Home » LIC ಯ ಈ ಯೋಜನೆಯಡಿ 45ರೂ. ಹೂಡಿಕೆ ಮಾಡಿ ಪಡೆಯಿರಿ 25ಲಕ್ಷ ರೂ.!

LIC ಯ ಈ ಯೋಜನೆಯಡಿ 45ರೂ. ಹೂಡಿಕೆ ಮಾಡಿ ಪಡೆಯಿರಿ 25ಲಕ್ಷ ರೂ.!

0 comments

ಉಳಿತಾಯ ಎಂಬುದು ಮನುಷ್ಯನ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಇಂದಿನ ದುಬಾರಿ ದುನಿಯಾದಲ್ಲಿ ಉಳಿತಾಯ ಎಂಬುದು ಇಲ್ಲದೆ ಹೋದರೆ ಬದುಕೇ ಕಷ್ಟ ಎನ್ನುವ ಮಟ್ಟಿಗೆ ತಲುಪಿದೆ. ಇಂತಹ ಹೂಡಿಕೆಗಾಗಿಯೇ ಹಲವು ಯೋಜನೆಗಳು ಕೂಡ ಜಾರಿಯಲ್ಲಿದೆ.

ಇಂತಹ ಹಲವು ಹೂಡಿಕೆ ಸಂಸ್ಥೆಗಳಲ್ಲಿ ಭಾರತೀಯ ಜೀವ ನಿಗಮ ಕೂಡ ಒಂದು. ಎಲ್‌ಐಸಿ ಹೂಡಿಕೆ ಮಾಡೋದು ಹೆಚ್ಚು ಸುರಕ್ಷಿತವಾದ್ದರಿಂದ ಹೆಚ್ಚಿನ ಜನರ ಇದರ ಮುಕೇನಾ ಉಳಿತಾಯ ಹೂಡುತ್ತಾರೆ. ಅದರಂತೆ ಎಲ್ ಐಸಿ ಹಲವು ಯೋಜನೆಗಳನ್ನು ರೂಪಿಸಿದೆ. ಇಂತಹ ಯೋಜನೆಗಳಲ್ಲಿ ಜೀವನ ಆನಂದ್ ಪಾಲಿಸಿ ಕೂಡ ಒಂದು. ಈ ಪಾಲಿಸಿಯಲ್ಲಿ 45ರೂ. ಹೂಡಿಕೆ ಮಾಡಿ, ಮೆಚ್ಯೂರಿಟಿ ಬಳಿಕ 25ಲಕ್ಷ ರೂ. ಗಳಿಸಬಹುದು. ಹೌದು. ಈ ಪ್ರಯೋಜನ ಪಡೆಯಲು ನೀವು ಪಾಲಿಸಿಯಲ್ಲಿ 35 ವರ್ಷಗಳ ತನಕ ಪ್ರತಿ ತಿಂಗಳು 1,358ರೂ. ಅಥವಾ ವಾರ್ಷಿಕ 16,300ರೂ. ಹೂಡಿಕೆ ಮಾಡಬೇಕು. ಅಂದ್ರೆ ಪ್ರತಿದಿನ 45ರೂ. ಹೂಡಿಕೆ ಮಾಡಬೇಕು.

ಜೀವನ ಆನಂದ್ ಪಾಲಿಸಿಯಲ್ಲಿ ಭರವಸೆ ನೀಡಿರುವ ಕನಿಷ್ಠ ಮೊತ್ತ 5ಲಕ್ಷ ರೂ. ಆದ್ರೆ ನೀವು 25ಲಕ್ಷ ರೂ. ತನಕ ರಿಟರ್ನ್ ಪಡೆಯಲು ಅವಕಾಶವಿದೆ. ಜೀವನ ಆನಂದ್ ಪಾಲಿಸಿಯಲ್ಲಿ ಹೂಡಿಕೆ ಮಾಡಲು ಆಧಾರ್ ಕಾರ್ಡ್, ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ ಹಾಗೂ ಪ್ಯಾನ್ ಕಾರ್ಡ್ ಮುಖ್ಯವಾಗಿದೆ.

ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ಡೆತ್ ಬೆನಿಫಿಟ್ ಹಾಗೂ ರೈಡರ್ ಬೆನಿಫಿಟ್ ಸೌಲಭ್ಯಗಳನ್ನು ನೀಡುತ್ತವೆ. ಒಂದು ವೇಳೆ ಪಾಲಿಸಿದಾರ ಮೆಚ್ಯುರಿಟಿ ಅವಧಿಗೂ ಮುನ್ನ ಸಾವನ್ನಪ್ಪಿದರೆ, ಪಾಲಿಸಿದಾರನ ನಾಮಿನಿ ಶೇ.125 ರಷ್ಟು ಡೆತ್ ಬೆನಿಫಿಟ್ ಪ್ರಯೋಜನ ಪಡೆಯಲಿದ್ದಾರೆ. ಇನ್ನು ಈ ಯೋಜನೆಯ ರೈಡರ್ ಬೆನಿಫಿಟ್ ಅಪಘಾತದ ಸಂದರ್ಭದಲ್ಲಿ ಮರಣ ಹೊಂದಿದ್ರೆ ಹಾಗೂ ಅಂಗವೈಕಲ್ಯಕ್ಕೆ ತುತ್ತಾದ್ರೆ ವಿಮಾ ಕವರೇಜ್ ಒದಗಿಸುತ್ತದೆ.

You may also like

Leave a Comment