₹2000 Notes Withdrawn: ನಿಮ್ಮಲ್ಲಿ ಇನ್ನೂ ಕೂಡಾ ಎರಡು ಸಾವಿರ ನೋಟುಗಳಿವೆಯೇ? ಹಾಗಾದರೆ ಕೊನೇ ಕ್ಷಣದ ಗೊಂದಲಗಳು ಉಂಟಾಗುವುದಕ್ಕಿಂತ ಮೊದಲೇ ನೀವು ಇದನ್ನು ಬ್ಯಾಂಕ್‌ನಲ್ಲಿ ಹಾಕಿ ವಿನಿಮಯ ಮಾಡಿಕೊಳ್ಳುವುದು ಉತ್ತಮ.
ಚಲಾವಣೆಯಲ್ಲಿರುವ 2000 ರೂ. ನೋಟುಗಳನ್ನು ಸೆ.30 ಕ್ಕೆ ವಿನಿಮಯ ಮಾಡಲು ಅಂತಿಮ ದಿನವಾಗಿದೆ. ಹಾಗಾಗಿ ಇನ್ನು ಕೇವಲ ನಾಲ್ಕು ದಿನ ಮಾತ್ರ ಉಳಿದಿದ್ದು, ನಿಮ್ಮ ಬಳಿ ಇರುವ 2000 ನೋಟನ್ನು ಕೂಡಲೇ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಆರ್‌ಬಿಐ ಸೂಚಿಸಿದೆ.
ಆರ್‌ಬಿಐ ಠೇವಣಿ ಮಾಡುವುದಕ್ಕೆ ಯಾವುದೇ ನಿರ್ದಿಷ್ಟ ಮಿತಿಯನ್ನು ನಿಗದಿ ಮಾಡಿಲ್ಲ. ಸೆ.30ರ ನಂತರವೂ ನಿಮ್ಮಲ್ಲಿ ಈ ನೋಟುಗಳು ಬಾಕಿ ಉಳಿದಿದ್ದರೆ ಈ ನೋಟು ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಆಗಲೂ ಈ ನೋಟು ಕಾನೂನುಬದ್ಧವಾಗಿಯೇ ಇರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಚಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಆರ್‌ಬಿಐ ಅದನ್ನು ಮರಳಿ ಪಡೆಯುತ್ತದೆ. ಆದರೆ ನೀವು ನಿರ್ದಿಷ್ಟ ಗಡುವಿನೊಳಗೆ ಯಾಕೆ ಇದನ್ನು ಮರಳಿಸಿಲ್ಲ ಎಂಬ ವಿವರಣೆಯನ್ನು ನೀಡಬೇಕು.
ಇದನ್ನು ಓದಿ: Mangaluru: ಆಸ್ಪತ್ರೆಯೊಂದರಲ್ಲಿ ಯುವಕನ ದಾಂಧಲೆ! ಮಹಿಳೆಯ ಮೈಮುಟ್ಟಿ ಅಸಭ್ಯ ವರ್ತನೆ, ಪೊಲೀಸರಿಂದ ಆರೋಪಿಯ ಬಂಧನ!
