3
Bengaluru: ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು ಆಡಳಿತ ಪಕ್ಷದ ವೈಫಲ್ಯಗಳಾದ ಪಂಚ ಗ್ಯಾರಂಟಿ ಯೋಜನೆ ಹಣ ಬಿಡುಗಡೆ ವಿಳಂಬ, ಕೆಪಿಎಸ್‌ಸಿ ಗೊಂದಲ, ಪರಿಶಿಷ್ಟರ ಹಣ ಗ್ಯಾರಂಟಿ ಬಳಕೆ ಸೇರಿ ಹಲವು ವಿಚಾರ ಮುಂದಿಟ್ಟುಕೊಂಡು ಪ್ರತಿಪಕ್ಷ ಬಿಜೆಪಿ – ಜೆಡಿಎಸ್ ಜಂಟಿ ಹೋರಾಟಕ್ಕೆ ಈಗಾಗಲೇ ತಯಾರಿಸಿ ನಡೆಸಿದೆ.
ಇದಲ್ಲದೆ ರಾಜ್ಯಪಾಲರಿಗೆ ಕಾನೂನು ಪ್ರಕಾರ ಗೌರವ ಕೊಡದೆ ಅಪಮಾನ ಮಾಡುತ್ತಿರುವ ವಿಚಾರ ಮುಂದಿಟ್ಟುಕೊಂಡು ಶಾಸಕರ ಭವನದಿಂದ ಕಾಲ್ನಡಿಗೆ ಮೂಲಕ ವಿಧಾನಸೌಧ ಪ್ರವೇಶಿಸಲು ಬಿಜೆಪಿ-ಜೆಡಿಎಸ್ ನಿರ್ಧರಿಸಿದ್ದು, ಸದನದ ಒಳಗೆ ಮತ್ತು ಹೊರಗೆ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯತಂತ್ರ ರೂಪಿಸಿದೆ.
