Home » Tesla Electric Car: ಇದು ಕಾರ್ ಅಲ್ಲ, ಮಿನಿ ರಾಕೆಟ್ ! ಬರ್ತಾ ಇದೆ ಟೆಸ್ಲಾ ಎಲೆಕ್ಟ್ರಿಕ್ ಕಾರು, ಬೆಲೆ ಜುಜುಬಿ 20 ಲಕ್ಷ !

Tesla Electric Car: ಇದು ಕಾರ್ ಅಲ್ಲ, ಮಿನಿ ರಾಕೆಟ್ ! ಬರ್ತಾ ಇದೆ ಟೆಸ್ಲಾ ಎಲೆಕ್ಟ್ರಿಕ್ ಕಾರು, ಬೆಲೆ ಜುಜುಬಿ 20 ಲಕ್ಷ !

0 comments
Tesla Electric Car

Tesla Electric Car: ಟೆಸ್ಲಾ ಕಂಪನಿಯ ಕಾರು ಭಾರತಕ್ಕೆ ಕಾಲಿಡಲು ಸಜ್ಜಾಗಿದೆ. ಅದ್ಭುತ ವೈಶಿಷ್ಟ್ಯ ಹಾಗೂ ಆಕರ್ಷಣೀಯ ಬಣ್ಣದೊಂದಿಗೆ ಭಾರತೀಯರ ಬಳಿ ಬರುತ್ತಿದೆ. ಅತಿದೊಡ್ಡ ಜನಪ್ರಿಯ ಕಂಪನಿ ಟೆಸ್ಲಾದ ಎಲೆಕ್ಟ್ರಿಕ್ ಕಾರು ಕೇವಲ 20 ಲಕ್ಷಕ್ಕೆ ಲಭ್ಯವಾಗಲಿದೆ.

ಹೌದು, ನೀವು ಕೇವಲ 20 ಲಕ್ಷಕ್ಕೆ ಟೆಸ್ಲಾ ಎಲೆಕ್ಟ್ರಿಕ್ ಕಾರು (Tesla Electric Car) ಖರೀದಿಸಬಹುದು. ಕಡಿಮೆ ಬೆಲೆಗೆ ಹೈಟೆಕ್ ಕಾರು ನಿಮ್ಮದಾಗಿಸಬಹುದು. ಮಿನಿ ರಾಕೆಟ್ ನಂತಿರುವ ಟೆಸ್ಲಾ ಕಾರು ಜುಜುಬಿ 20 ಲಕ್ಷ ರೂ. ಸಿಗಲಿದೆ. ಹೌದು, ಇನ್ಮುಂದೆ ಭಾರತದಲ್ಲಿ ತಯಾರಾಗುವ ಎಲೆಕ್ಟ್ರಿಕ್ ಕಾರಿನ ಬೆಲೆ 20 ಲಕ್ಷ ರೂ. ನಿಂದ ಆರಂಭವಾಗುವ ಸಾಧ್ಯತೆಯಿದೆ.

ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು ಘಟಕ (Electric Car Manufacturing Plant) ನಿರ್ಮಾಣದ ಬಗ್ಗೆ ಎಲಾನ್‌ ಮಸ್ಕ್‌ (Elon Musk) ಮಾಲೀಕತ್ವದ ಟೆಸ್ಲಾ (Tesla) ಕಂಪನಿ ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸುತ್ತಿದೆ.

ವಾರ್ಷಿಕ 5 ಲಕ್ಷ ಎಲೆಕ್ಟ್ರಿಕ್ ವಾಹನ ತಯಾರಿಸುವ ಸಾಮರ್ಥ್ಯದ ಘಟಕ ಸ್ಥಾಪನೆಯ ಬಗ್ಗೆ ಹೂಡಿಕೆಯ ಪ್ರಸ್ತಾಪಕ್ಕಾಗಿ ಟೆಸ್ಲಾ ಭಾರತ ಸರ್ಕಾರದೊಂದಿಗೆ ಚರ್ಚೆಯನ್ನು ಪ್ರಾರಂಭಿಸಿದೆ. ಕಳೆದ ತಿಂಗಳು ಅಮೆರಿಕ ಪ್ರವಾಸದ ಸಂದರ್ಭದಲ್ಲಿ ಮಸ್ಕ್ ಅವರು ಪ್ರಧಾನಿ ಮೋದಿ (PM Narendra Modi) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.

ಈಗಾಗಲೇ ಅಮೆರಿಕ, ಕೆನಡಾ, ಜರ್ಮನಿ, ಚೀನಾ, ಮೆಕ್ಸಿಕೋದಲ್ಲಿ ಟೆಸ್ಲಾ ಕಂಪನಿ ದೊಡ್ಡ ಫ್ಯಾಕ್ಟರಿ ತೆರೆದಿದೆ. ಸದ್ಯ ಇಂಡೋ-ಪೆಸಿಫಿಕ್ ಪ್ರದೇಶದ ದೇಶಗಳಿಗೆ ಭಾರತದಿಂದ (India) ಕಾರುಗಳನ್ನು ರಫ್ತು ಮಾಡಲು ಟೆಸ್ಲಾ ಮುಂದಾಗಿದೆ ಎಂದು ವರದಿಯಾಗಿದೆ.

 

ಇದನ್ನು ಓದಿ: ITR filing: ಬಂದೇ ಬಿಡ್ತು ಹೊಸ ಇನ್ ಕಮ್ ಟ್ಯಾಕ್ಸ್ ರೂಲ್ಸ್, ಇನ್ಮುಂದೆ ಇವರೆಲ್ಲಾ ನಯಾ ಪೈಸಾ ಟ್ಯಾಕ್ಸ್ ಕಟ್ಟಬೇಕಿಲ್ಲ ! ಹೆಂಗೆ ?

You may also like

Leave a Comment