Gyanvapi Mosque Survey: ವಾರಣಾಸಿಯ ವಿವಾದಿತ ಜ್ಞಾನವಾಪಿ ಮಸೀದಿಯ ಕುರಿತು ನ್ಯಾಯಾಲಯದ ನಿರ್ಧಾರ ಈಗ ಚರ್ಚೆಗೆ ಕಾರಣವಾಗಿದೆ. ಉತ್ಖನನದಿಂದ ಮಸೀದಿಯ ರಚನೆಗೆ ಹಾನಿಯಾಗುತ್ತದೆ ಎಂದು ಮುಸ್ಲಿಂ ಬಾಂಧವರು ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ ಎಸ್‌ಐ ಯಾವುದೇ ಉತ್ಖನನವನ್ನು ನಿರಾಕರಿಸಿದ್ದು, ಉತ್ಖನನ ಅಗತ್ಯವಿದ್ದರೆ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಮಾಡುತ್ತೇವೆ ಎಂದು ಹೇಳಿದ್ದಾರೆ. ಭಾರತೀಯ ಪುರಾತ್ವ ಇಲಾಖೆಗೆ (ಎಎಸ್‌ಐ) ತನಿಖೆ ನಡೆಸಲು ಅವಕಾಶ ನೀಡಲಾಗಿದೆ. ಆದರೆ ಇಲ್ಲಿ ಎದ್ದಿರುವ ಮುಖ್ಯ ಪ್ರಶ್ನೆ ಏನೆಂದರೆ ಎಎಸ್‌ಐ ತಂಡ ಅಗೆಯದೆ ತನಿಖೆ ನಡೆಸುವುದು ಹೇಗೆ ಎಂಬ ಪ್ರಶ್ನೆ ಎದ್ದಿದೆ.
ಈ ಪ್ರಶ್ನೆಗೆ ಉತ್ತರ ನೀಡಲು ಹಲವು ತಂತ್ರಗಳಿದೆ. ಅಂದರೆ ನೆಲವನ್ನು ಅಗೆಯದೆ ಒಳಗೆ ಅಡಕವಾಗಿರುವ ಸತ್ಯವನ್ನು ಹೇಳುವ ಸಾಮರ್ಥ್ಯವಿದೆ. ಅದಕ್ಕೆ ಅತ್ಯಂತ ನಿಖರವಾದ ಮಾಹಿತಿಯನ್ನು ನೀಡುವ ಸಾಧನದ ಹೆಸರೇ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (Ground Penetrating Radar)
ಈ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ಎಂದರೇನು?
ನೆಲಕ್ಕೆ ನುಗ್ಗುವ ರಾಡಾರ್ ಎಂದು ಇದರ ಅರ್ಥ. ಇದನ್ನು ಪ್ರಪಂಚದಾದ್ಯಂತ ಬಳಸಾಗುತ್ತದೆ. ಎಸ್‌ಐ ಮತ್ತು ಸೇನೆಯು ಭಾರತದಲ್ಲಿ ಇದನ್ನು ಬಳಸುತ್ತಿದೆ. ಹಾಗೆನೇ ಭಾರತದಲ್ಲಿ ಉಳಿದ ಏಜೆನ್ಸಿಗಳು ಅಗತ್ಯವೆನಿಸಿದಾಗ ಇದನ್ನು ಬಳಸಿಕೊಳ್ಳುತ್ತಿದೆ. ಅಷ್ಟು ಮಾತ್ರವಲ್ಲದೇ ಇದರ ಫಲಿತಾಂಶವನ್ನು ನಿಖರವೆಂದು ಕಂಡು ಬಂದಿದೆ. ಈಗ ಎಎಸ್‌ಐ ಅದೇ ತಂತ್ರವನ್ನು ಜ್ಞಾನವಾಪಿಯಲ್ಲಿ ಬಳಸಲಿದೆ.
ಇದರ ಉಪಯೋಗ ಹೇಗೆ ಎಂದರೆ ನೆಲ ಅಗೆಯದೇ ಲ್ಯಾಪ್‌ಟಾಪ್ ಹಾಗೂ ಇತರ ತಾಂತ್ರಿಕ ಉಪಕರಣಗಳ ಸಹಾಯದಿಂದ ನೆಲದೊಳಗೆ ಏನೆಲ್ಲಾ ಅಡಗಿದೆ ಎಂಬುವುದನ್ನು ತಿಳಿಯಬಹುದು. ಚಿತ್ರಗಳ ಮೂಲಕ ಇದು ಅವರಿಗೆ ಕಾಣುತ್ತದೆ. ಸರಳವಾಗಿ ಹೇಳುವುದಾದರೆ ಇದು ನೆಲದೊಳಗೆ ಅಡಗಿರುವ ಸತ್ಯವನ್ನು ಹೊರತರುವ ಒಂದು ರೀತಿಯ ಸ್ಕ್ಯಾನರ್ ಆಗಿದೆ.
ವೈದ್ಯಕೀಯ ವಿಜ್ಞಾನದ ಮೂಲಕ ಹೇಳುವುದಾದರೆ, ಸಿಟಿ ಸ್ಕ್ಯಾನ್ ಮೂಲಕ ರೋಗವನ್ನು ನಿರ್ಣಯಿಸುವ ವಿಧಾನ. ಹೊಟ್ಟೆಯಲ್ಲಿರುವ ಕಲ್ಲು ಅಥವಾ ಭ್ರೂಣದ ಸ್ಥಿತಿಗತಿಗಳನ್ನು ಅಲ್ಟ್ರಾಸೌಂಡ್ ಮೂಲಕ ಹೇಗೆ ಕಂಡು ಹಿಡಿಯಲಾಗುತ್ತದೆಯೋ ಅದೇ ರೀತಿಯಲ್ಲಿ ಈ ರಾಡಾರ್ ನೆಲದೊಳಗಿನ ಸತ್ಯವನ್ನು ತರುತ್ತದೆ.
ಇದನ್ನು ಓದಿ: Bengaluru: ಕಂಪನಿಯಿಂದ ವಜಾಗೊಂಡ ನೌಕರರಿಗೆ ಗುಡ್ ನ್ಯೂಸ್: ಈ ಕಂಪನಿ ಹುಡುಕಿ ಕೊಡುತ್ತೆ ಹೊಸ ಕೆಲಸ !
