Home » Crime news: ಪ್ರಾಂಶುಪಾಲನಿಂದ ಹೀನ ಕೃತ್ಯ! 2 ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬಾತ್ ರೂಂ ಕರೆದುಕೊಂಡು ಹೋಗಿ ಖಾಸಗಿ ಭಾಗ ಸ್ವಚ್ಛಗೊಳಿಸಿದ ಕಾಮುಕ!

Crime news: ಪ್ರಾಂಶುಪಾಲನಿಂದ ಹೀನ ಕೃತ್ಯ! 2 ನೇ ತರಗತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬಾತ್ ರೂಂ ಕರೆದುಕೊಂಡು ಹೋಗಿ ಖಾಸಗಿ ಭಾಗ ಸ್ವಚ್ಛಗೊಳಿಸಿದ ಕಾಮುಕ!

0 comments
Crime news

Crime news: ಆಧುನಿಕ ಜೀವನದಲ್ಲಿ ಎಷ್ಟೇ ತಂತ್ರಜ್ಞಾನದ ಬೆಳವಣಿಗೆ ಆಗಿದ್ದರೂ, ಮನುಷ್ಯ ಕ್ರೂರವಾಗಿ (Crime news) ವರ್ತಿಸುತ್ತಿರುವುದು ನಾವು ಹಲವಾರು ಕಡೆ ಕೇಳಿದ್ದೇವೆ ಮತ್ತು ನೋಡಿದ್ದೇವೆ.

ಅಂತೆಯೇ, ನರದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿ ನಿನ್ನೆ ಬೆಳಗ್ಗೆ ಎಂದಿನಂತೆ ಶಾಲೆಗೆ ಹೋಗಿದ್ದಳು. ಆದರೆ ಶಾಲೆಯಲ್ಲಿರುವಾಗ ವಿಶ್ರಾಂತಿ ಕೊಠಡಿಗೆ ಕರೆದೊಯ್ದ ಪ್ರಾಂಶುಪಾಲ ವಿದ್ಯಾರ್ಥಿನಿ ಮೇಲೆ ಕಾಮುಕ ವಿಕೃತಿ ಮೆರೆದು ನಂತರ ಕೇಕ್ ನೀಡಿ‌ ಕಳುಹಿಸಿದ್ದ.

ಆದರೆ ಸಂಜೆ ವಿದ್ಯಾರ್ಥಿನಿ ಮನೆಗೆ ಬಂದಾಗ ಹೊಟ್ಟೆನೋವು ಎಂದು ಪೋಷಕರ ಬಳಿ ನೋವು ಎಂದು ನರಳಾಡಿದ್ದು, ಆಗ ತಾಯಿಯು, ಮಗಳ ಒಳ ಉಡುಪಿನಲ್ಲಿ ರಕ್ತಸ್ರಾವವಾಗಿರುವುದನ್ನ ಗಮನಿಸಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

ಈ ಬಗ್ಗೆ ಮಗಳನ್ನು ಪ್ರಶ್ನಿಸಿದಾಗ ‘ನಿನ್ನೆ ಬೆಳಗ್ಗೆ 11.30 ರ ವೇಳೆ ಪ್ರಾಂಶುಪಾಲರು ಅವರ ರೂಮ್ ಗೆ ಕರೆದೊಯ್ದಿದ್ದಾರೆ. ಬಾಗಿಲು ಹಾಗೂ ಕಿಟಕಿ ಮುಚ್ಚಿ ಮಲಗಿ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಬಳಿಕ ನನ್ನ ಒಳ ಉಡುಪು ತೆಗೆದು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.

ನೋವಾಗುತ್ತದೆ ಎಂದು ಜೋರಾಗಿ ಅತ್ತಾಗ ನನಗೆ ಹೆದರಿಸಿದ್ದಾರೆ. ಬಾತ್ ರೂಮ್ ಗೆ ಕರೆದೊಯ್ದು ಖಾಸಗಿ ಭಾಗವನ್ನ ಸ್ವಚ್ಚಗೊಳಿಸಿದ್ದಾರೆ. ಪ್ರತಿದಿನ ಇದೇ ರೀತಿ ಮಾಡುವುದಾಗಿ ಹೇಳಿ ಕೇಕ್ ನೀಡಿ ಕಳುಹಿಸಿದ್ದರು ಎಂದು ತಾಯಿ ಬಳಿ ಹೇಳಿಕೊಂಡಿದ್ದಳು.

ಇದೀಗ ವಿದ್ಯಾರ್ಥಿನಿ ಮೇಲೆ ಶಾಲೆಯ ಪ್ರಾಂಶುಪಾಲ ಹಾಗೂ ಸಂಸ್ಥಾಪಕ ಆತ್ಯಾಚಾರವೆಸಗಿದ ಆರೋಪ ಹಿನ್ನೆಲೆ ವರ್ತೂರು ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.

ಶಿಕ್ಷಣ ಕೊಟ್ಟು ಸಲಹುವವರೇ ಈ ರೀತಿ ಮಾಡಿದರೆ ಮಕ್ಕಳಿಗೆ ಎಲ್ಲಿದೆ ರಕ್ಷಣೆ ಎಂದು ಸಾರ್ವಜನಿಕರು ಆಕ್ರೋಶಗೊಂಡಿದ್ದು, ಪ್ರಾಂಶುಪಾಲರನ್ನು ಅಮಾನತ್ತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

 

ಇದನ್ನು ಓದಿ: Friendship Day 2023: ಹುಡುಗ-ಹುಡುಗಿ ಎಂದಿಗೂ ಸ್ನೇಹಿತರಾಗಿರಲು ಸಾಧ್ಯವಿಲ್ಲ?! ಅಧ್ಯಯನದಲ್ಲಿ ಹೊರಬಿದ್ದಿದೆ ಕಟು ಸತ್ಯ 

You may also like