Home » BJP MLA Munirathna: ಶಾಸಕ ಮುನಿರತ್ನ ಸ್ಟುಡಿಯೋ ಇರೋದು ಹನಿ ಟ್ರಾಪ್ ಮಾಡಲು: ಮುನಿ ಆಪ್ತನಿಂದಲೇ ಆರೋಪ !

BJP MLA Munirathna: ಶಾಸಕ ಮುನಿರತ್ನ ಸ್ಟುಡಿಯೋ ಇರೋದು ಹನಿ ಟ್ರಾಪ್ ಮಾಡಲು: ಮುನಿ ಆಪ್ತನಿಂದಲೇ ಆರೋಪ !

by Mallika
0 comments
BJP MLA Munirathna

BJP MLA Munirathna: ಮಾಜಿ ಸಚಿವ, ಬಿಜೆಪಿ ಶಾಸಕ ಮುನಿರತ್ನ(BJP MLA Munirathna) ವಿರುದ್ಧ ಹನಿಟ್ರ್ಯಾಪ್(Honeytrap) ಕುರಿತು ಗಂಭೀರ ಆರೋಪ ಕೇಳಿಬಂದಿದೆ. ಹನಿಟ್ರ್ಯಾಪ್ ಮಾಡಲೆಂದೇ ಸ್ಟುಡಿಯೋ ಇಟ್ಟುಕೊಂಡಿದ್ದಾರೆ ಎಂದು ಅವರ ಆಪ್ತ ಬೆಂಬಲಿಗ, ಬಿಬಿಎಂಪಿ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ (Velu naykar) ಗಂಭೀರ ಆರೋಪ ಮಾಡಿದ್ದಾರೆ.

ಶಾಸಕ ಮುನಿರತ್ನ ಬೆಂಬಲಿಗರಾಗಿದ್ದ ವೇಲು ನಾಯ್ಕರ್ ನಿನ್ನೆ (ಜುಲೈ 23) ಬಿಜೆಪಿ (BJP) ತೊರೆದು ಕಾಂಗ್ರೆಸ್​ ಸೇರ್ಪಡೆಯಾದರು. ಈ ವೇಳೆ ಮಾತನಾಡಿದ ವೇಲು ನಾಯ್ಕರ್, ಹನಿಟ್ರ್ಯಾಪ್ ಮಾಡಲು ಹೆದರಿಸಲು, ಜೆ.ಪಿ.ಪಾರ್ಕ್‌, ಡಾಲರ್ಸ್‌ ಕಾಲೋನಿಯಲ್ಲಿ ಇದಕ್ಕಾಗಿ ಸ್ಟುಡಿಯೋ(studio) ಇಟ್ಟಿದ್ದಾರೆ. ಅವರು ಸಿನಿಮಾ ನಿರ್ಮಾಪಕರಲ್ಲವೇ. ಹೀಗಾಗಿ ಹನಿಟ್ರ್ಯಾಪ್ ಮಾಡಿಸಿ ಹೆದರಿಸುತ್ತಾರೆ ಎಂದರು.

ಮುನಿರತ್ನಗೆ ಚುನಾವಣೆ ಎದುರಿಸುವುದು ಹೇಗೆ ಎಂದು ಕೇಳಿದಾಗ, ನಿಮ್ಮದು ಈಸ್ಟ್‌ಮನ್ ಕಲರ್ ಪಿಕ್ಚರ್‌ ಇದೆ ತೋರಿಸಲಾ? ಇಲ್ಲ ಕೆಲಸ ಮಾಡುತ್ತೀರಾ ಅಂತಾ ಮುನಿರತ್ನ ಹೆದರಿಸುತ್ತಿದ್ದರು. ಹನಿಟ್ರ್ಯಾಪ್ ಮಾಡುವುದಕ್ಕೆಂದೇ ಮುನಿರತ್ನ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಕರೆಸುವುದು, ಹನಿಟ್ರ್ಯಾಪ್ ಮಾಡುವುದು, ಅದನ್ನು ಇಟ್ಟುಕೊಂಡು ಹೆದರಿಸುವುದು ಮಾಡುತ್ತಾರೆ ಎಂದು ವೇಲು ಆರೋಪಿಸಿದರು. ಮುನಿರತ್ನ (Munirathna) ನಿರ್ಮಾಪಕನಾಗಿ ಮಾಡಿದ ಮೊದಲ ಚಿತ್ರ ಆಂಟಿ ಪ್ರೀತ್ಸೆ. ಹೀಗಾಗಿ ಮುನಿರತ್ನ ಸಚಿವರಾದ ಮೇಲೂ ಬರೀ ಆಂಟಿಗಳೇ ಇರುತ್ತಿದ್ದರು. ವಿಕಾಸಸೌಧ, ವಿಧಾನಸೌಧ(Vidhansoudha) ಚೇಂಬರ್‌ನಲ್ಲೆಲ್ಲಾ ಬರೀ ಆಂಟಿಗಳೇ ಇರುತ್ತಿದ್ದರು ಎಂದು ಆರೋಪಿಸಿದರು.

ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗುತ್ತಿದ್ದು, ಇದಕ್ಕಾಗಿ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದೆ.ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಅವರ ಬೆಂಬಲಿಗರನ್ನು ಕಾಂಗ್ರೆಸ್​ಗೆ ಸೆಳೆಯುವಲ್ಲಿ ಡಿಕೆ ಸಹೋದರರು(DK Shivakumar and DK Suresh) ಯಶಸ್ವಿಯಾಗಿದ್ದಾರೆ. ಶಾಸಕ ಮುನಿರತ್ನ ಬೆಂಬಲಿಗರ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಮಾಜಿ ಬಿಬಿಎಂಪಿ ಸದಸ್ಯರುಗಳಾದ ವೇಲು ನಾಯ್ಕರ್​, ಮೋಹನ್​ ಕುಮಾರ್​ ಹಾಗೂ ಶ್ರೀನಿವಾಸ ಮೂರ್ತಿ ಬಿಜೆಪಿ ತೊರೆದು ಜುಲೈ 23ರಂದು ಕಾಂಗ್ರೆಸ್​(congress) ಸೇರ್ಪಡೆಯಾಗಿದ್ದಾರೆ.

You may also like

Leave a Comment