7
Uttara Kannada: ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ಚಿರತೆ ನುಗ್ಗಿದ ಘಟನೆ ನಡೆದಿದೆ. ಚಿರತೆ ದಾಳಿಯಿಂದ ಮನೆಯ ನಾಯಿ ತಪ್ಪಿಸಿಕೊಂಡಿದೆ.
ಹೌದು, ನಿನ್ನೆ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನನಗೆ ಚಿರತೆ ನುಗಿದ್ದು ಮನೆಯ ಸಿಸಿ ಕ್ಯಾಮೆರಾದಲ್ಲಿ ಚಿರತೆ ನುಗ್ಗಿದ ದೃಶ್ಯ ಸೆರೆಯಾಗಿದೆ. ಕಾಗೇರಿ ಅವರು ಮನೆಯಲ್ಲಿರುವಾಗಲೇ ಘಟನೆ ನಡೆದಿದೆ.
ನಿನ್ನೆ ರಾತ್ರಿ 11 ಗಂಟೆಗೆ ಚಿರತೆ ಆಹಾರ ಅರಸಿಕೊಂಡು ಬಂದಿದೆ. ತೋಟದ ಭಾಗದಿಂದ ನಾಯಿಯನ್ನು ಚಿರತೆ ಅಟ್ಟಿಸಿಕೊಂಡು ಬಂದಿದೆ. ಆದರೆ ನಾಯಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ದೃಶ್ಯಗಳು ಈ ಸಿಸಿ ಕ್ಯಾಮೆರಾ ದಲ್ಲಿ ಸರಿಯಾಗಿದೆ.
