Home » Joint wheel: ಜಾಯಿಂಟ್ ವೀಲ್ಹ್ ಗೆ ಸಿಲುಕಿಕೊಂಡ ಹುಡುಗಿಯ ತಲೆಕೂದಲು !! ಭಯ ಹುಟ್ಟಿಸೋ ವಿಡಿಯೋ ವೈರಲ್

Joint wheel: ಜಾಯಿಂಟ್ ವೀಲ್ಹ್ ಗೆ ಸಿಲುಕಿಕೊಂಡ ಹುಡುಗಿಯ ತಲೆಕೂದಲು !! ಭಯ ಹುಟ್ಟಿಸೋ ವಿಡಿಯೋ ವೈರಲ್

1 comment
Joint wheel

Joint wheel : ಜಾತ್ರೆಯೆಂದರೆ ಅದು ಸಂಭ್ರಮಿಸಲಿ ಇರುವಂತದ್ದು. ಅಲ್ಲಿ ಹಲವಾರು ಆಟಿಕೆಗಳು, ಆಟವಾಡುವಂತಹ ವಸ್ತುಗಳು, ತಿನಿಸುಗಳು, ಮನೋರಂಜನಾತ್ಮಕ ಕಲೆಗಳು ಬಂದಿರುತ್ತವೆ. ಅಂತೆಯೇ ಹೆಚ್ಚಿನ ಜಾತ್ರೆಗಳಲ್ಲಿ ಎಲ್ಲರ ಗಮನ ಸೆಳೆಯುವಂತದ್ದು ಜಾಯಿಂಟ್ ವೀಲ್ಹ್(Joint wheel) ಗಳ. ಇವುಗಳಲ್ಲಿ ಆದ ಕೆಲವು ಅವಘಡಗಳ ಬಗ್ಗೆ ನಾವು ಈಗಾಗಲೇ ಕೇಳಿದ್ದೇವೆ, ನೋಡಿದ್ದೇವೆ. ಆದರೂ ಹೆಚ್ಚಿನವರಿಗೆ ಇದೇ ಇಷ್ಟ. ಆದರೀಗ ಇಷ್ಟವೆಂದು ಇದರ ಮೇಲೆ ಹತ್ತಿ ಕೂತು ಸಂಕಷ್ಟಕ್ಕೀಡಾಗಿದ್ದಾಳೆ.

ಹೌದು, ಗುಜರಾತ್‌ನ ಹಳ್ಳಿಯೊಂದರ ಜಾತ್ರೆಯಲ್ಲಿ ಜಾಯಿಂಟ್ ವ್ಹೀಲ್‌ನಲ್ಲಿ ಕುಳಿತು ಆಟವಾಡಲು ಮುಂದಾದ ಹುಡುಗಿಯೊಬ್ಬಳ ತಲೆ ಕೂದಲು ಜಾಯಿಂಟ್ ವ್ಹೀಲ್‌ನ ಚಕ್ರಕ್ಕೆ ಸಿಲುಕಿಕೊಂಡಿದ್ದು ಅದೃಷ್ಟವಶಾತ್ ಹುಡುಗಿ ಹೆಚ್ಚೇನು ಆಘಾತವಿಲ್ಲದೇ ಪಾರಾಗಿದ್ದಾಳೆ. ಆದರೀಗ ಈ ಆಘಾತಕಾರಿ ದೃಶ್ಯದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಆಟೋಮೇಟೆಡ್ ಈ ಮನೋರಂಜನಾ ಯಂತ್ರಗಳು ಎಷ್ಟು ಅಪಾಯಕಾರಿ ಎಂಬುದನ್ನು ತೋರಿಸುತ್ತಿದೆ.

ಅಂದಹಾಗೆ ಅಮೇಜಿಂಗ್ ದ್ವಾರಕಾ ಎಂಬ ಇನ್ಸ್ಟಾಗ್ರಾಮ್‌ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವೀಡಿಯೋದಲ್ಲಿ ಜಾಯಿಂಟ್ ವ್ಹೀಲ್ ಏರಿದ ಹುಡುಗಿಯೊಬ್ಬಳು ಕೂದಲನ್ನು ಕಟ್ಟದೇ ಹಾಗೆ ಬಿಟ್ಟಿದ್ದಳು. ಈ ಕೂದಲು ಜಾಯಿಂಟ್ ವ್ಹೀಲ್‌ನ ಚಕ್ರಕ್ಕೆ ಸಿಲುಕಿದ್ದು, ಕೂಡಲೇ ಹುಡುಗಿ ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದ್ದಾಳೆ. ಆಗ ಹುಡುಗಿಯ ಬೊಬ್ಬೆ ಕೇಳಿ ಕೂಡಲೇ ಎರಡು ಸುತ್ತಿನ ನಂತರ ಜಾಯಿಂಟ್ ವ್ಹೀಲ್ ನಿಂತಿದೆ. ಕೂಡಲೇ ಜಾಯಿಂಟ್ ವ್ಹೀಲ್‌ನಲ್ಲಿದ್ದ ಇತರರನ್ನು ಕೆಳಗೆ ಇಳಿಸಿದ್ದಾರೆ.

ಬಳಿಕ 3 ರಿಂದ 4 ಜನ ಯುವಕರು ಜಾಯಿಂಟ್ ವ್ಹೀಲ್‌ಗೆ ಸಿಲುಕಿದ ಹುಡುಗಿಯ ತಲೆಕೂದಲನ್ನು ಅಲ್ಲಿಂದ ಬಿಡಿಸಲು ಮುಂದಾಗಿದ್ದು ಹರಸಾಹಸ ಪಡುತ್ತಿದ್ದಾರೆ. ಮತ್ತೊರ್ವ ಚಾಕುವಿನಿಂದ ಕೂದಲನ್ನು ಕತ್ತರಿಸುವುದನ್ನು ನಾವು ಕಾಣಬಹುದು. ಇನ್ನೂ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆದ ಈ ವಿಡಿಯೋ ಕಂಡು ಭಯಭೀತರಾದ ನೆಟ್ಟಿಗರು ಜಾಗೃತಿಬಗ್ಗೆ ಬಗೆಬಗೆಯಾಗಿ ಕಮೆಂಟ್ ಮಾಡುತ್ತಿದ್ದಾರೆ.

 

ಇದನ್ನು ಓದಿ: Beauty Tips: ಸುಂದರವಾಗಿ ಕಾಣಲು ಬ್ಯೂಟಿ ಪಾರ್ಲರ್ ಗೆ ಹೋಗಬೇಕೆಂದಿಲ್ಲ – ಮನೆಯಲ್ಲೇ ಕೂತು ಹೀಗ್ ಮಾಡಿ, ಕ್ಷಣಾರ್ಧದಲ್ಲಿ ಹಾಲಿನಂತ ಮೃದು ತ್ವಚೆ ಪಡೆಯಿರಿ !

You may also like

Leave a Comment