಯನ್ನು ಪರಿಶೀಲಿಸಲು ಪಿಎಂ ಕಿಸಾನ್ ಪೋರ್ಟಲ್ (https://pmkisan.gov.in/) ಗೆ ಭೇಟಿ ನೀಡಬೇಕು. ಅಲ್ಲಿ ‘ನೋ ಯುವರ್ ಸ್ಟೇಟಸ್’ ಆಯ್ಕೆಯ ಮೂಲಕ ತಿಳಿದುಕೊಳ್ಳಬಹುದು.
ಈ ಎಲ್ಲಾ ವಿವರಗಳು ಸರಿಯಾಗಿದ್ದರೆ ಮಾತ್ರ ನಿಮಗೆ 14 ನೇ ಕಂತು ಸಿಗುತ್ತದೆ. ಹಾಗಾಗಿ ಜಾಗರೂಕತೆಯಿಂದ ಈ ಐದು ಅಂಶಗಳನ್ನು ತಕ್ಷಣವೇ ಪರಿಶೀಲಿಸಿ. ಇಲ್ಲದಿದ್ದರೆ ನಿಮ್ಮ 14ನೇ ಕಂತು ಕೈತಪ್ಪಿ ಹೋಗುವ ಸಾಧ್ಯತೆಗಳಿವೆ. ಇವುಗಳಲ್ಲಿ ಏನಾದರೂ ಸಮಸ್ಯೆ ಇದ್ದರೆ ತಕ್ಷಣ ಸರಿಪಡಿಸಿಕೊಳ್ಳಿ.
