Home » Lawyer Jagadeesh : ಜಾತಿ ನಿಂದನೆ ಆರೋಪ- ಲಾಯರ್ ಜಗದೀಶ್ ಅರೆಸ್ಟ್!!

Lawyer Jagadeesh : ಜಾತಿ ನಿಂದನೆ ಆರೋಪ- ಲಾಯರ್ ಜಗದೀಶ್ ಅರೆಸ್ಟ್!!

0 comments

Lawyer Jagadeesh : ಜಾತಿ ನಿಂದನೆ ಆರೋಪದಡಿ ಬೆಂಗಳೂರಿನ ಕೊಡಿಗೇಹಳ್ಳಿ ಠಾಣೆ ಪೋಲೀಸರು ವಕೀಲ ಕೆ.ಎನ್. ಜಗದೀಶ್ ಕುಮಾರ್ ಅವರನ್ನು ಬಂಧಿಸಿದ್ದಾರೆ.

ಮಂಜುನಾಥ್ ಎಂಬುವವರು ನೀಡಿದ್ದ ದೂರಿನ ಮೇರೆಗೆ ಎಫ್​ಐಆರ್​ (FIR) ದಾಖಲು ಮಾಡಲಾಗಿತ್ತು. ಇಂದು (ಆಗಸ್ಟ್ 22) ಬೆಂಗಳೂರಿನಲ್ಲಿ ಲಾಯರ್ ಜಗದೀಶ್ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಕೊಡಿಗೆಹಳ್ಳಿ ಠಾಣೆ ಪೊಲೀಸರಿಂದ ವಕೀಲ ಜಗದೀಶ್ ಅವರ ಬಂಧನ ಆಗಿದೆ. ಅವರನ್ನು ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಂಜುನಾಥ್ ಎಂಬ ವ್ಯಕ್ತಿ ನೀಡಿದ್ದ ದೂರಿನ ಅನ್ವಯ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 ಮತ್ತು 299 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. ಲಾಯರ್ ಜಗದೇಶ್ ಅವರ ಜಾತಿಯ ಕುರಿತ ಈ ರೀತಿಯ
ಹೇಳಿಕೆಗಳು ಸಮಾಜದಲ್ಲಿ ಬಿರುಕು ಮತ್ತು ದ್ವೇಷಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಮಂಜುನಾಥ್ ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಹೀಗಾಗಿ ಈ ಪ್ರಕರಣದ ತನಿಖೆಯನ್ನು ಪೊಲೀಸರು ಪ್ರಾರಂಭಿಸಿದ್ದು, ಆರೋಪದ ಸತ್ಯಾಸತ್ಯತೆಯನ್ನು ಈಗಾಗಲೇ ಪರಿಶೀಲಿಸಿದ್ದಾರೆ.ಆ ಬಳಿಕ ಇಂದು (ಆ.22) ಸಂಜೆ ಕೋಡಿಗೆಹಳ್ಳಿ ಪೊಲೀಸರು ಲಾಯರ್ ಜಗದೀಶ್ ರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಿದ ಬಳಿಕ ಬಂಧನ ಮಾಡುವ ಸಾಧ್ಯತೆ ದಟ್ಟವಾಗಿದೆ.

You may also like