Home » ಲೈಸೆನ್ಸ್ ಇಲ್ಲದೆಯೇ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರ ತೆರೆಯಬಹುದು : ಕೇಂದ್ರದಿಂದ ಮಹತ್ವದ ಸೂಚನೆ

ಲೈಸೆನ್ಸ್ ಇಲ್ಲದೆಯೇ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಕೇಂದ್ರ ತೆರೆಯಬಹುದು : ಕೇಂದ್ರದಿಂದ ಮಹತ್ವದ ಸೂಚನೆ

0 comments

ನವದೆಹಲಿ : ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಲು ಸರಕಾರ ಮತ್ತೊಂದು ಕ್ರಮ ಕೈಗೊಂಡಿದ್ದು ಯಾರು ಬೇಕಾದರೂ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯಬಹುದು. ಇದಕ್ಕೆ ಲೈಸೆನ್ಸ್ ಅಗತ್ಯವಿಲ್ಲ. ಖಾಸಗಿ ಸಂಸ್ಥೆ, ವ್ಯಕ್ತಿಗಳು ಸಾರ್ವಜನಿಕ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರ ತೆರೆಯಲು ಯಾವುದೇ ಲೈಸೆನ್ಸ್ ಪಡೆಯಬೇಕಿಲ್ಲ ಎಂದು ಕೇಂದ್ರ ಸರಕಾರ ಘೋಷಣೆ ಮಾಡಿದೆ.

ಗೃಹಬಳಕೆಯ ವಿದ್ಯುತ್ ದರದಲ್ಲಿಯೇ ಹಾಲಿ ಇರುವ ಸಂಪರ್ಕ ಬಳಸಿಕೊಂಡು ಕಚೇರಿ ಅಥವಾ ಮನೆಗಳಲ್ಲಿ ತಮ್ಮ ವಾಹನ ಚಾರ್ಜ್ ಮಾಡಿಕೊಳ್ಳಲು ವಾಹನ ಮಾಲೀಕರಿಗೆ ಗ್ರೀನ್ ಸಿಗ್ನಲ್ ನೀಡಲಾಗಿದೆ.

ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಘಟಕಗಳನ್ನು ಖಾಸಗಿ ಕಂಪನಿ, ವ್ಯಕ್ತಿಗಳು ತಮ್ಮ ಜಾಗದಲ್ಲಿ ತೆರೆಯಬಹುದು. ಸರಕಾರಕ್ಕೆ ಪ್ರತಿ ಯೂನಿಟ್ ಗೆ ಒಂದು ರೂಪಾಯಿ ನೀಡಿದ್ದಲ್ಲಿ ಸರಕಾರದಿಂದಲೇ ಚಾರ್ಜಿಂಗ್ ಘಟಕ ತೆರೆಯಲು ಜಾಗ ನೀಡಲಾಗುವುದು. ಮನೆ ಅಥವಾ ಕಚೇರಿಗಳಲ್ಲಿ ಈಗ ಇರುವ ವಿದ್ಯುತ್ ದರದಲ್ಲಿಯೇ ಎಲೆಕ್ಟ್ರಿಕ್ ವಾಹನ ಚಾರ್ಜ್ ಮಾಡಿಕೊಳ್ಳಬಹುದು ಎಂದು ವಿದ್ಯುತ್ ಸಚಿವಾಲಯದಿಂದ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

You may also like

Leave a Comment