Tomato Price: ದೇಶದ ವಿವಿಧ ಭಾಗಗಳಲ್ಲಿ ಟೊಮ್ಯಾಟೊ ಬೆಲೆಗಳು ಕೆಜಿಗೆ 250 ರೂ.ಗೆ ತಲುಪಿದ್ದು ಕೊಳ್ಳುವ ಜನರಿಗೆ ಬರೆ ಎಳೆದಂತಾಗಿದೆ. ಟೊಮ್ಯಾಟೋ (Tomato) ಬೆಲೆ ಗಗನಕ್ಕೇರುತ್ತಿರುವುದು ರಾಷ್ಟ್ರವ್ಯಾಪಿ ಆತಂಕಕ್ಕೆ ಕಾರಣವಾಗಿದೆ. ಟೊಮ್ಯಾಟೋ ಬೆಲೆಯು ಭಾರತೀಯ ಅಡುಗೆ ಮನೆಗಳ (Indian kitchen) ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಮಧ್ಯೆ ಕೇಂದ್ರ ಸರ್ಕಾರ ಟೊಮೆಟೊ ಗ್ರಾಹಕರಿಗೆ ಭರ್ಜರಿ ಗುಡ್’ನ್ಯೂಸ್ ನೀಡಿದೆ. ಹೌದು, ಇಂದಿನಿಂದ ಟೊಮೆಟೊ ದರ (Tomato Price) ಅಗ್ಗವಾಗಲಿದೆ.
ಕೇಂದ್ರ ಸರ್ಕಾರವು ವಿವಿಧ ಪ್ರದೇಶಗಳಿಂದ ಟೊಮೆಟೊಗಳನ್ನು ಸಂಗ್ರಹಿಸಿ ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿದೆ. ಟೊಮೆಟೋ ಬೆಲೆ ಗಗನಕ್ಕೇರಿರುವಂತೆಯೇ ಸರ್ಕಾರ ಕೆಜಿಗೆ ರೂ. 90 ರಂತೆ ರಿಯಾಯಿತಿ ಬೆಲೆಯಲ್ಲಿ ಟೊಟೊಮೋ ಮಾರಾಟ ಆರಂಭಿಸಿದೆ.
ನಂತರ 80 ರೂಪಾಯಿಗೆ ಇಳಿಸಿದ್ದ ಕೇಂದ್ರ ಸರ್ಕಾರ ಇದೀಗ ಟೊಮೆಟೊ ಬೆಲೆಯನ್ನು ಇನ್ನಷ್ಟು ತಗ್ಗಿಸಿದೆ. ಹೌದು, ಗುರುವಾರದಿಂದಲೇ (ಇಂದು) ಒಂದು ಕಿಲೋ ಟೊಮೆಟೊ 70 ರೂಪಾಯಿಗೆ ಸಿಗಲಿದೆ.
ಕೇಂದ್ರ ಸರ್ಕಾರವು ಜುಲೈ 20 ರಿಂದ ಟೊಮ್ಯಾಟೊವನ್ನು ಕೆಜಿಗೆ 70 ರೂನಂತೆ ಮಾರಾಟ ಮಾಡಲು ಗ್ರಾಹಕ ವ್ಯವಹಾರಗಳ ಇಲಾಖೆಯು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ (NAFED) ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟಕ್ಕೆ (NCCF) ಆದೇಶ ಮಾಡಿದೆ.
ಟೊಮೊಟೊ ಸಗಟು ದರ ಕಳೆದ ಕೆಲವು ದಿನಗಳಿಂದ ತೀವ್ರಗತಿಯಲ್ಲಿ ಏರಿಕೆಯಾಗಿದೆ. ದೇಶದಾದ್ಯಂತ ಟೊಮೆಟೊ ದರವು ಭಾರಿ ಏರಿಕೆಯಾದ್ದರಿಂದ ಕಳೆದ ಶುಕ್ರವಾರದಿಂದ ಕೇಂದ್ರ ಸರ್ಕಾರವು ರಿಯಾಯಿತಿ ದರದಲ್ಲಿ ಟೊಮೆಟೊ ಮಾರಾಟ ಆರಂಭಿಸಿದೆ. ಭಾರತೀಯ ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟ ಮತ್ತು ಭಾರತೀಯ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟಗಳು ಜಂಟಿಯಾಗಿ ಕೇಂದ್ರ ಸರ್ಕಾರದ ಪರವಾಗಿ ಟೊಮೆಟೊ ಮಾರಾಟ ನಡೆಸಲು ಶುರುಮಾಡಿವೆ. ಮೊದಲು ಕೆಜಿಗೆ 90 ರೂ, ಜುಲೈ 16ರಿಂದ ಕೆಜಿಗೆ 80ರಂತೆ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಈ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಿದೆ.
ಜುಲೈ 20 ರಿಂದ, NCCF ಮತ್ತು NAFED ಸಂಸ್ಥೆಗಳು ಟೊಮೆಟೊವನ್ನು ಕೆಜಿಗೆ ಕೇವಲ 70 ರೂಪಾಯಿಗೆ ಮಾರಾಟ ಮಾಡುತ್ತವೆ. ಆಯ್ದ ಕೇಂದ್ರಗಳಲ್ಲಿ ಮಾತ್ರ ಸಬ್ಸಿಡಿ ದರದಲ್ಲಿ ಟೊಮೆಟೊ ಲಭ್ಯವಿದೆ. ಸರಕಾರವೇ ನೇರವಾಗಿ ಮಾರಾಟ ಮಾಡುತ್ತಿದೆ. ಎಎ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ಟೊಮೆಟೊ ಸಿಗಲಿದೆ ಎಂದು ಈ ಸಂಸ್ಥೆಗಳು ಹಿಂದಿನ ದಿನವೇ ಘೋಷಣೆ ಮಾಡುತ್ತಿವೆ.
ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದ ಮಂಡಿಗಳಲ್ಲಿ NCCF, NAFED ಸಂಸ್ಥೆಗಳು ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊಗಳನ್ನು ಸಂಗ್ರಹಿಸಿವೆ. ಮೊದಲು ದೆಹಲಿ-ಎನ್‌ಸಿಆರ್‌ನೊಂದಿಗೆ ಈ ಟೊಮೆಟೊ ಮಾರಾಟ ಮಾಡಿವೆ. ಅದರ ನಂತರ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಟೊಮೆಟೊವನ್ನು ಸಬ್ಸಿಡಿ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಇನ್ನು ಟೊಮೆಟೊ ಬೆಲೆ ಏರಿಕೆಗೆ ಪ್ರಮುಖ ಕಾರಣವೆಂದರೆ ಮಳೆ ಕೊರತೆ, ಟೊಮೆಟೊ ಬೆಳೆಯ ವ್ಯವಸಾಯದ ವೇಳೆ ಮಳೆಯ ಕೊರತೆ ಅಧಿಕವಾಗಿತ್ತು. ಇದೇ ವೇಳೆ ಟೊಮೆಟೊದಲ್ಲಿ ಎಲೆರೋಗವು ಕಾಣಿಸಿಕೊಂಡಿತ್ತು. ಈ ಎರಡು ಪ್ರಮುಖ ಕಾರಣಗಳಿಂದ ಈ ಬಾರಿ ಕಡಿಮೆ ಬೆಳೆ ಬೆಳೆದಿದ್ದಾರೆ. ಅಲ್ಲದೇ ಉತ್ತರ ಪ್ರದೇಶ, ಚತ್ತೀಸ್ ಘಡ್, ಡೆಲ್ಲಿಯಲ್ಲಿಯೂ ಟೊಮೆಟೊ ಬೆಳೆ ಈ ವರ್ಷ ಕಡಿಮೆಯಾಗಿದೆ.
