Home » Lawyer Jagadish: ಲಾಯರ್‌ ಜಗದೀಶ್‌, ಮಗ, ಗನ್‌ಮ್ಯಾನ್‌ ಅರೆಸ್ಟ್‌

Lawyer Jagadish: ಲಾಯರ್‌ ಜಗದೀಶ್‌, ಮಗ, ಗನ್‌ಮ್ಯಾನ್‌ ಅರೆಸ್ಟ್‌

0 comments

Bangalore: ಕೊಡಿಗೇಹಳ್ಳಿಯ ಸ್ಥಳೀಯರು ಹಾಗೂ ಲಾಯರ್‌ ಜಗದೀಶ್‌ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಲಾಯರ್‌ ಜಗದೀಶ್‌, ಪುತ್ರ ಹಾಗೂ ಇಬ್ಬರು ಗನ್‌ಮ್ಯಾನ್‌ಗಳನ್ನು ರಾತ್ರಿ ಅರೆಸ್ಟ್‌ ಮಾಡಿದ್ದಾರೆ.

ಜಗದೀಶ್‌ ಅವರು ಗಲಾಟೆಯಲ್ಲಿ ಗಾಯಗೊಂಡಿದ್ದು, ಮೂಗಿನಿಂದ ರಕ್ತ ಬರುತ್ತಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಲೈವ್‌ ಬಂದು ಮಾತನಾಡಿದರು. ಪೊಲೀಸರೇ ಲಾಯರ್‌ ಜಗದೀಶ್‌ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಮೆಡಿಕಲ್‌ ಚೆಕಪ್‌ ಮಾಡಿಸಿ ನಂತರ ಜಗದೀಶ್‌, ಅವರ ಮಗ ಆರ್ಯನ್‌, ಇಬ್ಬರು ಗನ್‌ಮ್ಯಾನ್‌ಗಳನ್ನು ಅರೆಸ್ಟ್‌ ಮಾಡಿದ್ದಾರೆ.

ಇಂದು 11 ಗಂಟೆಯ ಬಳಿಕ ಜಗದೀಶರನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಸ್ಥಳೀಯರ ವಿರುದ್ಧ ಜಗದೀಶ್‌ ದೂರು ನೀಡಿದ್ದು, ಇದಕ್ಕೆ ಪ್ರತಿಯಾಗಿ ಸ್ಥಳೀಯರು ಕೂಡಾ ದೂರು ನೀಡಿದ್ದಾರೆ.

ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ಅಣ್ಣಮ್ಮ ದೇವಿಯ ಉತ್ಸವದ ವಿಚಾರಕ್ಕೆ ಸಂಬಂಧಪಟ್ಟಂತೆ ಲಾಯರ್‌ ಜಗದೀಶ್‌ ಸ್ಥಳೀಯರ ಮಧ್ಯೆ ಗಲಾಟೆಯಾಗಿದೆ. ಯಾವುದೇ ಅನುಮತಿ ಪಡೆಯದೇ ರಸ್ತೆಗೆ ಅಡ್ಡವಾಗಿ ಪೆಂಡಾಲ್‌ ಹಾಕಲಾಗಿದೆ ಎಂದು ವಕೀಲ ಜಗದೀಶ್‌ ಬಿಬಿಎಂಪಿ ಹಾಗೂ ಪೊಲೀಸರಿಗೆ ಎರಡು ದಿನದ ಹಿಂದೆ ದೂರನ್ನು ನೀಡಿದ್ದರು. ಇದಕ್ಕೆ ಕೋಪಗೊಂಡ ಸ್ಥಳೀಯರು ವಕೀಲ ಜಗದೀಶ್‌ ಮನೆ ಬಳಿ ತೆರಳಿ ಗಲಾಟೆ ಮಾಡಿದ್ದರು.

ಜ.23 ರಂದು ನಾಗರಾಜ್‌ ಎನ್ನುವವರ ವಿರುದ್ಧ ಜಗದೀಶ್‌ ದೂರು ನೀಡಿದ್ದರು. ಜಗದೀಶ್‌ ವಿರುದ್ಧ ಪ್ರತಿದೂರು ನೀಡಲಾಗಿದೆ.

You may also like