Tomato Price: ಈಗಾಗಲೇ ಟೊಮೆಟೊ ಬೆಲೆ 150 ರೂಪಾಯಿಯ ಗಡಿ ದಾಟಿದೆ. ಎಲ್ಲಿ ನೋಡಿದರೂ ಟೊಮೆಟೊ ಬೆಲೆ ಏರಿಕೆಯದ್ದೇ (Tomato Price) ಚರ್ಚೆ. ಸದ್ಯಕ್ಕೆ ಹೊಸ ಬೆಳೆ ಬಂದ ಮೇಲೆ ಮಾತ್ರ ಬೆಲೆ ಕಡಿಮೆಯಾಗುವ ಸಂಭವವಿದ್ದು, ಈ ಹೊಸ ಬೆಳೆ ಬರಬೇಕು ಅಂದ್ರೆ, ಒಂದರಿಂದ ಎರಡು ತಿಂಗಳಾದ್ರು ಬೇಕಾಗುತ್ತದೆ. ಹಾಗಾಗಿ ಅಲ್ಲಿಯವರೆಗೂ ಇದೇ ಬೆಲೆ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಇನ್ನು ಟೊಮೆಟೊ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಮಳೆ ಕೊರತೆ, ಟೊಮೆಟೊ ಬೆಳೆಯ ವ್ಯವಸಾಯದ ವೇಳೆ ಮಳೆಯ ಕೊರತೆ ಅಧಿಕವಾಗಿತ್ತು. ಇದೇ ವೇಳೆ ಟೊಮೆಟೊದಲ್ಲಿ ಎಲೆರೋಗವು ಕಾಣಿಸಿಕೊಂಡಿತ್ತು. ಈ ಎರಡು ಪ್ರಮುಖ ಕಾರಣಗಳಿಂದ ಈ ಬಾರಿ ಕಡಿಮೆ ಬೆಳೆ ಬೆಳೆದಿದ್ದಾರೆ. ಅಲ್ಲದೇ ಉತ್ತರ ಪ್ರದೇಶ, ಚತ್ತೀಸ್ ಘಡ್, ಡೆಲ್ಲಿಯಲ್ಲಿಯೂ ಟೊಮೆಟೊ ಬೆಳೆ ಈ ವರ್ಷ ಕಡಿಮೆಯಾಗಿದೆ. ಹೀಗಾಗಿ ಈ ಭಾಗಗಳಿಂದ ನಮ್ಮ ರಾಜ್ಯಕ್ಕೆ ಹೆಚ್ಚಿನ ಬೇಡಿಕೆ ಬಂದಿದೆ. ಒಟ್ಟಿನಲ್ಲಿ ಈ ವರ್ಷ ಟೊಮೆಟೊಗೆ ಹೊರರಾಜ್ಯಗಳಿಂದಲೂ ಅತ್ಯಧಿಕ ಬೇಡಿಕೆ ಇದ್ದು, ಬೇಡಿಕೆಗೆ ತಕ್ಕಂತೆ ಟೊಮೆಟೊ ಸಿಗದ ಕಾರಣ ಹೆಚ್ಚಿನ ಬೆಲೆ ನಿಗಧಿ ಪಡಿಸಿ, ವ್ಯಾಪಾರ ಮಾಡಲಾಗುತ್ತಿದೆ.
ಮುಖ್ಯವಾಗಿ ಪ್ರತೀ ವರ್ಷ ನಮ್ಮ ರಾಜ್ಯಕ್ಕೆ ನಾಸಿಕ್ ನಿಂದ ಟೊಮೆಟೊ ರಫ್ತು ಬರುತ್ತಿತ್ತು. ಆದ್ರೆ, ಈ ಬಾರಿ ನಾಸಿಕ್‌ನಲ್ಲಿಯು ಬೆಳೆ ಬಂದಿಲ್ಲ. ಹೀಗಾಗಿ ನಾಸಿಕ್ ,ತಮಿಳುನಾಡು, ಚೆನ್ನೈ ಗೆ ಕರ್ನಾಟಕದಿಂದ ರಫ್ತು ಮಾಡಲಾಗುತ್ತಿರುವುದು ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ.
ಇನ್ನು ಅಷಾಡ ಮಾಸವಾದ ಜೂನ್ – ಜೂಲೈ ತಿಂಗಳಲ್ಲಿ ಟೊಮೆಟೊ ಹೆಚ್ಚು ಬೆಳೆದು ನಷ್ಟ ಮಾಡಿಕೊಂಡಿದ್ದೆ ಹೆಚ್ಚು. ಟೋಮಾಟೊ ವ್ಯಾಪಾರವಾಗದೇ ರಸ್ತೆಗೆ ಎಸೆದು ಹೋದ ಎಷ್ಟೋ ಘಟನೆಗಳು ಈ ಹಿಂದೆ ನಡೆದಿವೆ. ಹೀಗಾಗಿ ಈ ವರ್ಷ ಈ ರೀತಿಯಾಗಿ ಆಗಬಾರದು ಎನ್ನುವ ಕಾರಣಕ್ಕೆ ರೈತರು ಟೊಮೆಟೊ ವನ್ನು ಹೆಚ್ಚಾಗಿ ಬೆಳೆದಿಲ್ಲ. ಈ ಎಲ್ಲಾ ಕಾರಣದಿಂದ ಟೊಮೆಟೊ ಬೇಡಿಕೆ ಹೆಚ್ಚಾಗಿ, ಬೆಲೆ ಏರಿಕೆಗೆ ಕಾರಣವಾಗಿದೆ.
