Home » Karnataka BJP : ಕೊನೆಗೂ ಕರ್ನಾಟಕ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕ !!

Karnataka BJP : ಕೊನೆಗೂ ಕರ್ನಾಟಕ ಬಿಜೆಪಿಗೆ ಹೊಸ ರಾಜ್ಯಾಧ್ಯಕ್ಷರ ನೇಮಕ !!

by ಹೊಸಕನ್ನಡ
1 comment
Karnataka BJP

Karnataka BJP: ಕರ್ನಾಟಕದಲ್ಲಿ ಬಿಜೆಪಿಯ(karnataka BJP) ಪಾಡಂತೂ ಹೇಳುತೀರದಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ(Assembly election) ಸೋಲುಂಡ ಬಳಿಕವಂತೂ ಸಮರ್ಥ ನಾಯಕನಿಲ್ಲದೆ, ಉತ್ತಮ ರಾಜ್ಯಾಧ್ಯಕ್ಷನಿಲ್ಲದೆ ಬಿಜೆಪಿ ಅತಂತ್ರವಾಗಿ ಬಿಟ್ಟಿದೆ. ಅದರಲ್ಲೂ ನಾಯಕರುಗಳ ಕಚ್ಚಾಟ, ಅವರ ಒಳ ಜಗಳ, ಒಳ ಭಿನ್ನಾಭಿಪ್ರಾಯಗಳಿಂದ ಪಕ್ಷ ನೆನೆಗುಂದಿದೆ. ಇನ್ನು ಹೈಕಮಾಂಡ್ ಮಾಡುತ್ತಿರುವ ನಿರ್ಲಕ್ಷ್ಯವಂತೂ ನಾಯಕನಿಗೆ ಬೇಸರ ತರಿಸಿದೆ. ಈ ನಡುವೆ ಬಿಜೆಪಿ ಹೊಸ ರಾಜ್ಯಾಧ್ಯಕ್ಷರ ಕೂಗು ಮತ್ತೆ ಶುರುವಾಗಿದ್ಧು, ಕೊನೆಗೂ ಅದಕ್ಕೆ ಕಾಲ ಕೂಡಿಬಂದಂತಾಗಿದೆ.

ಹೌದು, ರಾಜ್ಯ ಬಿಜೆಪಿ ಘಟಕದಲ್ಲಿ ಮತ್ತೆ ಹೊಸ ರಾಜ್ಯಾಧ್ಯಕ್ಷರ ನೇಮಕದ ವಿಚಾರ ಗರಿಗೆದರಿದೆ. ಈ ವಾರದಲ್ಲಿಯೇ ಹೊಸ ಅಧ್ಯಕ್ಷರ ನೇಮಕ ಆಗುವ ಎಲ್ಲಾ ಸಾಧ್ಯತೆಗಳು ಇವೆ. ಅಂದಹಾಗೆ ಈಗಾಗಲೇ ಪುದುಚೇರಿ, ನಾಗಾಲ್ಯಾಂಡ್‌, ಮೇಘಾಲಯ ರಾಜ್ಯ ಘಟಕಗಳಿಗೆ ಅಧ್ಯಕ್ಷರ ನೇಮಕವನ್ನು ಬಿಜೆಪಿ ವರಿಷ್ಠರು ಮಾಡಿದ್ದಾರೆ. ಹೀಗಾಗಿ ರಾಜ್ಯ ಘಟಕಕ್ಕೆ ಹೊಸ ನಾಯಕನನ್ನು ನೇಮಕ ಮಾಡುವ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.

ಯಾರಾಗುತ್ತಾರೆ ಹೊಸ ರಾಜ್ಯಾಧ್ಯಕ್ಷ?
ಚಿಕ್ಕಮಗಳೂರು ಮಾಜಿ ಶಾಸಕ, ಬಿಜೆಪಿ ಪ್ರಬಲ ನಾಯಕ ಸಿಟಿ ರವಿ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಇಳಿಸಿದ ಬಳಿಕ ಅವರಿಗೆ ರಾಜ್ಯಾಧ್ಯಕ್ಷ ಪಟ್ಟ ಎಂಬ ಮಾತು ಎಲ್ಲೆಡೆ ಕೇಳಿಬಂದಿತ್ತು. ಆದರೀಗ ಅದು ತಣ್ಣಗಾಗಿದೆ. ಆದರೆ ಕೊನೇಗಳಿಗೆಯಲ್ಲೂ ಅವರಿಗೆ ಅಧ್ಯಕ್ಷ ಸ್ಥಾನ ಸಿಕ್ಕರೂ ಸಿಗಬಹುದು.

ಇನ್ನು ಬಿ.ವೈ. ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡುತ್ತಾರೆ ಎಂಬ ಮಾತು ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಪಕ್ಷ ಚಟುವಟಿಕೆಯಲ್ಲಿ ಯಡಿಯೂರಪ್ಪ ಮತ್ತೆ ಸಕ್ರಿಯರಾಗಿದ್ದಾರೆ. ನಾಯಕರೆಲ್ಲರಿಂದ ಮೂಲೆ ಗುಂಪಾಗಿದ್ದ ಯಡಿಯೂರಪ್ಪನವರೀಗ ಮತ್ತೆ ಸಕ್ರಿಯರಾಗಿದ್ಧು ಈ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಒಟ್ಟಾರೆ ಈ ವಾರದೂಳಗೆ ರಾಜ್ಯಾಧ್ಯಕ್ಷರ ಆಯ್ಕೆ ಪಕ್ಕಾ ಆಗಿದೆ ಎನ್ನಲಾಗಿದೆ.

 

ಇದನ್ನು ಓದಿ: ಜಿಮ್ನಾಸ್ಟಿಕ್ಸ್‌ನಲ್ಲಿ ವರ್ಣಭೇದ! ಕಪ್ಪು ಬಣ್ಣದವಳೆಂದು ಪುಟ್ಟ ಬಾಲೆಗೆ ಪದಕ ನೀಡದೆ, ಕಡೆಗಣನೆ!!! ವೀಡಿಯೋ ವೈರಲ್‌

You may also like

Leave a Comment