RTO Rules Break: ಮಹಿಳೆಯರಿಗೆ ಉಚಿತವಾಗಿ ಪ್ರಯಾಣ ಕಲ್ಪಿಸಿದ ಶಕ್ತಿ ಯೋಜನೆ ಜಾರಿಯಾಗುವ ಮೊದಲು ನಿತ್ಯ ಸರಾಸರಿ 84.14 ಲಕ್ಷ ಜನರು ಬಸ್‌ನಲ್ಲಿ ಸಂಚಾರ ಮಾಡುತ್ತಿದ್ದರು. ಶಕ್ತಿ ಯೋಜನೆ ಜಾರಿಯಾದ ಕೇವಲ ಐದು ದಿನಗಳಲ್ಲೇ ಸರಾಸರಿ 1.12 ಕೋಟಿ ಪ್ರಯಾಣಿಕರು ನಿತ್ಯವೂ ಸಂಚರಿಸಿದ್ದಾರೆ. ಶಕ್ತಿ ಯೋಜನೆ ಶುರುವಾದ ಬಳಿಕ ಕಾಲಿಗೆ ಚಕ್ರ ಕಟ್ಟಿದಂತೆ ಮನೆ ಬಿಟ್ಟು ಟೂರ್ ಹೊಡೆಯುತ್ತಿದ್ದ ಮಹಿಳಾಮಣಿಗಳ ಸಂಖ್ಯೆ ಕೊಂಚ ಇಳಿಮುಖವಾಗಿದೆ. ಈ ನಡುವೆ ಶಕ್ತಿ ಯೋಜನೆಯ ಕುರಿತಾದ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ.
ಈಗಾಗಲೇ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಮಹಿಳಾಮಣಿಗಳು ನೂಕು ನುಗ್ಗಲಿನಿಂದ ಓಡಾಡುವುದು ಸಾಮಾನ್ಯವಾಗಿ ಬಿಟ್ಟಿದ್ದು, ಬಸ್ಸಿನಲ್ಲಿ ನಿಲ್ಲಲು ಜಾಗವಿಲ್ಲದೆ ಪ್ರಯಾಣಿಕರ ಒದ್ದಾಡುವ ಪರಿಸ್ಥಿತಿ ಕೂಡ ನಿರ್ಮಾಣವಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಪ್ರಯಾಣಿಕರನ್ನು ಬಸ್ಸಿನಲ್ಲಿ ಕರೆದೊಯ್ಯುವುದು ಮೋಟಾರ್ ವೆಹಿಕಲ್ ಆಕ್ಟ್ ನ ಉಲ್ಲಂಘನೆಯಾಗಿದೆ. ಇದರಿಂದಾಗಿ ಸಾರಿಗೆ ನಿಗಮಗಳಿಗೆ ನೊಟೀಸ್ ನೀಡುವ ಮೂಲಕ ಕ್ರಮ ಕೈಗೊಳ್ಳಲು ಇಲ್ಲವೇ ಇದಕ್ಕೂ ಒಂದು ವೇಳೆ ಸಾರಿಗೆ ನಿಗಮ ಎಚ್ಚೆತ್ತುಕೊಳ್ಳದಿದ್ದರೆ ದಂಡ ವಿಧಿಸುವ ಮೂಲಕ ಕ್ರಮ ಕೈಗೊಳ್ಳಲು ಚಿಂತನೆ ನಡೆದಿದೆ ಎನ್ನಲಾಗಿದೆ.
ಮೊಟಾರ್ ವೆಹಿಕಲ್ ಆಕ್ಟ್ ಪ್ರಕಾರ ಬಸ್ಗ ಳಲ್ಲಿ ಇಷ್ಟೇ ಪ್ರಯಾಣಿಕರನ್ನು ಹೊತ್ತೊಯ್ಯಬೇಕೆನ್ನುವ ನಿಯಮವನ್ನು ಉಲ್ಲೇಖ ಮಾಡಲಾಗಿದೆ.ಅದರ ಅನುಸಾರ,ಹೆಚ್ಚು ಎಂದರೆ 55 ಸಿಟ್ಟಿಂಗ್ ಹಾಗು 15 ಸ್ಟ್ಯಾಂಡಿಂಗ್ ನಲ್ಲಿ ಪ್ರಯಾಣಿಕರು ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಶಕ್ತಿ ಯೋಜನೆ ಎಫೆಕ್ಟ್ ಅನ್ನೋ ಹಾಗೆ ಬಸ್ಸಿನಲ್ಲಿ ಜನರು ತುಂಬಿ ನಿಲ್ಲಲು ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಸಂಚರಿಸುವ ಪ್ರಯಾಣಿಕರಿಗೆ ಸೆಕ್ಷನ್ 194-ಎ ನ ಅನ್ವಯ ಪ್ರತಿ ಪ್ರಯಾಣಿಕರಿಗೆ 200 ರು ದಂಡ ವಿಧಿಸಲು ಅವಕಾಶವಿದೆ.
ಒಂದು ವೇಳೆ ಆರ್ ಟಿ ಓ ದಂಡ ಪ್ರಯೋಗಿಸಿದಲ್ಲಿ ಶಕ್ತಿ ಯೋಜನೆಗೆ ಕಳಂಕ ಬರುವ ಸಾಧ್ಯತೆ ಇದೆ. ಹೀಗಾಗಿ, RTO ಈ ಕ್ರಮ ಜಾರಿಗೆ ತಂದರೆ ಆಕ್ಟ್ ಉಲ್ಲಂಘನೆಯಾಗುತ್ತಿರುವುದರಿಂದ ಕೇವಲ ಹೆಚ್ಚುವರಿಯಾಗಿ ಪ್ರಯಾಣಿಸುವ ಪ್ರಯಾಣಿಕರಿಗೆ ದಂಡ ವಿಧಿಸುವುದು ಮಾತ್ರವಲ್ಲದೇ ಅವರನ್ನು ಹೊತ್ತೊಯ್ಯುವ ಡ್ರೈವರ್-ಕಂಡಕ್ಟರ್ ಗೂ ದಂಡ ವಿಧಿಸುವ ಸಾಧ್ಯತೆ ಇದೆ.ಈ ನಡುವೆ, ಆರ್ ಟಿಐ ತನ್ನ ನಿಯಮಗಳನ್ನು ಪಾಲಿಸಲಿದೆಯೆ ಅಥವಾ ಅದರಲ್ಲಿ ರಿಯಾಯತಿ ನೀಡಲಿದೆಯೇ ಎಂಬ ಪ್ರಶ್ನೆಗೆ ಉತ್ತರ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ.
ಇದನ್ನು ಓದಿ: No DL Scooters: ಈ ಸ್ಕೂಟರ್’ಗೆ DL ಬೇಕಿಲ್ಲ, ರಿಜಿಸ್ಟ್ರೇಷನ್ ಫೀಸ್ ಪೂರ್ತಿ ಉಚಿತ ! ಕೆಲವೇ ದಿನಗಳ ಆಫರ್ !?
