Viral Video: ಗನ್ ಹಿಡಿದು ಜ್ಯುವೆಲರ್ಸ್‌ಗೆ ನುಗ್ಗಿದ ದರೋಡೆಕೋರರಿಗೆ ಗ್ರಾಹಕರೇ ಚೆನ್ನಾಗಿ ಹೊಡೆದು, ಬಡಿದು ಶಾಸ್ತ್ರಿ ಮಾಡಿದ ವಿಡಿಯೋ ಇದೀಗ ವೈರಲ್ (Viral Video) ಆಗಿದೆ. ಇದು ಜೈಪುರದಲ್ಲಿ (Jaipur) ನಡೆದ ಘಟನೆಯಾಗಿದ್ದು, ವಿಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋದಲ್ಲಿ ಜ್ಯುವೆಲ್ಲರಿ ಶಾಪ್‌ಗೆ ಪಿಸ್ತೂಲ್ ಹಿಡಿದು ದರೋಡೆಕೋರ ನುಗ್ಗುತ್ತಿರುವುದು ಕಾಣಬಹುದು. ಈತನನ್ನು ಕಂಡು ಅಲ್ಲಿದ್ದವರು ಒಂದು ಕ್ಷಣ ಬೆಚ್ಚಿಬೀಳುತ್ತಾರೆ. ದರೋಡೆಕೋರ ಗನ್ ತೋರಿಸಿ ಬೆದರಿಸಿ, ಆಭರಣಗಳನ್ನು ದೋಚಲು ಮುಂದಾದಾಗ
ಈ ದರೋಡೆಕೋರನನ್ನು ಅಲ್ಲಿದ್ದವರು ಅರೆಕ್ಷಣದಲ್ಲಿ ನೆಲಕ್ಕೆ ಕೆಡವುತ್ತಾರೆ.
ಆತ ಓಡಿಹೋಗದಂತೆ ಲಾಕ್ ಮಾಡುತ್ತಾರೆ. ಈ ದೃಶ್ಯ ಜ್ಯುವೆಲರ್ಸ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಎಲ್ಲೆಡೆ ವೈರಲ್ ಆಗಿದೆ. ನೆಟ್ಟಿಗರು ಜನರು ದೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
— राजस्थानी ट्वीट (@8PMnoCM) July 1, 2023
ಇದನ್ನು ಓದಿ: Jagadish Shettar: ಕಾಂಗ್ರೆಸ್ ನಿಂದ MLC ಆಗ್ತಿದ್ದಂತೆ ರಾಜಾ ಹುಲಿಗೆ ಶಿಷ್ಯನ ಮೂಲಕವೇ ಶಾಕ್ ಕೊಟ್ಟ ಶೆಟ್ಟರ್
