Home » Seema Haider: ಪಾಕ್ – ಇಂಡಿಯಾ ಪಬ್ಜಿ ಪ್ರೇಮ ಪ್ರಕರಣ ; ನಾಲ್ಕು ಮಕ್ಕಳ ತಾಯಿ ಸೀಮಾ ಗರ್ಭಿಣಿ ?!

Seema Haider: ಪಾಕ್ – ಇಂಡಿಯಾ ಪಬ್ಜಿ ಪ್ರೇಮ ಪ್ರಕರಣ ; ನಾಲ್ಕು ಮಕ್ಕಳ ತಾಯಿ ಸೀಮಾ ಗರ್ಭಿಣಿ ?!

0 comments
Seema Haider

Seema Haider: ಇತ್ತೀಚಿನ ದಿನಗಳಲ್ಲಿ ಇಡೀ ದೇಶದಲ್ಲೇ ಭಾರೀ ಅಚ್ಚರಿ ಮೂಡಿಸುತ್ತಿರುವ, ಆನ್‌ಲೈನ್‌ ಗೇಮ್‌ ಪಬ್ಜಿ (PUBG) ಪ್ರೇಮಿಗಾಗಿ ಕಟ್ಟಿಕೊಂಡ ಗಂಡನನ್ನೇ ಬಿಟ್ಟು, ತನ್ನ 4 ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮ ಪ್ರವೇಶ ಮಾಡಿದ ಪಾಕಿಸ್ತಾನದ (Pakistani National) ಮಹಿಳೆ ಸೀಮಾ ಹೈದರ್‌ (Seema Haider) ಪ್ರಕರಣದ ಬಗ್ಗೆ ಎಲ್ಲರಿಗೂ ಗೊತ್ತಿರುವಂತದ್ದೆ. ಆದರೆ, ದಿನಕಳೆದಂತೆ ಈ ಪ್ರಕರಣ ದಿನಕ್ಕೊಂದು ಸ್ಫೋಟಕ ಟ್ವಿಸ್ಟ್‌ ಪಡೆದುಕೊಳ್ಳುತ್ತಿದೆ. ಇದೀಗ ಹೊಸ ವಿಚಾರಗಳು ಬೆಳಕಿಗೆ ಬಂದಿದ್ದು, 30 ವರ್ಷದ ಸೀಮಾ ಹೈದರ್ ಶೀಘ್ರದಲ್ಲೇ ಐದನೇ ಮಗುವಿಗೆ ಜನ್ಮ ನೀಡಲಿದ್ದಾಳೆ ಎಂದು ವರದಿ ತಿಳಿಸಿದೆ.

ಪಾಕಿಸ್ತಾನ ಮೂಲದ ನಾಲ್ಕು ಮಕ್ಕಳ ತಾಯಿ ಸೀಮಾ ಮತ್ತೆ ಗರ್ಭಿಣಿಯಾಗಿದ್ದಾಳೆ ಎಂದು ಹೇಳಲಾಗುತ್ತಿದೆ. ನೋಯ್ಡಾ ವ್ಯಕ್ತಿ ಸಚಿನ್ ಮೀನಾ ಕೆಲ ದಿನಗಳ ಹಿಂದಷ್ಟೇ ಸೀಮಾಳನ್ನು ವೈದ್ಯಕೀಯ ತಪಾಸಣೆಗೆ ಕರೆದುಕೊಂಡು ಹೋಗಿದ್ದರು ಎಂದು ತಿಳಿದುಬಂದಿದೆ.‌

ಸದ್ಯ ಪ್ರಿಯಕರನಿಗಾಗಿ ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವ ಸೀಮಾ ಹೈದರ್​ ಮೇಲೆ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಈಕೆ ನಿಜವಾಗಿಯೂ ಪ್ರೀತಿಯನ್ನು ಅರಸಿ ಬಂದಿದ್ದಾಳಾ? ಅಥವಾ ಪಾಕಿಸ್ತಾನದ ಏಜೆಂಟ್​ ಇರಬಹುದಾ? ಎಂಬ ಸಂಶಯ ವ್ಯಕ್ತವಾಗಿದ್ದು, ಆಕೆಯ ನಡೆ ದಿನದಿಂದ ದಿನಕ್ಕೆ ನಿಗೂಢತೆಯನ್ನು ಹೆಚ್ಚಿಸುತ್ತಿದೆ. ಈಗಾಗಲೇ ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ಪಡೆ ಸೀಮಾಳನ್ನು ವಿಚಾರಣೆ ನಡೆಸಿದೆ.

ಪಬ್‌ಜೀ ಗೇಮ್ ಮೂಲಕ ಸೀಮಾ ಹೈದರ್ – ಸಚಿನ್ ಮೀನಾ ಸಂಪರ್ಕಕ್ಕೆ ಬಂದರು. ಆನಂತರ ಇಬ್ಬರೂ ಪ್ರೀತಿಯಲ್ಲಿ ಬಿದ್ದರು. ಸಂಗಾತಿ ಸಚಿನ್ ಮೀನಾ ಅವರೊಂದಿಗೆ ವಾಸಿಸಲು ಮೇ ತಿಂಗಳಲ್ಲಿ ನೇಪಾಳದಿಂದ ಬಸ್‌ನಲ್ಲಿ ತನ್ನ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಪ್ರವೇಶಿಸಿದ್ದಳು. ಜುಲೈ 4 ರಂದು ಸೀಮಾ ಹೈದರ್ ಅವರನ್ನು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದಕ್ಕಾಗಿ ಸ್ಥಳೀಯ ಪೊಲೀಸರು ಬಂಧಿಸಿದರು ಮತ್ತು ಅಕ್ರಮ ವಲಸಿಗರಿಗೆ ಆಶ್ರಯ ನೀಡಿದ್ದಕ್ಕಾಗಿ ಸಚಿನ್ ಮೀನಾ ಮತ್ತು ಅವರ ತಂದೆಯನ್ನೂ ಬಂಧಿಸಲಾಗಿತ್ತು.
ಪೊಲೀಸರು ಸೀಮಾ ಅವರಿಂದ ನಾಲ್ಕು ಮೊಬೈಲ್, ಐದು ಪಾಸ್‌ ಪೋರ್ಟ್‌ಗಳು ಹಾಗೂ ಎರಡು ವಿಡಿಯೊ ಕ್ಯಾಸೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಜುಲೈ 7 ರಂದು ಇಬ್ಬರಿಗೂ ಸ್ಥಳೀಯ ನ್ಯಾಯಾಲಯವು ಜಾಮೀನು ನೀಡಿತು.

ಸದ್ಯ ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಬಂದಿರುವ ಈಕೆ ತನ್ನ ಮಕ್ಕಳೊಂದಿಗೆ ಸಚಿನ್ ಅವರೊಂದಿಗೆ ಜೀವನ ನಡೆಸುತ್ತಿದ್ದಾಳೆ. ಅಲ್ಲದೆ, ಈಕೆಯ ನಾಲ್ಕು ಮಕ್ಕಳು ಸಚಿನ್ ಅವರನ್ನೇ ಅಪ್ಪಾ ಅಂತ ಕರೆಯುತ್ತಿದ್ದಾರೆಂದು ಸೀಮಾ ಹೇಳಿಕೊಂಡಿದ್ದಾರೆ. ಗದರ್ ಸಿನಿಮಾದಿಂದ ಸ್ಪೂರ್ತಿ ಪಡೆದು ಪ್ರೀತಿಸಿದ್ದೇವೆ ಎಂದು ಸಚಿನ್ ಮತ್ತು ಸೀಮಾ ಹೇಳಿಕೊಂಡಿದ್ದಾರೆ. ಈ ಪ್ರಕರಣ ಹಲವು ರೀತಿಯ ತಿರುವು ಪಡೆಯುತ್ತಿದ್ದು, ಮುಂದೆ ಏನಾಗಬಹುದು ಎಂಬುದು ತಿಳಿಯಬೇಕಿದೆ.

 

ಇದನ್ನು ಓದಿ: Viral News: ಟೀಮ್ ಇಂಡಿಯಾದಿಂದ ಹೊಟೇಲ್ ನಿಯಮ ಉಲ್ಲಂಘನೆ ; ಆಟಗಾರನ ರೂಂನಲ್ಲಿ ಮಹಿಳೆ? ಮಾಹಿತಿ ಬಹಿರಂಗ ! 

You may also like

Leave a Comment