Home » Viral News: ರಾತ್ರಿಯೆಲ್ಲಾ ಕ್ಯಾಬ್ ನಲ್ಲಿ ಮಹಿಳೆಯ ಸುತ್ತಾಟ ; ಬೆಳಗಾದರೆ ಬಿಲ್ ಕೊಡಲು ಕ್ಯಾತೆ !

Viral News: ರಾತ್ರಿಯೆಲ್ಲಾ ಕ್ಯಾಬ್ ನಲ್ಲಿ ಮಹಿಳೆಯ ಸುತ್ತಾಟ ; ಬೆಳಗಾದರೆ ಬಿಲ್ ಕೊಡಲು ಕ್ಯಾತೆ !

0 comments
Viral News

Viral News: ಮಹಿಳೆಯೊಬ್ಬರು ಕ್ಯಾಬ್ ನಲ್ಲಿ ರಾತ್ರಿಯೆಲ್ಲಾ ಸುತ್ತಾಡಿ ಕೊನೆಗೆ ಬೆಳಗಾಗೋ ಹೊತ್ತಿಗೆ ಕ್ಯಾಬ್ ಬಿಲ್ ಕೊಡಲು ಕ್ಯಾತೆ ತೆಗೆದಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಜ್ಯೋತಿ ಎಂಬ ಮಹಿಳೆ ಶನಿವಾರ ರಾತ್ರಿ 10 ಗಂಟೆಗೆ ಇರ್ಷಾದ್ ಎಂಬಾತನಿಂದ ಕ್ಯಾಬ್ ಅನ್ನು ಬಾಡಿಗೆಗೆ ಪಡೆದಿದ್ದಾಳೆ. ರಾತ್ರಿಯಿಂದ ಮರುದಿನ ಬೆಳಗ್ಗೆ 11 ಗಂಟೆಯವರೆಗೂ ಸುತ್ತಾಡಿದ್ದೇ ಸುತ್ತಾಡಿದ್ದು. ಬಳಿಕ ಆತನಿಗೆ ಕೊಡಬೇಕಾದ 2,000 ರೂ. ಹಣ ನೀಡದೆ ಸತಾಯಿಸಿದ್ದಾಳೆ.‌ ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ.

ಕ್ಯಾಬ್ ಚಾಲಕನಿಗೆ ಮಹಿಳೆ ಸತಾಯಿಸಿದ್ದಾಳೆ. ಜೊತೆಗೆ ದೊಡ್ಡ ಜಗಳವೇ ಶುರುಮಾಡಿದ್ದಾಳೆ. ಈಕೆಯ ಹೈಡ್ರಾಮಾ ಜೋರಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ. ಅವರೊಂದಿಗೂ ಮಹಿಳೆ ವಾಗ್ವಾದ ಶುರುಮಾಡಿದ್ದಾಳೆ. ಪೊಲೀಸರನ್ನೇ ನೀವೇನು ಹುಚ್ಚರಾ ಎಂದು ಪ್ರಶ್ನಿಸಿದ್ದಾಳೆ.

2017ರಲ್ಲಿ 100 ರೂ. ಕೊಡಲು ಜಗಳ ಮಾಡಿದ್ದ ಈಕೆ, ಶನಿವಾರ ರಾತ್ರಿ ಆಕೆ ಕ್ಯಾಬ್ ಬಿಲ್ 2000 ರೂ.ಗಳನ್ನು ಕೊಡದೆ ಸತಾಯಿಸಿದ್ದಾಳೆ. ಅಲ್ಲದೆ, ಚಾಲಕನ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

 

ಇದನ್ನು ಓದಿ: Uttarpradesh urinate case: ಮತ್ತೊಂದು ಅಮಾನವೀಯ ಘಟನೆ: ಮಲಗಿದ್ದ ವ್ಯಕ್ತಿಯ ಮೇಲೆ ಯುವಕನಿಂದ ಮೂತ್ರ ವಿಸರ್ಜನೆ

You may also like

Leave a Comment