ದೆಹಲಿ : ದೇಶದ ಇತಿಹಾಸದಲ್ಲಿ ಕರಾಳದಿನವಾಗಿ ಕಂಡಿದ್ದ ಬಾಲಸೋರ್ ರೈಲು ದುರಂತಕ್ಕೆ ಕಾರಣ ಏನೆಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ.
ಸುಮಾರು 290 ಜನರನ್ನು ಬಲಿ ಪಡೆದಿದ್ದ ಒಡಿಶಾದ ಬಾಲಸೋರ್ ರೈಲು ದುರಂತಕ್ಕೆ ಮಾನವ ಲೋಪವೇ ಕಾರಣ ಎಂದು ತನಿಖಾ ವರದಿಯಲ್ಲಿ ಬಹಿರಂಗವಾಗಿದೆ. ತಪ್ಪಾದ ಸಿಗ್ನಲ್ಸ್ ಹಾಗೂ ಸಿಬ್ಬಂದಿ ಅಚಾತುರ್ಯವೇ ಇದಕ್ಕೆ ಕಾರಣ ಎಂದು ತನಿಖಾ ವರದಿಯಲ್ಲಿ ದಾಖಲಾಗಿದೆ.
ರೈಲ್ವೆ ಸುರಕ್ಷತಾ ಆಯೋಗವು ರೈಲ್ವೆ ಮಂಡಳಿಗೆ ಸಲ್ಲಿಸಿದ ಸ್ವತಂತ್ರ ತನಿಖಾ ವರದಿಯಲ್ಲಿ ಇದು ಸಿಗ್ನಲಿಂಗ್ ಲೋಪ, ಜೊತೆಗೆ ಎರಡು ಲೈನ್‌ಗಳನ್ನು ಸಂಪರ್ಕಿಸುವ ವ್ಯವಸ್ಥೆಯಲ್ಲಿ ಆದ ದೋಷದ ಬಗ್ಗೆ ಸಿಬ್ಬಂದಿ ಸ್ಟೇಷನ್ ಮಾಸ್ಟರ್‌ಗೆ ಮಾಹಿತಿ ನೀಡಿಲ್ಲ. ಹೀಗಾಗಿ ಈ ಅಪಘಾತವಾಗಿದೆ.
ರೈಲ್ವೆ ಟ್ರಾಕ್ ಮೇಲ್ವಿಚಾರಕರ ತಂಡ ವೈರಿಂಗ್ ಬದಲಾಯಿಸಿದೆ ಆದರೆ ಮೊದಲಿನಂತೆ ಪುನಸ್ಥಾಪಿಸಲು ವಿಫಲವಾಗಿದೆ, ಈ ಬಗ್ಗೆ ಮೊದಲೇ ಮಾಹಿತಿ ನೀಡಿದ್ದರೆ ಅಪಘಾತ ತಪ್ಪಿಸಬಹುದಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನು ಓದಿ: Election: ಕೊನೆಗೂ ಗ್ರಾಮ ಪಂಚಾಯತ್ ಚುನಾವಣೆ ಡೇಟ್ ಫಿಕ್ಸ್ !! ನಿಮ್ಮೂರಿನ ಚುನಾವಣಾ ದಿನಾಂಕ ಇದೇ ನೋಡಿ !
