ಪ್ರೀತಿಗೆ ಕಣ್ಣಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಪ್ರೀತಿಯಲ್ಲಿ ಈ ರೀತಿ ಕುರುಡಾಗಿರಾಗಿರುವುದು ಒಂದು ಘಟನೆಯೊಂದು ನಡೆದಿದೆ. ಹೌದು. ಇಬ್ಬರು ಮಕ್ಕಳ ತಾಯಿಯನ್ನು ಮದುವೆಯಾಗುವುದಾಗಿ ಯುವತಿಯೊಬ್ಬಳು ಹಠ ಹಿಡಿದಿದ್ದ ಉತ್ತರಾಖಂಡದ ಬಾಗೇಶ್ವರದಲ್ಲಿ ಅಚ್ಚರಿಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಯುವತಿಯ ಕುಟುಂಬಸ್ಥರಯ ಮನೆಗೆ ಯುವತಿಗೆ ಸಮಜಾಯಿಷಿ ನೀಡಿದರೂ ಆಕೆ ಹೋಗಲು ಒಪ್ಪಿಕೊಳ್ಳುತ್ತಿಲ್ಲ. ಕೊನೆಗೆ ಠಾಣೆಯಲ್ಲಿ ಭಾರೀ ಗಲಾಟೆ ಉಂಟಾಗಿ, ಗಲಾಟೆಗೆ ಅಪಾರ ಜನರು ಜಮಾಯಿಸಿದ್ದರು. ಸಾಕಷ್ಟು ಪ್ರಯತ್ನದ ನಂತರ ಪೊಲೀಸರು ಅವರನ್ನೆಲ್ಲ ಮನೆಗೆ ಕಳುಹಿಸಿದ್ದಾರೆ.
ಭಾನುವಾರ (ಸೆಪ್ಟೆಂಬರ್ 24) ಸ್ಕೂಟರ್ ನಲ್ಲಿ ಇಬ್ಬರು ಮಹಿಳೆಯರು ಬಾಗೇಶ್ವರ ಪೊಲೀಸ್ ಠಾಣೆಗೆ ತಲುಪಿದ್ದಾರೆ. ಅವರಲ್ಲಿ ಓರ್ವ ಮಹಿಳೆ ಸರ್ಕಾರಿ ಉದ್ಯೋಗಿ ಮತ್ತು ಇನ್ನೊಬ್ಬ ಹುಡುಗಿಗೆ 22 ವರ್ಷ. ನಾವಿಬ್ಬರೂ ನಮ್ಮ ಸ್ವಂತ ಇಚ್ಛೆಯ ಮೇರೆಗೆ ಒಟ್ಟಿಗೆ ವಾಸಿಸಲು ಬಯಸುತ್ತೇವೆ ಮತ್ತು ಮದುವೆಯಾಗಲು ಬಯಸುತ್ತೇವೆ ಎಂದು ಇಬ್ಬರೂ ಪೊಲೀಸರಿಗೆ ತಿಳಿಸಿದ್ದಾರೆ. ಇದಕ್ಕಾಗಿ ಬಾಗೇಶ್ವರ ಪೊಲೀಸರಿಗೆ ಪತ್ರವೊಂದನ್ನು ನೀಡಿದ್ದು, ಅದರಲ್ಲಿ ನಾವಿಬ್ಬರೂ ತುಂಬಾ ಪ್ರೀತಿಸುತ್ತೇವೆ ಮತ್ತು ಮದುವೆಯಾಗಲು ಬಯಸುತ್ತೇವೆ ಎಂದು ಬರೆಯಲಾಗಿತ್ತು. ಇದೇ ವೇಳೆ ಬಾಲಕಿಯ ಪೋಷಕರು ಕೂಡ ಠಾಣೆಗೆ ಆಗಮಿಸಿ ಮಗಳ ಮನವೊಲಿಸಲು ಯತ್ನಿಸಿದ್ದಾರೆ.
ಇಬ್ಬರೂ ಮಹಿಳೆಯರು ಪರಸ್ಪರ ಸಂಬಂಧಿಗಳಾಗಿದ್ದು, ಕಳೆದ ಒಂದು ತಿಂಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಎನ್ನಲಾಗಿದೆ.. ಈ ವಿಷಯ ತಿಳಿದ ಆಕೆಯ ಹೆತ್ತವರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಬಂದರು, ಆದರೆ ಹುಡುಗಿ ಅವರೊಂದಿಗೆ ಹೋಗಲು ನಿರಾಕರಿಸಿದ್ದು, ಯುವತಿಯ ಜೊತೆ ಇದ್ದ ಮಹಿಳೆಗೆ ಈಗಾಗಲೇ ಎರಡು ಮಕ್ಕಳ ತಾಯಿಯಾಗಿದ್ದು, ಆಕೆಯ ಪತಿ ಕೂಡಾ ಸರಕಾರಿ ನೌಕರ ಎನ್ನಲಾಗಿದೆ.
ಯುವತಿಯವರನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದರೂ ಯಾರ ಮಾತನ್ನೂ ಆಕೆ ಕೇಳಲಿಲ್ಲ. ನಂತರ ಈ ನಾಟಕ ಬಹಳ ಕಾಲ ಮುಂದುವರೆಯಿತು. ಸುದೀರ್ಘ ಗದ್ದಲದ ನಂತರ ಪೊಲೀಸರು ಮನೆಗೆ ಹೋಗುವಂತೆ ಹೇಳಿದ್ದು, ಪೋಷಕರೂ ನಿರಾಸೆಯಿಂದ ಹಿಂತಿರುಗಿದ್ದಾರೆ. ಈ ವೇಳೆ ಬಾಗೇಶ್ವರ ಸಿಒ ಅಂಕಿತ್ ಕಂದಾರಿ ಅವರು, ಬಾಲಕಿ ಮತ್ತು ಮಹಿಳೆ ಪ್ರಕರಣದಲ್ಲಿ ಯಾರೂ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ ಎಂದು ಹೇಳಿದ್ದು, ದೂರು ಸ್ವೀಕರಿಸಿದ ನಂತರವೇ ಈ ವಿಷಯದಲ್ಲಿ ಯಾವುದೇ ಕ್ರಮ ಅಥವಾ ತನಿಖೆಯನ್ನು ತೆಗೆದುಕೊಳ್ಳಬಹುದು. ಹುಡುಗಿ ಹಾಗೂ ಮಹಿಳೆಗೆ ಕೌನ್ಸಿಲಿಂಗ್ ಅಗತ್ಯವಿದೆ. ಅದಾದ್ಮೇಲೆ ಮುಂದಿನ ನಿರ್ಧಾರವೆಂದು ಪೊಲೀಸರು ಹೇಳಿದ್ದಾರೆ.
