Home » Car Discount: ಈ ಮಾಡರ್ನ್ ಕಾರಿನ ಮೇಲೆ ಭರ್ಜರಿ 1 ಲಕ್ಷ ರೂ. ಡಿಸ್ಕೌಂಟ್, ಕಾರು ಕೊಳ್ಳೋರಿಗೆ ಹೊಡೀತ್ ಸ್ಟಾರ್ !

Car Discount: ಈ ಮಾಡರ್ನ್ ಕಾರಿನ ಮೇಲೆ ಭರ್ಜರಿ 1 ಲಕ್ಷ ರೂ. ಡಿಸ್ಕೌಂಟ್, ಕಾರು ಕೊಳ್ಳೋರಿಗೆ ಹೊಡೀತ್ ಸ್ಟಾರ್ !

0 comments
SUV Car

SUV Car: ಜನಪ್ರಿಯ ಕಾರು ತಯಾರಕ ಕಂಪನಿಯಾದ ಹುಂಡೈ ಇದೀಗ ಸೂಪರ್ ಆಫರ್ ನೀಡಲು ಮುಂದಾಗಿದೆ. ಹೌದು, ಇದಪ್ಪಾ ಆಫರ್ ಅಂದ್ರೆ. ಬರೋಬ್ಬರಿ ಒಂದು ಲಕ್ಷ ಡಿಸ್ಕೌಂಟ್ ಆಫರ್ ಇರುವ ಕಾರು ನಿಮಗಾಗಿ ನೀಡಲಿದ್ದಾರೆ.

ಈಗಾಗಲೇ ದಕ್ಷಿಣ ಕೊರಿಯಾದ ಕಾರು ತಯಾರಕ ಕಂಪನಿ ಆಗಿರುವ ಹುಂಡೈ ಭಾರತದಲ್ಲಿ ಸಾಕಷ್ಟು ವಿನೂತನ ಕಾರುಗಳನ್ನು ಬಿಡುಗಡೆ ಮಾಡಿ ಯಶಸ್ವಿ ಪಡೆದಿದೆ.

ಇದೀಗ ಹುಂಡೈ ಕಂಪನಿಯ ಐ 10, ಐ20, Aura, Alcazar, Kona Ev ಮೊದಲಾದ ಕಾರುಗಳು ಫೇಮಸ್ ಆಗಿದ್ದು ಇವುಗಳ ಮೇಲೆ ಹುಂಡೈ ಬಂಪರ್ ರಿಯಾಯಿತಿ ನೀಡುತ್ತಿದೆ. ಜುಲೈ 31ರವರೆಗೆ ಮಾತ್ರ ಈ ಕೊಡುಗೆ ನೀಡಲಾಗುತ್ತಿದ್ದು ವಿನಿಮಯ ಬೋನಸ್, ನಗದು ರಿಯಾಯಿತಿ, ಕಾರ್ಪೋರೇಟ್ ಮೊದಲಾದ ಸೌಲಭ್ಯಗಳು ಒಳಗೊಂಡಿದೆ.

Hyundai Kona EV:
ಹೈ ಎಂಡ್ ಎಲೆಕ್ಟ್ರಿಕ್ ಕೋನ ಇವಿ ಮೇಲೆ ಹುಂಡೈ ಒಂದು ಲಕ್ಷ ರೂಪಾಯಿಗಳ ವರೆಗೆ ನಗದು ರಿಯಾಯಿತಿ ನೀಡುತ್ತಿದೆ. ಈ ಕಾರಿನ ಆರಂಭಿಕ ಬೆಲೆ 25.30 ಲಕ್ಷಗಳಿಂದ ಆರಂಭವಾಗುತ್ತದೆ. ಕೋನ ಇವಿ 452 ಕಿಲೋಮೀಟರ್ ರೇಂಜ್ ಹೊಂದಿದೆ. ಎಡಿಎಎಸ್, ಬ್ಲೈಂಡ್ ಸ್ಪಾಟ್ ಕೊಶನ್ ಅವಾಯ್ಡ್ನೆಸ್ ಅಸಿಸ್ಟ್ ಮೊದಲಾದ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಕಾರಿನಲ್ಲಿ ಐಸಿಇ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ಪವರ್ ಟ್ರೈನ್ ಎಂಜಿನ್ ಆಯ್ಕೆಯನ್ನು ನೀಡಲಾಗಿದೆ.

Hyundai Alcazar ಡಿಸ್ಕೌಂಟ್ :
ವಿಶೇಷವಾಗಿ ಈ ಕಾರಿನಲ್ಲಿ ಪೆಟ್ರೋಲ್ ಡೀಸೆಲ್ ಹಾಗೂ CNG ಆವೃತ್ತಿಯನ್ನು ಕಾಣಬಹುದು. ಈ ಕಾರಿನ ಮೇಲೆ 20 ಸಾವಿರ ಎಕ್ಸ್ಚೇಂಜ್ ಬೋನಸ್ ಹುಂಡೈ ಕಂಪನಿ ನೀಡುತ್ತಿದೆ. ಅದೇ ರೀತಿಯಾಗಿ ಹುಂಡೈ ಗ್ರಾಂಡ್ ಐ10 ನಿಯೋಸ್ ಕಾರಿಗೆ 20,000 ರೂ. ನಗದು ರಿಯಾಯಿತಿ 10,000 ವಿನಿಮಯ ಬೋನಸ್ ಹಾಗೂ 3000 ರೂ. ಗಳ ಕಾರ್ಪೊರೇಟ್ ಡಿಸ್ಕೌಂಟ್ ಲಭ್ಯವಿದೆ. ಇದು 1.2 ಲಿ. ಪೆಟ್ರೋಲ್ ಇಂಜಿನ್ ಹೊಂದಿದ್ದು 83ಪಿಎಸ್ ಪವರ್ ಹಾಗೂ 114 nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

Hyundai Aura ಕಾರಿನ ಮೇಲೆ ಡಿಸ್ಕೌಂಟ್ :
ಈ ಕಾರಿನಲ್ಲಿಯೂ 23 ಸಾವಿರದವರೆಗೆ ರಿಯಾಯಿತಿ ಪಡೆಯಬಹುದು. ಹುಂಡೈ ಅವರ ಕಾಂಪ್ಯಾಕ್ಟ್ ಸೆಡಾನ್ ಕಾರ್ ಆಗಿದ್ದು 10,000 ರೂ. ನಗದು ರಿಯಾಯಿತಿ 10,000 ರೂ. ವಿನಿಮಯ ಬೋನಸ್ ಹಾಗೂ 3000 ರೂ. ಕಾರ್ಪೊರೇಟ್ ರಿಯಾಯಿತಿ ಸಿಗುತ್ತದೆ. ಹುಂಡೈ ನ ಈ ಕಾರಿನಲ್ಲಿ E, S, SX, SX(O) ಈ ನಾಲ್ಕು ರೂಪಾಂತರಗಳನ್ನು ಕಾಣಬಹುದು. 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು ಆರು ಬಣ್ಣಗಳ ಆಯ್ಕೆಯಲ್ಲಿ ಈ ಕಾರು ಲಭ್ಯವಿದೆ. ಎಕ್ಷ ಶೋರೂಮ್ ಪ್ರಕಾರ ಈ ಕಾರಿನ ಆರಂಭಿಕ ಬೆಲೆ 6.63 ಲಕ್ಷ ರೂಪಾಯಿಗಳಿಂದ 8.90 ಲಕ್ಷ ರೂಪಾಯಿಗಳ ವರೆಗೆ ಇದೆ.

ಇನ್ನು ಹುಂಡೈನ ಇತರ SUV ಕಾರುಗಳಾದ ವೆನ್ಯೂ, ಹೊಸ ತಲೆಮಾರಿನ ವೆರ್ನಾ ಮತ್ತು ಕ್ರೆಟಾ ವಾಹನಗಳ ಮೇಲೆ ಯಾವುದೇ ರಿಯಾಯಿತಿಯನ್ನು ಘೋಷಿಸಿಲ್ಲ. ಉಳಿದಂತೆ ಮೇಲೆ ತಿಳಿಸಿದ ಕಾರುಗಳ ಮೇಲೆ ಡಿಸೌಂಟ್ ಲಭ್ಯವಿದ್ದು, ಈ ತಿಂಗಳ ಕೊನೆಯ ಒಳಗೆ ಅದ್ಭುತ ಆಫರ್ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

You may also like

Leave a Comment