4
Karkala: ಕಾರ್ಕಳ ಪುರಸಭೆಯ ನೂತನ ಮುಖ್ಯಾಧಿಕಾರಿಯಾಗಿ ಲೀನಾ ಬ್ರಿಟ್ಟೋ ಅವರು ಮಾ. 13ರಂದು ಅಧಿಕಾರ ಸ್ವೀಕರಿಸಿದರು. ಮೂಲತಃ ವಿರಾಜಪೇಟೆಯವರಾಗಿರುವ ಲೀನಾ ಬ್ರಿಟ್ಟೋ ಈ ಹಿಂದೆ ಬಂಟ್ವಾಳ ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಪುತ್ತೂರು, ಸುಳ್ಯ ಮೂಡಿಗೆರೆ ಪುರಸಭೆಗಳಲ್ಲಿ ಕಾರ್ಯನಿರ್ವಹಿಸಿದ್ದ ಲೀನಾ ಅವರು ಬಂಟ್ವಾಳ ಪುರಸಭೆಗೆ ಸವಾಲು ಆಗಿದ್ದ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಪರಿಹಾರ ಒದಗಿಸಿದ್ದರು.
ಕಾರ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ರೂಪಾ ಟಿ. ಶೆಟ್ಟಿ ಅವರು ಮೂಡುಬಿದಿರೆ ಸಮುದಾಯ ಸಂಘಟನಾಧಿಕಾರಿಯಾಗಿ ವರ್ಗಾವಣೆ ಹೊಂದಿರುತ್ತಾರೆ. ರೂಪಾ ಶೆಟ್ಟಿ ಅವರು 2021ರ ಮೇ ತಿಂಗಳಿನಲ್ಲಿ ಕಾರ್ಕಳ ಪುರಸಭೆ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
